5:12 PM Monday15 - September 2025
ಬ್ರೇಕಿಂಗ್ ನ್ಯೂಸ್
ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ…

ಇತ್ತೀಚಿನ ಸುದ್ದಿ

ಬೇನಾಮಿ ಆಸ್ತಿ ಮತ್ತು ಭೂಸ್ವಾಧೀನಕ್ಕೆ ಸಂಬಂಧಿಸಿದ ದಾಖಲೆ ಅಸಲಿ; ಶಾಸಕ ಕೋಟ್ಯಾನ್ ಮಾನನಷ್ಟ ಮೊಕದ್ದಮೆ ಹೂಡಲಿ: ಮಿಥುನ್ ರೈ ಸವಾಲು

22/04/2023, 10:19

ಮಂಗಳೂರು(reporterkarnataka.com):ಶಾಸಕ ಉಮಾನಾಥ ಕೋಟ್ಯಾನ್ ಅವರ ಬೇನಾಮಿ ಆಸ್ತಿ ಮತ್ತು ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ದಾಖಲೆ ಅಸಲಿಯಾಗಿದ್ದು, ಶಾಸಕರು ಮಾನನಷ್ಟ ಮೊಕದ್ದಮೆ ಹಾಕುವ ಕೆಲಸವನ್ನು ಬೇಗನೆ ಮಾಡಲಿ. ಅವರ ಸವಾಲನ್ನು ಸ್ವೀಕರಿಸಲು ಸಿದ್ದ ಎಂದು ಮೂಡುಬಿದರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪ್ರತಿ ಸವಾಲು ಹಾಕಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಕೃಷಿ ಭೂಮಿಯನ್ನು ಕೈಗಾರಿಕೆಗಾಗಿ ಸ್ವಾಧೀನ ಪಡಿಸಿಕೊಳ್ಳಲು ಸರಕಾರದ ಹಂತದಲ್ಲಿ ನಡೆಸಿರುವ ಪತ್ರಗಳ ದೃಢೀಕೃತ ಪ್ರತಿಗಳನ್ನು ಪಡೆದು ಹೇಳಿಕೆ ನೀಡಿದ್ದೇನೆ ಎಂದರು.
ಆಧಾರ ರಹಿತ ಹೇಳಿಕೆ ನೀಡುವುದಕ್ಕೆ ನನಗೆ ಉಮಾನಾಥ ಕೋಟ್ಯಾನ್ ಅವರ ಮೇಲೆ ಯಾವುದೇ ವೈಯಕ್ತಿ ದ್ವೇಷ ಇಲ್ಲ. ಈ ಬಗ್ಗೆ ಯಾವ ದೈವದ ಮುಂದೆ ಈ ಪ್ರದೇಶದ ಜನರ ಮುಂದೆ ನಮ್ಮ ಮಾತುಗಳನ್ನು ಪುನರುಚ್ಚರಿಸುತ್ತೇವೆ. ನಾವು ಸತ್ಯವನ್ನೇ ಹೇಳುತ್ತಿದ್ದೇವೆ. ಯಾರನ್ನೂ ತೇಜೋವಧೆ ಮಾಡುವ ಅಗತ್ಯ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಕರ್ನಿರೆ, ಅತಿಕಾರಿ ಬೆಟ್ಟು, ಬಳ್ಕುಂಜೆ, ಕೊಲ್ಲೂರು, ಉಳಿಪ್ಪಾಡಿಯಲ್ಲಿ 800 ರಿಂದ 900 ಎಕರೆ ಭೂಮಿ ಕೈಗಾರಿಕಾ ಉದ್ದೇಶಕ್ಕೆ ನೀಡಲು ಜನರು ಸಿದ್ದರಾಗಿದ್ದಾರೆ. ಲಭ್ಯ ವಿರುವ ಈ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲು ಅಂದಿನ ಕೈಗಾರಿಕಾ ಸಚಿವರಾಗಿದ್ದ ಜಗದೀಶ್ ಶೆಟ್ಟರ್ ಅವರಿಗೆ ಬರೆದಿರುವ ಪತ್ರ ಪ್ರತಿಯನ್ನು ಮತ್ತು ಮುಖ್ಯಮಂತ್ರಿ ವತಿಯಿಂದ ಶಾಸಕ ಉಮಾನಾಥ ಕೊಟ್ಯಾನ್ ರಿಗೆ ನೀಡಲಾದ ಟಿಪ್ಪಣಿ ಪ್ರತಿಗಳನ್ನು ಸುದ್ದಿಗೋಷ್ಠಿಯಲ್ಲಿ ಹಾಜರು ಪಡಿಸಿದದರು. ಈ ದಾಖಲೆಗಳನ್ನು ನಕಲಿ ಎಂದು ಉಮಾನಾಥ ಕೋಟ್ಯಾನ್ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.

ಇತ್ತೀಚಿನ ಸುದ್ದಿ

ಜಾಹೀರಾತು