5:12 PM Sunday30 - November 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕ್ರಿಕೆಟ್ ಗೆ ಸಮಾನವಾಗಿ ದೇಶಿ ಕ್ರೀಡೆ ಕಬಡ್ಡಿ ಬೆಳೆಯುತ್ತಿದೆ: ಬೂಕನಕೆರೆಯಲ್ಲಿ ಎಚ್.ಟಿ. ಮಂಜು

24/03/2023, 23:33

ಮನು ಮಾಕವಳ್ಳಿ ಕೆ. ಆರ್. ಪೇಟೆ ಮಂಡ್ಯ

info.reporterkarnataka@gmail.com

ಕ್ರಿಕೆಟ್‌ಗೆ ಸಮಾನವಾಗಿ ದೇಶಿ ಕ್ರೀಡೆ ಕಬಡ್ಡಿ ಬೆಳೆಯುತ್ತಿದೆ. ಮೊದಲು ಆಟು ಆಡುವರಿಗೆ ಪಾಲಕರು ಬೈಯುತ್ತಿದ್ದರು. ಆದರೆ ಇಂದು ಆಟದಲ್ಲಿ ಮುಂದೆ ಬರುವವರಿಗೆ ದೇಶದಲ್ಲಿ ಉತ್ತಮ ಗೌರವವಿದೆ ಎಂದು ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ಎಚ್. ಟಿ. ಮಂಜು ಹೇಳಿದರು.
ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಕೂಡಲಕುಪ್ಪೆ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಹಾಗೂ ಗೆಳೆಯ ಅಭಿ (ಚಿಂಟು) ರವರ ಸವಿ ನೆನಪಿಗಾಗಿ ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವಕರು ಗ್ರಾಮೀಣ ಭಾಗದ ಕ್ರೀಡೆಯಾದ ಕಬಡ್ಡಿ ಪಂದ್ಯಾವಳಿಯನ್ನು ಈ ಸುಂದರ ವಾತಾವರಣದಲ್ಲಿ ಆಯೋಜಿಸಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಆಟಗಾರರಿಗೆ ಕರೆಸಿ ಅವರ ಪ್ರತಿಭೆಗಳನ್ನು ಕೂಡ ಗುರುತಿಸುವ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ. ಇತ್ತೀಚಿನ ದಿನಗಳಲ್ಲಿ ಕ್ರೀಡೆಗೆ ತನ್ನದೇ ಆದಂತಹ ಮಹತ್ವವನ್ನು ಪಡೆದುಕೊಂಡಿದೆ. ಕೇವಲ ಅವರು ಓದಿನೊಂದಿಗೆ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂಬಂತಹ ಸ್ಥಿತಿ ಈಗ ಇಲ್ಲ. ಕ್ರೀಡೆಯಲ್ಲಿಯೂ ಕೂಡ ಉತ್ತಮ ಸಾಧನೆ ಮಾಡಿ ಇದು ರಾಜ್ಯ ಮತ್ತು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಕೀರ್ತಿ ಮತ್ತು ಗೌರವವನ್ನು ಸಂಪಾದಿಸುವಂತಹ ಕೆಲಸಗಳಾಗುತ್ತವೆ ಎಂದು ಮಂಜು ಹೇಳಿದರು.

ಬಳಿಕ ಮಾತನಾಡಿದ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್, ಪ್ರತಿ ಗ್ರಾಮದಲ್ಲಿಯೂ ಕೂಡ ಈ ರೀತಿ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವ ಮೂಲಕ ಗ್ರಾಮೀಣ ಭಾಗದ ಯುವ ಪ್ರತಿಭೆಗಳಿಗೆ ಒಂದು ವೇದಿಕೆಯನ್ನು ಸೃಷ್ಟಿಸಿ ಅವರನ್ನು ಕೂಡ ಹೊರಜಗತ್ತಿಗೆ ಗುರುತಿಸುವ ಕೆಲಸ ಗಳಾಗುತ್ತಿದ್ದು ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದ್ಯಂತ ಇನ್ನು ಹೆಚ್ಚೆಚ್ಚು ಕ್ರೀಡಾಕೂಟ ರೂಪಿಸಲು ಕ್ರೀಡಾ ಆಯೋಜಕರು ಮುಂದಾಗಬೇಕು. ಈ ಕಬಡ್ಡಿ ಕ್ರೀಡೆ ಕೇವಲ ಗ್ರಾಮೀಣ ಮಟ್ಟದಲ್ಲಿ ಉಳಿದುಕೊಂಡಿಲ್ಲ ಇದೀಗ ರಾಜ್ಯ ಮತ್ತು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಠದಲ್ಲಿ ಕೂಡ ವಿಶೇಷ ಸ್ಥಾನ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಇದು ಒಲಂಪಿಕ್ ನಲ್ಲಿ ಕೂಡ ಸ್ಥಾನ ಪಡೆಯುವ ಸಾಧ್ಯತೆಗಳಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಸಾಧುಗೋನಹಳ್ಳಿ ಲೋಕೇಶ್,ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪಾಪೇಗೌಡ, ಶಿವರಾಮ್, ಯೋಗೇಶ್, ಪ್ರಹ್ಲಾದ, ಗ್ರಾಮ ಪಂಚಾಯಿತಿ ಸದಸ್ಯರುಗೋಳಾದ ಲೋಕೇಶ್, ಪಿ.ಟಿ.ಜಿ ಕೊಪ್ಪಲು ಕುಮಾರ್, ರೈತ ಸಂಘದ ಮುಖಂಡ ಮಂಜುನಾಥ್, ಹರೀಶ್, ರಾಘು, ದಿನೇಶ್, ಆಕಾಶ್, ಪ್ರಶಾಂತ್, ಕೃಷ್ಣಚಾರಿ, ಸೇರಿದಂತೆ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು