ಇತ್ತೀಚಿನ ಸುದ್ದಿ
ಮಂಗಳ – ಶುಕ್ರ ಗ್ರಹಗಳ ಇಂದು ಸಂಯೋಗ: ಆಕಾಶದಲ್ಲಿ ನಡೆಯಲಿದೆ ಅಪರೂಪದ ಘಟನೆ
13/07/2021, 08:43
ಮಂಗಳೂರು(reporterkarnataka news): ಮಂಗಳ-ಶುಕ್ರ ಗ್ರಹಗಳು ಜು.13ರಂದು ಸನಿಹ ಬರಲಿದ್ದು, ಈ ಗ್ರಹಗಳು ಉಳಿದ ದಿನಗಳಲ್ಲಿ ದೂರ ದೂರವಿದ್ದರೂ ಆ ದಿನ ಭೂಮಿಯಿಂದ ಆಗಸವನ್ನು ನೋಡಿದಾಗ ಅವು ಸನಿಹವಿದ್ದಂತೆ ಕಾಣಲಿದೆ.
ಇದು ಖಗೋಳಾಸಕ್ತರಿಗೆ ಒಂದು ಅಪರೂಪದ ಅವಕಾಶವಾಗಿದೆ.
ಗ್ರಹಗಳನ್ನು ಬರಿಗಣ್ಣಿನಿಂದ, ದುರ್ಬೀನಿನಿಂದ ಅಥವಾ ದೂರದರ್ಶಕದಿಂದ ನೋಡಬಹುದು. ಮೋಡವಿರದ ಶುಭ್ರ ಆಕಾಶವಿದ್ದರೆ ಜುಲೈ 13 ರ ರಾತ್ರಿ ಸುಮಾರು 7.20 ಗಂಟೆಗೆ ಪಶ್ಚಿಮ ಮತ್ತು ವಾಯುವ್ಯ ದಿಕ್ಕಿನ ನಡುವೆ ನೋಡಿದಾಗ ಮಂಗಳ ಶುಕ್ರ ಸಂಯೋಗದೊಂದಿಗೆ ಬಾಲಚಂದ್ರ ಮತ್ತು ಮಖಾ ನಕ್ಷತ್ರ ಕಾಣಬಹುದಾಗಿದ್ದು, ನಂತರದ ದಿನಗಳಲ್ಲಿ ಈ ಗ್ರಹಗಳು ದೂರವಾಗುವುದನ್ನು ಸಹ ಕಾಣಬಹುದಾಗಿದೆ.