ಇತ್ತೀಚಿನ ಸುದ್ದಿ
ಜಂಗಮ ಸಮಾಜ ಎಲ್ಲ ಬಾಂಧವರು ಕೈಜೋಡಿಸಿದಾಗ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯ: ಸಿದ್ದ ಬಸವ ಮಹಾಸ್ವಾಮಿಗಳು
28/03/2023, 22:35
ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ಗಚ್ಚಿನ ಹಿರೇಮಠದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ತಾಲೂಕು ಜಂಗಮ ಸಮಾಜ ಸಂಸ್ಥೆ ಉದ್ಘಾಟನಾ ಸಮಾರಂಭ ಸಂಭ್ರಮದಿಂದ ಜರುಗಿತು.
ಬಳಗಾನೂರಿನ ಸಿದ್ಧ ಬಸವ ಮಹಾಸ್ವಾಮಿಗಳು ಮರಿದೇವರ ಮಠ ವೇದಿಕೆಯನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.
ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಿದರೆ ಮುಂದೊಂದು ದಿನ ದೊಡ್ಡ ಸ್ಥಾನದಲ್ಲಿ ಬೆಳೆಯುತ್ತಾರೆ. ಜಂಗಮರಿಗೆ ಸಮಾಜದಲ್ಲಿ ದೊಡ್ಡ ಗೌರವ ಇದೆ. ಅದರ ಜೊತೆಗೆ ಮಕ್ಕಳಿಗೆ ಮನೆಯಲ್ಲಿ ಕುಟುಂಬದವರಿಗೆ ಜಂಗಮರ ಲಿಂಗ ದೀಕ್ಷೆ ಲಿಂಗ ಪೂಜೆ ಪಾದಕ ಪೂಜೆ ಸಂಸ್ಕಾರದಿಂದ ಜೊತೆಗೆ ಉತ್ತಮವಾದ ಶಿಕ್ಷಣ ಕಲಿಸಿದಾಗ ಮಕ್ಕಳು ಮುಂದೆ ಬರಲು ಸಾಧ್ಯ ಎಂದರು.
ಜೀವನದಲ್ಲಿ ಸಾಕಷ್ಟು ಕೆಲಸಗಳು ಇರುತ್ತವೆ. ಅದರ ಜೊತೆಗೆ ಸಂಸ್ಕಾರ ಪುಣ್ಯ ಪ್ರವಚನ ಕೇಳುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ. ಪಂಚಾಚಾರ್ಯರು ಜಂಗಮರಿಗೆ ಸಮಾಜದಲ್ಲಿ ದೊಡ್ಡ ಗೌರವ ಇದೆ. ಅವರ ಮಾರ್ಗದಲ್ಲಿ ನಾವು ನಡೆದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಆಶೀರ್ವಚನ ನೀಡಿದರು.
ವೇದಿಕೆ ಮೇಲೆ ಜಂಗಮ ಜನಗಣತಿಯ ಲಾಂಛನ ಬಿಡುಗಡೆ ಮಾಡಲಾಯಿತು. ತಾಲೂಕು ಅಧ್ಯಕ್ಷರು, ಗೌರವ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪೂಜ್ಯಶ್ರೀಗಳಿಂದ ತಾಲೂಕು ಜಂಗಮ ಸಮಾಜದ ಬಗ್ಗೆ ಸಮಾಜದ ಅಧ್ಯಕ್ಷರಾದ ಘನಮಟ್ಟದಯ ಸಾಲಿಮಠ ಜಂಗಮರು ಹೇಗಿರಬೇಕು, ಜಂಗಮರ ಆಚಾರ ವಿಚಾರಗಳು ಹೇಗಿರಬೇಕು, ಸಮಾಜದಲ್ಲಿ ನಮಗೆ ಎಂಥ ಸ್ಥಾನವಿದೆ ಅದನ್ನು ನಾವು ಕಾಪಾಡಿಕೊಂಡು ಹೋಗಬೇಕು. ಇಂದು ರಾಜ್ಯದಲ್ಲಿ ಬಿಡಿ ಹಿರೇಮಠ್ ಅಧ್ಯಕ್ಷತೆಯಲ್ಲಿ ಸಮಾಜಕ್ಕಾಗಿ ಹೋರಾಟ ನಡೆಯುತ್ತಿದ್ದು, ಮುಂದಿನ ದಿನಮಾನಗಳಲ್ಲಿ ಜಂಗಮ ಸಮಾಜದ ಕುಟುಂಬ ಮಾಹಿತಿ ಪುಸ್ತಕ ವರ ತರಲು ನಿರ್ಧರಿಸಿದ್ದೇವೆ ಆದ್ದರಿಂದ ತಾಲೂಕಿನ ಜಂಗಮ ಬಾಂಧವರಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ ಪ್ರತಿ ಕುಟುಂಬದ ಮಾಹಿತಿ ನಮ್ಮ ಕಾರ್ಯದರ್ಶಿಯಲ್ಲಿ ಬರೆಸಿ ನೊಂದಾಯಿ ನಮ್ಮ ತಾಲೂಕಿನಲ್ಲಿ ನಮ್ಮ ಮನೆಯ ಕುಟುಂಬದವರ ಸದಸ್ಯರ ಯಾವತ್ತು ಅವರ ಮಾಹಿತಿ ಪುಸ್ತಕ ರೂಪದಲ್ಲಿ ಪ್ರಕಟಣೆ ಮಾಡುತ್ತೇವೆ ಎಂದು ಹೇಳಿದರು. ಶ್ರೀಗಳಿಗೆ ಪದಾಧಿಕಾರಿಗಳಿಗೆ ಜಂಗಮಬಾಂಧವರಿಂದ ಸನ್ಮಾನಿಸಲಾಯಿತು. ಪ್ರಸ್ತುತ ಜಂಗಮ ಸಮಾಜದ ಬಂಧುಗಳಲ್ಲಿ ಜಂಗಮ ಆಚಾರ ವಿಚಾರಗಳನ್ನು ಶ್ರೀ ಪ್ರತಿಯೊಬ್ಬರು ಮಕ್ಕಳಿಗೆ ಸಂಸ್ಕಾರ ಕಳಿಸಬೇಕೆಂದು ಸಿದ್ದಲಿಂಗಯ್ಯ ಪಗಡದಿನ್ನಿ ಹಿರೇಮಠ ಮಾತನಾಡಿ ಹೇಳಿದರು. ಅನ್ನಪೂರ್ಣ ಸರಗಣಚಾರಿ ಭಕ್ತಿ ಗೀತೆ ನಡೆಸಿಕೊಟ್ಟರು. ಶ್ರೀಗಳಿಂದ ಪದಾಧಿಕಾರಿಗಳ ಹಸ್ತಾಂತರ ನಡೆಯಿತು. ಪದಾಧಿಕಾರಿಗಳಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಹಾಗೂ ಸೇವಾ ಸಮಿತಿ ಸದಸ್ಯರಿಗೆ ನಮ್ಮ ಸಮಾಜದ ಗುರುತು ಮಡಿ ಪಂಜಿ ಶಾಲು ಹಾಕಿ ಕೊಡುವುದರ ಮುಖಾಂತರ ಶ್ರೀಗಳಿಂದ ಪ್ರತಿಯೊಬ್ಬರಿಗೂ ಆಶೀರ್ವಾದ ಮಾಡಲಾಯಿತು. ಪ್ರತಿಯೊಬ್ಬರು ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮ ನಡೆಸಿಕೊಟ್ಟಿದ್ದು ತುಂಬಾ ಸಂತೋಷದ ವಿಷಯ ಎಂದು ಡಾ. ಪಂಚಾಕ್ಷರಯ್ಯ ಸ್ವಾಮಿ ಕಂಬಳಿ ಕಂಬಳಿ ಮಠ ಹೇಳಿದರು.
ಸಿದ್ದಲಿಂಗಯ್ಯ ಸ್ವಾಮಿ ಸೊಪ್ಪಿಮಠ ಮಠ
ಮಾತನಾಡಿ, ಶ್ರೀಗಳ ಮಾರ್ಗದರ್ಶನಂತೆ ನಡೆದರೆ ಜೀವನ ಪಾವನವಾಗುತ್ತದೆ. ಜಂಗಮ ಬಾಂಧವರಿಗೆ ಸಮಾಜದಲ್ಲಿ ದೊಡ್ಡ ಗೌರವ ಪ್ರತಿಯೊಬ್ಬರು ಅದನ್ನು ಪಾಲಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಷಟಸ್ಥಲ ಬ್ರಹ್ಮಶ್ರೀ ವರ ರುದ್ರಮುನಿ ಶಿವಾಚಾರ್ಯರು ಮಾತನಾಡಿ ಆಶೀರ್ವಚನ ನೀಡಿದರು. ಜಂಗಮಬಾಂಧವರು ಎಲ್ಲರೂ ಒಂದೇ ಎಂಬ ಒಗ್ಗಟ್ಟಿನಿಂದ ಸಾಲಿಮಠ ಸತ್ಯ ಮಠ ಆ ಮಠ ಈ ಮಠ ಎನ್ನಲಾರದೆ ಎಲ್ಲರೂ ನಮ್ಮದು ಎಂದು ಭಾವಿಸಿ ಕೈಜೋಡಿಸಿದಾಗ ಸಮಾಜ ಕಟ್ಟಲು ಸಾಧ್ಯ. ಪ್ರತಿಯೊಬ್ಬರು ನೀವೇ ಅಧ್ಯಕ್ಷರು ನೀವೇ ಪ್ರಧಾನ ಕಾರ್ಯದರ್ಶಿಗಳು ಎನ್ನುವ ಮನೋಭಾವನೆ ನಿಮ್ಮಲ್ಲಿದ್ದಾಗ ಸಮಾಜ ಬೆಳೆಯಲು ಸಾಧ್ಯ ಇಂದು ಇಂಥ ಕಾರ್ಯಕ್ರಮ ಅಚ್ಚುಕಟ್ಟಾದ ಕಾರ್ಯಕ್ರಮ ನೋಡಿ ಬಹಳ ಸಂತೋಷವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಪ್ರತಿಯೊಬ್ಬರು ಗುರುವಿನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಿದರೆ ಜೀವನ ಸಾರ್ಥಕವಾಗುತ್ತದೆ ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿ ಮಕ್ಕಳಿಗೆ ಕುಟುಂಬದವರಿಗೆ ಒಳ್ಳೆ ಸಂಸ್ಕಾರ ಜೊತೆಗೆ ಶಿಕ್ಷಣ ಕೊಡಿಸಿದಾಗ ಸಮಾಜ ಮುಂದೆ ಬರಲು ಸಾಧ್ಯ ಎಂದು ಶ್ರೀಗಳು ಆಶೀರ್ವಚನ ನೀಡಿದರು.
ಕ್ಷೇತ್ರದ ಜಂಗಮಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ಯುವ ಘಟಕ ಮತ್ತು ತಾಲೂಕು ಘಟಕ ಪದಾಧಿಕಾರಿಗಳು ಅತಿಥಿ ಸತ್ಕಾರ ಮಾಡುವುದರ ಮುಖಾಂತರ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸಿದ್ದಲಿಂಗಯ್ಯ ಪಗಡದಿನ್ನಿ, ಹಿರೇಮಠ ಪಂಚಾಕ್ಷರಯ್ಯ ಸ್ವಾಮಿ ಕಂಬಳಿ ಮಠ, ಆದಾಯ ಸ್ವಾಮಿ ಕ್ಯಾತನಹಟ್ಟಿ, ಸಿದ್ದಲಿಂಗಯ್ಯ ಸ್ವಾಮಿ ಸಪ್ಪಿಮಠ ಬಸವರಾಜ ಸ್ವಾಮಿ ಅಸಮಕಲ್ ಘನಮಟ್ಟದಯ ಸಾಲಿಮಠ ವಿರೂಪಾಕ್ಷಯ್ಯ ಸ್ವಾಮಿ ಸಾಲಿ ಮಠ ಅಂತರಗಂಗೆ ಘನಮಟ್ಟದಯ ಸ್ವಾಮಿ ಸಂತೆಕೆಲ್ಲೂರು ಮಲ್ಲಿಕಾರ್ಜುನ ಖ್ಯಾತನಟ್ಟಿ ಮಹೇಶ್ ಕೊಟ್ಟೂರು ಮಠ ನಾಗೇಶ್ ಕಡಾಮಡಿಮಠ ಉದ್ಬಾಳ್ ಶಿವಕುಮಾರಸ್ವಾಮಿ ಪ್ರಧಾನ ಕಾರ್ಯದರ್ಶಿಗಳು ಶರಣಯ್ಯ ಸ್ವಾಮಿ ದಿನ್ನಿಮಠ ಸಂಗಯ್ಯ ವಿರೂಪಾಕ್ಷ ಸ್ವಾಮಿ ಪಾಟೀ ವೀರೇಶ್ ಹಿರೇಮಠ ಮಹಿಳಾ ಅಧ್ಯಕ್ಷರಾದ ಪೂರ್ಣಿಮಾ ಪಾಟೀಲ್ , ಸಂಧ್ಯಾ ಕಡಾಮುಡಿ ಮಠ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.