4:38 AM Monday7 - July 2025
ಬ್ರೇಕಿಂಗ್ ನ್ಯೂಸ್
ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ಮೂಡಿಗೆರೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಉಂಟಾದ ಬಿರುಗಾಳಿ ಇದೀಗ ಜೆಡಿಎಸ್ ನಲ್ಲಿ!; ಬಿ.ಬಿ. ನಿಂಗಯ್ಯ- ಕುಮಾರಸ್ವಾಮಿ ನಡುವೆ ಟಿಕೆಟ್ ಗೆ ಗುದ್ದಾಟ!!

15/04/2023, 17:31

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮೂಡಿಗೆರೆ ಕ್ಷೇತ್ರದ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಎದ್ದ ಬಿರುಗಾಳಿ ಈಗ ಜನತಾ ದಳದಲ್ಲಿಯೂ ಕಾಣಿಸಿಕೊಂಡಿದೆ. ಬಿಜೆಪಿ ಟಿಕೆಟ್ ವಂಚಿತ ಹಾಲಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಬಿಜೆಪಿ ತೊರೆದು ಜನತಾ ದಳ ಸೇರಿದ್ದಾರೆ. ದಳ ಟಿಕೆಟ್ ಕುಮಾರಸ್ವಾಮಿ ಪಾಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಈ ನಡುವೆ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಬಿ.ಬಿ. ನಿಂಗಯ್ಯ ಎಚ್ಚೆತ್ತುಕೊಂಡಿದ್ದಾರೆ. ಇಬ್ಬರ ನಡುವೆ ಟಿಕೆಟ್ ಗೆ ಗುದ್ದಾಟ ಶುರುವಾಗಿದೆ.
ಎಂ.ಪಿ. ಕುಮಾರಸ್ವಾಮಿ ಅವರು ದಳ ಅಂಗಳಕ್ಕೆ ಜಿಗಿದ ಬೆನ್ನಲ್ಲೇ ನಿಂಗಯ್ಯ ಅವರು ಅಲರ್ಟ್ ಆಗಿದ್ದಾರೆ. ಮಾಧ್ಯಮ ಜತೆ ಶನಿವಾರ ಮಾತನಾಡಿದ ಅವರು, ಮೂಡಿಗೆರೆಯಲ್ಲಿ ಯಶಸ್ವಿಯಾಗಿ ಪಂಚರತ್ನ ಯಾತ್ರೆ ಮಾಡಿದ್ದೇವೆ. ಡಿಸೆಂಬರ್ ನಲ್ಲಿ ಪ್ರಕಟಿಸಿದ 93 ಜನರ ಪಟ್ಟಿಯಲ್ಲಿ ನನ್ನ ಹೆಸರಿತ್ತು.
ನನಗೆ ಬಿ ಫಾರಂ ನೀಡುತ್ತಾರೆಂದು ನನಗೆ ನಂಬಿಕೆ ಇದೆ. ಬಿಜೆಪಿಯ ಕುಮಾರಸ್ವಾಮಿ ಜೆಡಿಎಸ್ ಬಂದಿದ್ದಾರೆ. ಅವರಿಗೆ ಸ್ವಾಗತ. ಕುಮಾರಸ್ವಾಮಿ ಮೊದಲು ಜೆಡಿಎಸ್ ಪಕ್ಷದಲ್ಲಿ ದುಡಿಯಲಿ. ಇಡೀ ಮೂಡಿಗೆರೆ ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯವೂ ಅದೇ ಆಗಿದೆ. ನಿನ್ನೆಯಷ್ಟೆ ಬಂದಿದ್ದಾರೆ, ಅವರು ಮೊದಲು ಪಕ್ಷದ ಸಿದ್ದಾಂತವನ್ನ ತಿಳಿದುಕೊಳ್ಳಲಿ ಎಂದರು.
ಪಕ್ಷಕ್ಕೆ ಬಂದ ಕೂಡಲೇ ಮಣೆ ಹಾಕುವುದು ಸೂಕ್ತವಲ್ಲ. ಜೆಡಿಎಸ್ ಬಿ ಫಾರಂ ನನಗೇ ನೀಡಬೇಕು. ಈಗಾಗಲೇ ಕಷ್ಟಪಟ್ಟ ಕೊಟ್ಯಂತರ ರೂಪಾಯಿ ಖರ್ಚು ಮಾಡಿದ್ದೇನೆ. ನನಗೇ ಬಿ ಫಾರಂ ನೀಡಬೇಕೆಂದು ಮನವಿ ಮಾಡಿದರು.

ಈಗ ಕುಮಾರಸ್ವಾಮಿಗೆ ಟಿಕೆಟ್ ಎಂಬ ಮಾತುಗಳು ಕೇಳಿ ಬರುತ್ತಿದೆ. ಹಾಗಾಗುವುದಿಲ್ಲ ಎಂದು ಭಾವಿಸಿದ್ದೇನೆ, ಎಚ್. ಡಿ. ಕುಮಾರಸ್ವಾಮಿ ನನಗೆ ಬಿ ಫಾರಂ ನೀಡುತ್ತಾರೆ. ನಾನು ಪಕ್ಷಕ್ಕಾಗಿ ದುಡಿದಿದ್ದೇನೆ, ನಾನು ಗೆಲ್ಲುತ್ತೇನೆ, ನನಗೇ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು