10:45 AM Tuesday11 - August 2026
ಬ್ರೇಕಿಂಗ್ ನ್ಯೂಸ್
Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ…

ಇತ್ತೀಚಿನ ಸುದ್ದಿ

ಕಾಟಿಪಳ್ಳ 3ನೇ ವಾರ್ಡ್: 1.70 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ; ಶಾಸಕ ಡಾ. ಭರತ್ ಶೆಟ್ಟಿ ಲೋಕಾರ್ಪಣೆ

27/03/2023, 11:10

ಸುರತ್ಕಲ್(reporterkarnataka.com): ಸುಮಾರು1.70 ಕೋಟಿ ರೂ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕಾಟಿಪಳ್ಳ‌ 3ನೇ ವಾರ್ಡ್‌ನಲ್ಲಿ ಗುದ್ದಲಿ ಪೂಜೆ‌ ಹಾಗೂ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಯನ್ನು ಶಾಸಕ ಡಾ. ವೈ ಭರತ್ ಶೆಟ್ಟಿ ನೆರವೇರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಗಣೇಶಪುರ ಮೈದಾನದ ಬಳಿ ಉದ್ಯಾನವನಕ್ಕೆ ಗುದ್ದಲಿ ಪೂಜೆ, 2 ನೇ ವಿಭಾಗ ಸರಕಾರಿ ಶಾಲೆಯ ಮುಂದುವರಿದ ಕೊಠಡಿ ನಿರ್ಮಾಣಕ್ಕೆ ಗುದ್ದಲಿ‌ ಪೂಜೆ, ಆದರ್ಶ ಯುವಕ‌ ಮಂಡಲ(ರಿ) ಕಟ್ಟಡ ಮೇಲ್ವಾಚಾವಣಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮತ್ತು ಆದಿಶಕ್ತಿ ದೇವಸ್ಥಾನ ದಿಂದ ಹಿಂದೂ ರುದ್ರಭೂಮಿಯ ಮುಖ್ಯರಸ್ತೆಯ ಕಾಂಕ್ರೀಟಿಕರಣದ ಲೋಕಾರ್ಪಣೆ, ಕಾಟಿಪಳ್ಳ‌ ಹಿಂದೂ‌ ರುದ್ರಭೂಮಿಯ ಲೋಕಾರ್ಪಣೆ ಮಾಡಲಾಗಿದೆ ಎಂದು ತಿಳಿಸಿದರು.
ಮೇಯರ್ ಜಯಾನಂದ ಅಂಚನ್‌, ಕಾಟಿಪಳ್ಳ‌ 3ನೇ ವಾರ್ಡ್ ಮನಪಾ ಸದಸ್ಯರಾದ ಲೋಕೇಶ್ ಬೊಳ್ಳಾಜೆ, 6ನೇ ವಾರ್ಡ್ ಮನಪಾ ಸದಸ್ಯರಾದ ಸರಿತಾ ಶಶಿಧರ್ , ಬಿಜೆಪಿ ಉತ್ತರ ಮಂಡಲ ಅಧ್ಯಕ್ಷರಾದ ತಿಲಕ್‌ರಾಜ್ ಕೃಷ್ಣಾಪುರ, ಅ.ಭಾ.ಸೇ.ಟ್ರಸ್ಟ್ ನ ಅಧ್ಯಕ್ಷ
ಜಯಕುಮಾರ್, ಹಿಂದು ರುದ್ರಭೂಮಿ ನವೀಕರಣ ಸಮಿತಿ ಸದಸ್ಯರು, ಪಂಚಾಯತ್ ಸದಸ್ಯರಾದ ನವಿನ್ ಶೆಟ್ಟಿ ಮತ್ತು ಪದ್ಮನಾಭ ಸಾಲ್ಯಾನ್ ಹಾಗೂ ವಿವಿಧ‌ ಜವಾಬ್ದಾರಿಯುತ ಮಂಡಲ ಪ್ರಮುಖರು, ಶಕ್ತಿಕೇಂದ್ರ ಪ್ರಮುಖರು, ವಾರ್ಡ್ ಪ್ರಮುಖರು, ಬೂತ್ ಪ್ರಮುಖರು, ಪಕ್ಷದ ಕಾರ್ಯಕರ್ತರು, ಊರಿನ ಜವಬ್ದಾರಿಯುತ ನಾಗರಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು