9:02 PM Thursday15 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ರಾಜಧರ್ಮ ರಾಜಕಾರಣ ಮೂಲಕ ಜನಪರ ಆಡಳಿತ ನೀಡಿದ್ದೇನೆ: ಶಾಸಕ ರಾಜೇಶ್ ನಾಯ್ಕ್

13/04/2023, 00:38

ಬಂಟ್ವಾಳ(reporterksrnataka.com):
ಐದು ವರ್ಷಗಳ ಕಾಲ ಶಾಸಕನಾಗಿ ಆಯ್ಕೆಯಾಗಲು ಕಾರಣರಾದ ಕ್ಷೇತ್ರದ ಜನತೆಗೆ ಧನ್ಯವಾದ ನೀಡಿ , ಮುಂದಿನ ಅವಧಿಯಲ್ಲಿ ಬಿಜೆಪಿಯ ಶಾಸಕರೇ ಆಯ್ಕೆಯಾಗುವ ದೃಷ್ಟಿಯಿಂದ ಹಿರಿಯರ ಮತದಾರರ, ಕಾರ್ಯಕರ್ತರ ಆಶೀರ್ವಾದ ಪಡೆಯಲು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ನೀವು ನನ್ನ ಜೊತೆಯಾಗಿ ನಿಂತು ಬೆಂಬಲ ನೀಡಿದರೆ ಅದುವೇ ದೊಡ್ಡ ಶಕ್ತಿ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.
ಕೊಳ್ನಾಡು‌ ಶಕ್ತಿ ಕೇಂದ್ರದ ಮುಂಡಪ್ಪ ಪೂಜಾರಿ ಅವರ ಮನೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ರಾಜಧರ್ಮದ ರಾಜಕಾರಣದ ಮೂಲಕ ಕ್ಷೇತ್ರದಲ್ಲಿ ಸರ್ವರಿಗೂ ಸಮಾನವಾದ ರೀತಿಯ ಜನಪರವಾದ ಆಡಳಿತವನ್ನು ಮಾಡಿದ್ದೇನೆ, ನನ್ನ ಅಧಿಕಾರಕ್ಕೆ ಕ್ಷೇತ್ರದ ಜನತೆ ಹಾಗೂ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಜಿ.ಪಂ.ನಿಕಟಪೂರ್ವ ಸದಸ್ಯ ರವೀಂದ್ರ ಕಂಬಳಿ, ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಪ್ರಮುಖರಾದ ಮಾದವ ಮಾವೆ, ಜಯರಾಮ ಕುಟ್ರಕಲ , ಪುಷ್ಪರಾಜ ಚೌಟ, ಪ್ರಕಾಶ್ ಅಂಚನ್, ಅಭಿಷೇಕ್ ರೈ,ವಿಶ್ವನಾಥ ಪೂಜಾರಿ ಕೋಡಿ, ಗ್ರಾಪಂ ಸದಸ್ಯರಾದ ರಾಜಾರಾಂ ಹೆಗ್ಡೆ ಕುದ್ರಿಯಾ, ಹರೀಶ್ ಕುಡ್ತಮುಗೇರು,ಪ್ರಶಾಂತ್ ಶೆಟ್ಟಿ, ಲೋಹಿತ್ ಕೆಳಗಿನ ಅಗರಿ, ಕೃಷ್ಣಪ್ಪ ಪೂಜಾರಿ ಕುಡ್ತಮುಗೇರು, ಸೌಮ್ಯಲತಾ ಕಾಡುಮಠ, ಅನಿತಾ ಶೆಟ್ಟಿಗಾರ್, ಕಿಶೋರ್ ದೇವಾಡಿಗ, ಶಶಿಕಲಾ ಕುದ್ರಿಯಾ, ಪ್ರಮುಖರಾದ ನಾರಾಯಣ ಶೆಟ್ಟಿ ಕುಲ್ಯಾರು, ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಸೇರ್ಪಡೆ: ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜಗದೀಶ್ ರೈ, ಗ್ರಾಪಂ ಸದಸ್ಯೆ ವಸಂತಿ , ಕಾರ್ಯಕರ್ತೆ ಮೋಹಿನಿ ಕಾಡುಮಠ ಅವರು ಬಿಜೆಪಿ ಪಕ್ಷದ ಸಿದ್ದಾಂತ ಹಾಗೂ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಹಾಗೂ ಶಾಸಕ ರಾಜೇಶ್ ನಾಯ್ಕ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಶಾಸಕ ರಾಜೇಶ್ ನಾಯ್ಕ್ ಅವರು ಬಿಜೆಪಿಯ ಧ್ವಜವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಇತ್ತೀಚಿನ ಸುದ್ದಿ

ಜಾಹೀರಾತು