ಇತ್ತೀಚಿನ ಸುದ್ದಿ
ದ.ಕ. ಜಿಲ್ಲೆ: ಚುನಾವಣಾ ಅಕ್ರಮ ತಡೆಗಟ್ಟುವ ಅಧಿಕಾರಿಯಾಗಿ ಮಂಜುನಾಥ್ ಎಚ್.ಎಸ್. ನೇಮಕ
28/03/2023, 10:27
ಮಂಗಳೂರು(reporterkarnataka.com): ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ 2023ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯನ್ನು ಸುಗಮವಾಗಿ, ಮುಕ್ತವಾಗಿ ಹಾಗೂ ಶಾಂತಿಯುತವಾಗಿ, ಯಾವುದೇ ರೀತಿಯ ಚುನಾವಣಾ ಅಕ್ರಮಗಳು ನಡೆಯದಂತೆ ನಿಗಾವಹಿಸುವ ಚುನಾವಣಾ ಅಕ್ರಮ ತಡೆಗಟ್ಟುವ ಅಧಿಕಾರಿಯನ್ನಾಗಿ, ಆದಾಯ ತೆರಿಗೆ ಇಲಾಖೆಯ ಉಪನಿರ್ದೇಶಕರಾಗಿರುವ ಮಂಜುನಾಥ್ ಎಚ್.ಎಸ್. (ಐ.ಆರ್.ಎಸ್) ಅವರನ್ನು ನೇಮಕ ಮಾಡಲಾಗಿದೆ.
ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ಅಕ್ರಮ ಹಣ ಸಾಗಾಟ, ಅಕ್ರಮ ವಸ್ತುಗಳ ಸಾಗಾಟ ಮತ್ತು ದಾಸ್ತಾನುಗಳು ಹಾಗೂ ಚುನಾವಣಾ ಪ್ರಚೋದನೆಗೆ ಸಂಬಂಧಿಸಿದಂತೆ ಇನ್ನಿತರ ಅಕ್ರಮಗಳು ಕಂಡು ಬಂದಲ್ಲಿ ಸಾರ್ವಜನಿಕರು ಮಂಜುನಾಥ್ ಅವರ ಮೊ: 9353341788 ಸಂಪರ್ಕಿಸಬಹುದು, ಲಿಖಿತವಾಗಿ ದೂರುಗಳಿದ್ದರೆ, ಮಂಜುನಾಥ್ ಎಚ್.ಎಸ್., ಆದಾಯ ತೆರಿಗೆ ಇಲಾಖೆ ಉಪ ನಿರ್ದೇಶಕ, ಆಲ್ಬಕ್ಯೂರ್ ಹೌಸ್, ಫೋರಂ ಫಿಜ್ಜಾ ಮಾಲ್ ಎದುರು, ಪಾಂಡೇಶ್ವರ, ಮಂಗಳೂರು ಹಾಗೂ ಇ-ಮೇಲ್: ಕಳುಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














