12:54 AM Monday17 - November 2025
ಬ್ರೇಕಿಂಗ್ ನ್ಯೂಸ್
Kodagu | ಪಿರಿಯಾಪಟ್ಟಣ: ಅತ್ತೆ ಮನೆಗೆ ಬಂದು ಈಜಲು ಹೋದ ಬಾಲಕ ನೀರಿನಲ್ಲಿ… Madikeri | ಕಾಡಾನೆ ದಾಳಿಗೆ ಸಿಲುಕಿದ್ದ ಟೀ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ:… ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ಬಿಜೈ ಶ್ರೀಮಂತಿ ಬಾಯಿ ಸ್ಮಾರಕ ಸರಕಾರಿ ಮ್ಯೂಸಿಯಂನಲ್ಲಿ ವಿಶೇಷ ಚಿತ್ರಕಲೆ, ಅಂಚೆ ಚೀಟಿ ಪ್ರದರ್ಶನ

18/04/2023, 21:02

ಮಂಗಳೂರು(reporterkarnataka.com): ವಿಶ್ವ ಪರಂಪರೆ ದಿನಾಚರಣೆಯ ಪ್ರಯುಕ್ತ
ದಕ್ಷಿಣ ಕನ್ನಡ ಜಿಲ್ಲೆಯ ಅಂಚೆ ಚೀಟಿ ಮತ್ತು ನಾಣ್ಯಗಳ ಸಂಗ್ರಹಕಾರರ ಸಮಿತಿ ವತಿಯಿಂದ ನಗರದ ಬಿಜೈ ಶ್ರೀಮಂತಿ ಬಾಯಿ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯದಲ್ಲಿ ವಿಶೇಷ ಚಿತ್ರಕಲೆ ಪ್ರದರ್ಶನ (ದಕ್ಷಿಣ ಕನ್ನಡ ಜಿಲ್ಲೆಯ ಪರಂಪರೆ ಸಂಬಂಧಿತ) ಬೆಳಗ್ಗೆ 10 ರಿಂದ 5.30 ರವರೆಗೆ ಆಯೋಜಿಸಲಾಗಿತು.


ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಡಾ. ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಭಾಕರ ಕಾಮತ್, ಶಿವಕುಮಾರ್, ಸಂತೋಷ್ ಪ್ರಭು, ಮತ್ತು ವೀಣಾ ಶ್ರೀನಿವಾಸ್ ಇವರುಗಳು ಸಮಿತಿಯ ಸದಸ್ಯರಾಗಿದ್ದು ತಮ್ಮ ಸಂಗ್ರಹಣೆಗಳಾದ ವಿಶೇಷ ಅಂಚೆ ಚೀಟಿ, ಗಾಂಧೀಜಿಯವರ ಅಂಚೆ ಲಕೋಟೆಗಳು, ಪಾರಂಪರಿಕ ಗೃಹಬಳಕೆ ಸಾಮಾಗ್ರಿಗಳು, ನಾಣ್ಯಗಳು, ಕರಾವಳಿಯ ಪ್ರಥಮ ಕೈ ಗಡಿಯಾರ ಸಂಗ್ರಹಗಳು, ಕಾವಿಕಲೆಯ ಚಿತ್ರಕಲೆಗಳು, ಹಾಗೂ ಕರಾವಳಿ ಚಿತ್ರ ಕಲಾ ಚಾವಡಿ ಸದಸ್ಯರ ಅಪರೂಪದ ಪಾರಂಪರಿಕ ಚಿತ್ರಕಲೆಗಳ ಪ್ರದರ್ಶನವನ್ನು ಏರ್ಪಡಿಸಿದ್ದರು. ವಿಶೇಷ ಅತಿಥಿಗಳಾದ ಶ್ರೀ ಹರ್ಷ ಎಸ್.ಎಸ್.ಪಿ, ಅಂಚೆ ಇಲಾಖೆ, ಮಂಗಳೂರು ಆಗಮಿಸಿ ಕರ್ನಲ್ ಮಿರಾಜಕರ್ ರವರ ವಿಶೇಷ ಅಂಚೆ ಚೀಟಿ ಲಕೋಟೆಯ ಭಾವಚಿತ್ರವನ್ನು ಕಾರ್ಯನಿರ್ವಹಣಾ ಅಧಿಕಾರಿಯವರ ಸಮ್ಮುಖದಲ್ಲಿ ಬಿಡುಗಡೆ ಗೊಳಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಬ್ಬಂದಿಗಳು, ಅಂಚೆ ಚೀಟಿ ಸಿಬ್ಬಂದಿಗಳು ಮಾಧ್ಯಮದವರು, ವೀಕ್ಷಕರು, ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು. ಈ ಸಂಧರ್ಭದಲ್ಲಿ ವಿಶೇಷವಾಗಿ ಕಾರ್ಯನಿರ್ವಹಣಾ ಅಧಿಕಾರಿಯವರು ಮತದಾನ ಜಾಗೃತಿ ಕುರಿತು ವಿಶೇಷ ಭಾವಚಿತ್ರಗಳನ್ನು ಪ್ರದರ್ಶಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು