ಇತ್ತೀಚಿನ ಸುದ್ದಿ
ಅಸೆಂಬ್ಲಿ ಚುನಾವಣೆ: ಬಂಟ್ವಾಳದಲ್ಲಿ ಪೊಲೀಸ್ ಇಲಾಖೆಯಿಂದ ದೊಂಬಿ ನಿಗ್ರಹ ಕವಾಯತು
22/03/2023, 18:33

ಬಂಟ್ವಾಳ(reporterkarnataka.com):
ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ಪೊಲೀಸ್ ಇಲಾಖೆಯಿಂದ ದೊಂಬಿ ನಿಗ್ರಹ ಕವಾಯತು ನಡೆಸಲಾಯಿತು.
ಬಂಟ್ವಾಳ ನಗರ, ಬಂಟ್ವಾಳ ಗ್ರಾಮೀಣ, ಬಂಟ್ವಾಳ ಸಂಚಾರ, ವಿಟ್ಲ, ಪೊಲೀಸ್
ಠಾಣೆಗಳ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಬಿ.ಸಿ.ರೋಡ್ ಜಂಕ್ಷನ್ ನ ಸಮೀಪದ ಬಂಟ್ವಾಳ ಪೇಟೆಯ ರಸ್ತೆಯ ಪಕ್ಕದಲ್ಲಿರುವ ಮೈದಾನದಲ್ಲಿAnti Riot Drill ( ದೊಂಬಿ
ನಿಗ್ರಹ ಕವಾಯತು ) ತರಬೇತಿಯನ್ನು ನೀಡಲಾಯಿತು. ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಗಲಭೆ ಸಂದರ್ಭದಲ್ಲಿ ಯಾವ ರೀತಿ ಸ್ಪಂದಿಸಬೇಕು, ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾದಾಗ ಯಾವ ರೀತಿ ರಕ್ಷಣಾತ್ಮಕವಾಗಿ ಎದುರಿಸಬೇಕೆಂಬ
ಬಗ್ಗೆ ಪ್ರಾಯೋಗಿಕವಾಗಿ ತಿಳಿಸಲಾಯಿತು.
ಇಂತಹ ಕವಾಯತಿನಿಂದ ಪೊಲೀಸ್ ಅಧಿಕಾರಿ,
ಸಿಬ್ಬಂದಿಗಳು ವೃತ್ತಿ ಕೌಶಲ್ಯ, ಸ್ಥೈರ್ಯ,ಆತ್ಮ ವಿಶ್ವಾಸ ಗಳನ್ನು ಹೆಚ್ಚಿಸಿಕೊಂಡು ವೃತ್ತಿಪರತೆಯಿಂದ
ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ.