3:40 AM Wednesday12 - November 2025
ಬ್ರೇಕಿಂಗ್ ನ್ಯೂಸ್
ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ… ಕೇಂದ್ರ ಸರ್ಕಾರದ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ಲಕ್ಷಕ್ಕೂ ಅಧಿಕ ವಂಚನೆ: ಮಡಿಕೇರಿ ನಿವಾಸಿ… Sports | ಖೇಲೋ ಇಂಡಿಯಾ ಮಹಿಳಾ ಹಾಕಿ ಟೂರ್ನಿ: ಕುಶಾಲನಗರದ ದಿಶಾ ನಿಡ್ಯಮಲೆ… ಸದ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ

ಇತ್ತೀಚಿನ ಸುದ್ದಿ

ಟೆಂಡರ್ ಕಮೀಷನ್ ದರ ಫಿಕ್ಸ್ ಮಾಡಿದ ಬಿಜೆಪಿ ಶಾಸಕರ ಆಪ್ತ: ಹಣ ಪಡೆಯುವ ವಿಡಿಯೋ ವೈರಲ್..!

02/04/2023, 20:41

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಕಾಮಗಾರಿ ಟೆಂಡರ್ ಕಮೀಷನ್ ದರ ಫಿಕ್ಸ್ ಮಾಡಿದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಆಪ್ತನ ಹಣ ಎಣಿಸುವ ವೀಡಿಯೊ ವೈರಲ್ ಆಗಿದೆ.
ಅಭಿವೃದ್ಧಿ ಕಾಮಗಾರಿಗಳನ್ನ ಗುತ್ತಿದೆದಾರರಿಗೆ ಕೊಡಿಸಲು ಮಧ್ಯಸ್ತಿಕೆ ವಹಿಸಿ ಕಮೀಷನ್ ದರನ್ನು ಶ್ರೀಮಂತ ಪಾಟೀಲ ಆಪ್ತ ನಾನಾಸಾಹೇಬ್ ಅವತಾಡೆ ಫಿಕ್ಸ್ ಮಾಡುವ ಕುರಿತು ಮಾತುಕತೆಯ ವೀಡಿಯೊ ಬಯಲಾಗಿದೆ.
ಅಥಣಿ ತಾಲೂಕಿನ ಕೆಂಪವಾಡದಲ್ಲಿರುವ ಶ್ರೀಮಂತ ಪಾಟೀಲ ಒಡೆತನದ ಶುಗರ್ ಫ್ಯಾಕ್ಟರಿಯಲ್ಲಿ ದರ ಫಿಕ್ಸ್ ಕುರಿತು ಮಾತುಕತೆ ನಡೆದಿದೆ ಎನ್ನಲಾಗಿದೆ.


ಕಚೇರಿ ಹೊರಗಡೆ ಶಾಸಕರ ಆಪ್ತ ನಾನಾಸಾಹೇಬ್ ಅವರು ಹಣ ಪಡೆಯುವ ದೃಶ್ಯ ಇದೆ. ಬಿಜೆಪಿ ಸರ್ಕಾರದಲ್ಲಿ 40% ಕಮೀಷನ್ ಧಂದೆ ನಡೆಯುತ್ತಿದೆ ಎಂದು ಪ್ರತಿಪಕ್ಷಗಳ ಆರೋಪಕ್ಕೆ ಸಾಕ್ಷಿ ಎಂಬಂತೆ ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಬಿಲ್ಡಿಂಗ್ ಕಾಮಗಾರಿಗೆ ಐದು ಪರ್ಸೆಂಟೇಜ್.
ಜೆಜೆಎಂ ಕಾಮಗಾರಿಗೆ ನಾಲ್ಕು ಪರ್ಸೆಂಟೇಜ್.
ರಸ್ತೆ ಕಾಮಗಾರಿಗೆ ಹತ್ತು ಪರ್ಸೆಂಟೇಜ್ ಎಂದು ಮಾತುಕತೆ ನಡೆದಿದೆ. ಚುನಾವಣೆ ಹೊತ್ತಿನಲ್ಲಿ ಈ ವೀಡಿಯೊ ಬಾರೀ ಸದ್ದು ಮಾಡುತ್ತಿದೆ

ಇತ್ತೀಚಿನ ಸುದ್ದಿ

ಜಾಹೀರಾತು