2:34 PM Wednesday21 - January 2026
ಬ್ರೇಕಿಂಗ್ ನ್ಯೂಸ್
ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ… ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ: ಮಾಜಿ ಸಿಎಂ ಬಸವರಾಜ… ಕಾರು ಚಾಲಕನ ನಿರ್ಲಕ್ಷ್ಯ ಚಾಲನೆ: ಶ್ರಮಜೀವಿ ಶಿವರಾಜಪುರ ರಮೇಶ್ ದಾರುಣ ಸಾವು ಉಡುಪಿ ಪರ್ಯಾಯ: ಸರ್ವಜ್ಞ ಪೀಠ ಅಲಂಕರಿಸಿದ ಶೀರೂರು ಮಠದ ವೇದ ವರ್ಧನ ತೀರ್ಥರು;… 88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲು; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ:… ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ: ಅಜೀಂ ಪ್ರೇಮ್‌ಜಿ ಫೌಂಡೇಷನ್ ಜತೆ ಕೈಜೋಡಿಸಿದ… ಕುಶಾಲನಗರ – ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಅಪಘಾತ: ಕಾಡು ಕುರಿ ಸಾವು,…

ಇತ್ತೀಚಿನ ಸುದ್ದಿ

ಮಂಗಳೂರಿನ ಮುಖ್ಯ ಸಂಚಾರ ನಿಯಮ ಪಾಲಕರಾಗಿ ಸ್ಕ್ವಾಡ್ರನ್ ಲೀಡರ್ ಪ್ರೊ. ಸುರೇಶ್‍ನಾಥ ನೇಮಕ

12/05/2023, 11:27

ಮಂಗಳೂರು(reporterkarnataka.com): ಸ್ಕ್ವಾಡ್ರನ್ ಲೀಡರ್ ಪ್ರೊ.ಎಂಎಲ್, ಸುರೇಶ್‍ನಾಥ ಅವರನ್ನು ಮಂಗಳೂರಿನ ಮುಖ್ಯ ಸಂಚಾರ ನಿಯಮ ಪಾಲಕರನ್ನಾಗಿ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿಂದ ನೇಮಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಸುಪರ್ದಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಚಾರ ನಿಯಮ ಪಾಲಕರ ಸಂಘಟನೆಯು ಇನ್ನು ಮುಂದೆ ಮಂಗಳೂರು ಸಿಟಿ ಪೊಲೀಸ್ ಟ್ರಾಫಿಕ್ ವಾರ್ಡನ್ ಆರ್ಗನೈಸೇಷನ್ ಎಂಬ ಹೊಸ ಗುರುತಿನೊಂದಿಗೆ ಕಾರ್ಯಚರಿಸಲಿದೆ. ಈ ಸಂಘಟನೆಯು ಸೂಕ್ತ ತರಬೇತಿ ಮತ್ತು ನಿರ್ದೇಶನದೊಂದಿಗೆ ಹಾಗೂ ನಗರ ಪೊಲೀಸ್ ವ್ಯವಸ್ಥೆಯ ಸಹಭಾಗಿತ್ವದಲ್ಲಿ ಸಂಚಾರ ವ್ಯವಸ್ಥೆಯ ಸುಗಮಕ್ಕೆ ಸಹಕಾರಿಯಾಗಲಿದೆ.

ಜನರ, ಜನರಿಂದ ಹಾಗೂ ಜನರಿಗಾಗಿ ಎಂಬ ಸಾರ್ವಜನಿಕ ಸಹಕಾರ ಹಾಗೂ ಸಹಭಾಗಿತ್ವದ ವಿಧೇಯದ ಈ ನೂತನ ವ್ಯವಸ್ಥೆಯು ಸುಗಮ ಸಂಚಾರದಲ್ಲಿ ನಿರ್ವಹಣೆಯ ಸವಾಲನ್ನು ನಿಭಾಯಿಸಲಾಗಿದೆ ಸಾರ್ವಜನಿಕರು ಮುಕ್ತ ಮನಸ್ಸು ಹಾಗೂ ನಾಗರಿಕ ಕರ್ತವ್ಯದ ಪ್ರಜ್ಞೆಯೊಂದಿಗೆ ಕೈಜೋಡಿಸಿ ಸಹಕರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡುತ್ತಿದೆ. ಇಂತಹ ಟ್ರಾಫಿಕ್ ವಾರ್ಡನ್ ಆರ್ಗನೈಸೇಷನ್ ನಮ್ಮ ದೇಶದಾದ್ಯಂತ ಎಲ್ಲಾ ಮೆಟ್ರೋಗಳಲ್ಲಿ ಕೆಲಸ ಮಾಡುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಸಾವಿರಕ್ಕೂ ಹೆಚ್ಚು ವಾರ್ಡನ್ ಈ ಸಂಘಟನೆಯಲ್ಲಿ ಸೇರಿ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಸುಮಾರು 750 ಪುರುಷರು ಹಾಗೂ 250 ಮಹಿಳೆಯರಿದ್ದಾರೆ. ಇವರಲ್ಲಿ ಕಾಲೇಜು ಪ್ರೊಫೆಸರ್ ಗಳು ಇಂಜಿನಿಯರಿಗಳು, ಡಾಕ್ಟರ್‍ ಗಳು, ಡಾಕ್ಟರೇಟ್‍ಗಳು, ಬಿಸಿನೆಸ್ ಮಾಡುವರು, ಐಟಿ-ಬಿಟಿ ಕಂಪನಿಯವರು ಹಾಗೂ ಇತರೆ ಎಲ್ಲಾ ಸಮಾಜದ ವರ್ಗದವರಿದ್ದಾರೆ.
ಸ್ವಯಂ ಸೇವೆಯ ತುಡಿತ ಇರುವ ಎಲ್ಲಾ ವರ್ಗದ ಉತ್ಸಾಹ ನಾಗರೀಕರು ಯಾವುದೇ ಫಲಪೇಕ್ಷೆ ಇಲ್ಲದೆ ದಿನಕ್ಕೆ 2 ಗಂಟೆ, ವಾರದಲ್ಲಿ 6 ಗಂಟೆ, ತಿಂಗಳಿಗೆ 24 ಗಂಟೆ (ಕನಿಷ್ಠವಾಗಿ) ಹಾಗೂ ತಿಂಗಳಿಗೆ ಒಂದು ಸಾರಿ 2 ಗಂಟೆಗಳ ಪೇರೆಡ್, ಡ್ರೀಲ್, ಶಾರೀರಿಕ ಕವಾಯಿತು ಮಾಡಲಿ ಇಚ್ಛೆವುಳ್ಳ ಹಾಗೂ ಆರೋಗ್ಯವಂತರು, ಈ ಟ್ರಾಫಿಕ್ ವಾರ್ಡನ್ ಆರ್ಗನೈಸೇಷನ್‍ನಲ್ಲಿ ಭಾಗವಹಿಸುವ ಅವಕಾಶವಿದೆ.
ಆಸಕ್ತರು ಕನಿಷ್ಠ 20 ವರ್ಷದವರಾಗಿರಬೇಕು. ಗರಿಷ್ಠ ಮಿತಿ ಎಂದರೆ ಶಾರೀರಿಕ ಕವಾಯತು ಮಾಡುವಷ್ಟು ಆರೋಗ್ಯವಂತರಾಗಿರಬೇಕು. ಎಸ್.ಎಸ್.ಎಲ್.ಸಿ ಪೂರ್ಣಗಳಿಸಿದ್ದು, ಕನ್ನಡ ಮತ್ತು ಇಂಗ್ಲಿಷ್ ಓದಲು, ಬರೆಯಲು ಬರಬೇಕು.
ಅರ್ಜಿಗಳಿಗೆ ಪೊಲೀಸ್ ಸ್ಟೇಷನ್ ಅಥವಾ 9945875212 ವಾಟ್ಸಾಪ್ ಸಂಖ್ಯೆಗೆ ಮೆಸೇಜ್ ಮಾಡಿ ಪಡೆಯಬಹದು, ಹೆಚ್ಚಿನ ಮಾಹಿತಿಗೆ ಪ್ರೊಫೆಸರ್ ಎಂ.ಎಲ್. ಸುರೇಶನಾಥ, ಫ್ಲಾಟ್ ನಂಬರ್ 14, ಮಮತಾ ರೆಸಿಡೆನ್ಸಿ, ಆನೆಗುಂಡಿ ಒಂದನೇ ಅಡ್ಡ ರಸ್ತೆ, ಬಿಜೈ, ಮಂಗಳೂರು 575004, ಮೊಬೈಲ್ ಸಂಖ್ಯೆ 9945875212 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು