1:04 PM Tuesday8 - July 2025
ಬ್ರೇಕಿಂಗ್ ನ್ಯೂಸ್
ತುಂಗಾ ಕಮಾನು ಸೇತುವೆ ಮೇಲೆ ಹರಿಯುತ್ತಿದೆ ನೀರು!: ಹೆದ್ದಾರಿ ಇಂಜಿನಿಯರ್ ಗಳ ಅದ್ಬುತ… ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ…

ಇತ್ತೀಚಿನ ಸುದ್ದಿ

ಕಾಂಗ್ರೆಸ್ 3ನೇ ಪಟ್ಟಿ: ನಿನ್ನೆ ಕೈ ಹಿಡಿದ ಸವದಿಗೆ ಇಂದು ಅಥಣಿ ಟಿಕೆಟ್!; ಮಂಗಳೂರು ದಕ್ಷಿಣದಿಂದ ಕೊನೆಗೂ ಜೆ.ಆರ್. ಲೋಬೊ, ಪುತ್ತೂರಿನಿಂದ ರೈಗೆ ಅವಕಾಶ

15/04/2023, 15:35

ನವದೆಹಲಿ(reporterkarnataka.com): ರಾಜ್ಯ ವಿಧಾನ ಸಭೆ ಚುನಾವಣೆಗೆ ಸಂಬಂಧಿಸಿದ್ದಂತೆ
ಕಾಂಗ್ರೆಸ್ ಪಕ್ಷದ 3ನೇ ಪಟ್ಟಿ ಬಿಡುಗಡೆಯಾಗಿದ್ದು, ಮಂಗಳೂರು ದಕ್ಷಿಣದಿಂದ ಜೆ. ಆರ್. ಲೋಬೊ ಹಾಗೂ ಪುತ್ತೂರು ಕ್ಷೇತ್ರದಿಂದ ಅಶೋಕ್ ಕುಮಾರ್ ರೈ ಅವರಿಗೆ ಟಿಕೆಟ್ ನೀಡಲಾಗಿದೆ. ಮಂಗಳೂರು ಉತ್ತರಕ್ಕೆ ಇನ್ನೂ ನಿರ್ಧಾರವಾಗಿಲ್ಲ.
ಒಟ್ಟು 43 ಮಂದಿಯ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿದೆ. ನಿನ್ನೆ ಕಾಂಗ್ರೆಸ್ ಸೇರಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಅಥಣಿ ಕ್ಷೇತ್ರದಿಂದ ಇಂದು ನಿರಾಯಸವಾಗಿ ಟಿಕೆಟ್ ಲಭಿಸಿದೆ. ಹಾಗೆ ಪುತ್ತೂರು ಕ್ಷೇತ್ರದಿಂದ ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಅಶೋಕ್ ಕುಮಾರ್ ರೈ ಅವರಿಗೆ ಟಿಕೆಟ್ ಲಭಿಸಿದೆ. ಇಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹಾಗೂ ಅಶೋಕ್ ಕುಮಾರ್ ರೈ ಅವರ ನಡುವೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆದಿತ್ತು. ಕೋಲಾರದಿಂದ ಕೊತ್ತೂರು ಮಂಜುನಾಥಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಲ್ಲಿಂದ ಟಿಕೆಟ್ ದೊರೆತಿಲ್ಲ. ಚಿತ್ರನಟಿ ಉಮಾಶ್ರೀ ಅವರಿಗೆ
ತೆರೆದಾಳದಿಂದ ಈ ಬಾರಿ ಟಿಕೆಟ್ ಸಿಕ್ಕಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು