8:04 AM Friday14 - March 2025
ಬ್ರೇಕಿಂಗ್ ನ್ಯೂಸ್
ಎಲ್ಲರೂ ಬುದ್ದಿ ಹೇಳೋರೆ ಇರೋದು; ಹೊಸಬರು ಹಿರಿಯ ಮಾತು ಕೇಳಿ ಕಲಿಯಿರಿ: ನೂತನ… ಮಂಗಳೂರು ಏರ್ ಪೋರ್ಟ್: ಗುಡುಗು ಮಳೆಗೆ ಲ್ಯಾಂಡ್ ಆಗದೆ ವಾಪಸ್ ಹೋದ 3… DCM | ತುಂಗಭದ್ರ ಆಣೆಕಟ್ಟಿನ 27 ಟಿಎಂಸಿ ನೀರಿನ ಸದ್ಬಳಕೆಗೆ ಸರಕಾರ ಕ್ರಮ:… Traffic Jam | ಬೆಂಗಳೂರು ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ರಸ್ತೆ, ಡಬಲ್… Home Minister | ಪೊಲೀಸರು ಸ್ವಂತ ವಾಹನದ ಮೇಲೆ ಪೊಲೀಸ್​ ಎಂದು ಬರೆಸುವಂತಿಲ್ಲ:… ಮಂಗಳೂರಿನ ಆಟೋಗಳಿಗೆ ತಮಿಳುನಾಡು ಮಾದರಿ ಅನುಷ್ಠಾನಗೊಳಿಸಿ: ವಿಧಾನ ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್… Budget Session | ರಾಜ್ಯದ 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ ತಲಾ 10… ಕೆಎಎಸ್ ಮರು ಪರೀಕ್ಷೆ ಕೋರ್ಟ್ ಆದೇಶದ ಮೇಲೆ ಅವಲಂಬಿತವಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Tourism | ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕರಾವಳಿ ಭಾಗದ ಶಾಸಕರ ಜತೆ ಪ್ರತ್ಯೇಕ… ಕರಾವಳಿಗೆ ತಂಪೆರಚಿದ ವರ್ಷಧಾರೆ: ಮಂಗಳೂರಿನಲ್ಲಿ ಸಾಧಾರಣ ಮಳೆ; ಬೆಳ್ತಂಗಡಿಯಲ್ಲಿ ಆಲಿಕಲ್ಲು ಸುರಿಮಳೆ

ಇತ್ತೀಚಿನ ಸುದ್ದಿ

ಪಕ್ಕಲಡ್ಕ ಯುವಕ ಮಂಡಲ ಅಮೃತ ಮಹೋತ್ಸವ: ಏ.29ರಂದು ಉಚಿತ ಅಂಬ್ಯುಲೆನ್ಸ್ ಲೋಕಾರ್ಪಣೆ

26/04/2023, 16:03

ಮಂಗಳೂರು(reporterkarnataka.com): ಪಕ್ಕಲಡ್ಕ ಯುವಕ ಮಂಡಲದ ಅಮೃತ ಮಹೋತ್ಸವ ಅಂಗವಾಗಿ ಏ 29ರಂದು ಉಚಿತ ಅಂಬ್ಯುಲೆನ್ಸ್ ಲೋಕಾರ್ಪಣೆ ನಡೆಯಲಿದೆ.
ಬಜಾಲ್ ಸುತ್ತಮುತ್ತಲಿನ ಗ್ರಾಮದ ಅನಕ್ಷರಸ್ಥ ರೈತ, ಕೂಲಿ ಕಾರ್ಮಿಕರಿಗೆ ಅಕ್ಷರಭ್ಯಾಸ ನೀಡುವ ಒಂದು ಮಹತ್ತರವಾದ ಉದ್ದೇಶವನ್ನಿಟ್ಟುಕೊಂಡ ಬೆರಳೆಣಿಕೆಯ ತರುಣರು ರಾತ್ರಿ ಶಾಲೆಯನ್ನು ಪ್ರಾರಂಭ ಮಾಡುವ ಮೂಲಕ 1953ರಲ್ಲಿ ಪಕ್ಕಲಡ್ಕ ಯುವಕ ಮಂಡಲ ಸಂಸ್ಥೆಯನ್ನು ಸ್ಥಾಪಿಸಿದರು. ಹೀಗೆ ಪ್ರಾರಂಭಗೊಂಡ ಪಕ್ಕಲಡ್ಕ ಯುವಕ ಮಂಡಲವು ಕಳೆದ 70 ವರುಷಗಳಿಂದ ಸ್ಥಳೀಯ ಯುವಜನರನ್ನು ಒಗ್ಗೂಡಿಸಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸದುದ್ದೇಶಗಳನ್ನಿಟ್ಟುಕೊಂಡು ನಿರಂತರ ಜನಪರ ಕೆಲಸವನ್ನು ಮಾಡುತ್ತ ಬಂದ ಕಾರಣಕ್ಕಾಗಿ ಇವತ್ತಿಗೂ ಊರಿನ ಜನರ ಪ್ರೀತಿ ವಿಶ್ವಾಸ ಗಳಿಸಲು ಸಾಧ್ಯವಾಗಿದೆ.
ಪಕ್ಕಲಡ್ಕ ಯುವಕ ಮಂಡಲವು ಊರಿನ ಪ್ರಗತಿಗಾಗಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಧ್ವನಿಯಾಗಿ ತನ್ನ ಸೇವೆಯನ್ನು ನಿರಂತರ ನೀಡುತ್ತಾ ಬಂದಿದ್ದು ಪ್ರತಿವರುಷ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಸರಕಾರದ ವಿವಿಧ ಸವಲತ್ತುಗಳನ್ನು ಜನಸಾಮಾನ್ಯರಿಗೆ ಒದಗಿಸಿಕೊಡುವ, ಶ್ರಮದಾನ, ಕಾನೂನು ನೆರವು ಶಿಬಿರ, ಕಂದಾಯ ಶಿಬಿರ, ಸಾಕ್ಷಾರತಾ ಆಂದೋಲನ, ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ, ಜಿಲ್ಲಾ ಮಟ್ಟದ ಕ್ರೀಡಾಕೂಟಗಳು, ಶಾಲಾ ಕ್ರೀಡಾಕೂಟ, ನಾಟಕ ತರಬೇತಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜನಜಾಗ್ರತಿಯ ಬೀದಿ ನಾಟಕಗಳು, ಉಚಿತ ನೃತ್ಯ ಅಭ್ಯಾಸ ಗಳು, ಕೊರೋನಾ ಕಾಲದಲ್ಲಿ ಆಹಾರ ಕಿಟ್ ಸಹಿತ , ಕೊರೋನಾ ಸೋಂಕಿತ ಮೃತದೇಹಗಳ ಅಂತಿಮ ಸಂಸ್ಕಾರದಂತಹ ಅಪಾಯಕಾರಿ ಕೆಲಸಗಳಲ್ಲೂ ತೊಡಗಿಸಿಕೊಳ್ಳುವ ಜನಮನ್ನಣೆಯನ್ನು ಗಳಿಸಿದೆ.
ಈ ಬಾರಿ 70ನೇ ವರುಷದ ಅಮೃತಮಹೋತ್ಸವದ ನೆನಪಿನಲ್ಲಿ ಇನ್ನಷ್ಟು ಜನಪರ ಕೆಲಸಗಳನ್ನು ಕೈಗೊಳ್ಳುವ ಉದ್ದೇಶದಿಂದ ಸ್ಥಳೀಯ ಆರ್ಥಿಕವಾಗಿ ಹಿಂದುಳಿದ ಅಸಹಾಯಕ ರೋಗಿಗಳನ್ನು ಕೊಂಡೊಯ್ಯಲು ಉಚಿತ ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸುವ ಮಹತ್ವಪೂರ್ಣ ಯೋಜನೆಯನ್ನು ಕೈಗೊಂಡಿದೆ. ಇದೇ ಬರುವ ತಾರೀಕು ಎಪ್ರೀಲ್ 29 ರಂದು ಪಕ್ಕಲಡ್ಕ ಯುವಕ ಮಂಡಲದ ಮೈದಾನದಲ್ಲಿ ಬಹಿರಂಗ ವಾರ್ಷಿಕೋತ್ಸವ ಕಾರ್ಯಕ್ರಮದ ಮೂಲಕ ಲೋಕಾರ್ಪಣೆಗೊಳ್ಳಲಿದೆ. ಇದೇ ವೇಳೆ ಪಿವೈಎಮ್ ಡಾನ್ಸ್ ತರಬೇತಿ ಕೇಂದ್ರ, ಯುವಕ ಮಂಡಲದ ಮಾಜಿ ನಾಯಕ ಕೊರಗಪ್ಪ ಕೊಟ್ಟಾರಿ ಸ್ಮರಣಾರ್ಥ ಗ್ರಂಥಾಲಯ ಉದ್ಘಾಟನೆಗೊಳ್ಳಲಿದೆ ಎಂದು ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷರಾದ ದೀಪಕ್ ಬಜಾಲ್, ಕಾರ್ಯದರ್ಶಿ ಪ್ರೀತೇಶ್ ತಲವಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು