5:38 AM Thursday9 - May 2024
ಬ್ರೇಕಿಂಗ್ ನ್ಯೂಸ್
ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ…

ಇತ್ತೀಚಿನ ಸುದ್ದಿ

ಜನಸಾಮಾನ್ಯರ ತಾಸುಗಟ್ಟಲೆ ಕಾಯಿಸಿದ ಪಾಲಿಕೆ ಕಮಿಷನರ್: ಸಾರ್ವಜನಿಕರಿಂದ ತರಾಟೆ, ತೀವ್ರ ಆಕ್ಷೇಪ

20/03/2023, 21:59

ಮಂಗಳೂರು(reporterkarnataka.com): ಸಾರ್ವಜನಿಕರ ಭೇಟಿಯ ನಿಗದಿತ ಸಮಯದಲ್ಲಿ ಜನಸಾಮಾನ್ಯರನ್ನು ತಾಸುಗಟ್ಟಲೆ ಕಾಯಿಸಿದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಕಮಿಷನರ್ ಚೆನ್ನಬಸಪ್ಪ ಅವರನ್ನು ಕಮ್ಯುನಿಸ್ಟ್ ಮುಖಂಡ ಸುನಿಲ್ ಕುಮಾರ್ ಬಜಾಲ್ ನೇತೃತ್ವದಲ್ಲಿ ನಾಗರಿಕರು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆಯಿತು.

ಪಾಲಿಕೆ ಆಯುಕ್ತ ಚೆನ್ನಬಸಪ್ಪ ಅವರು ಸಾರ್ವಜನಿಕರ ಭೇಟಿಗೆ ನಿಗದಿಪಡಿಸಿದ್ದ ಸಮಯದಲ್ಲಿ ತನ್ನ ಚೇಂಬರ್ ನಲ್ಲಿ ಹಾಜರಿರಲಿಲ್ಲ. ಅವರನ್ನು ಭೇಟಿಯಾಗಲು ಸಾರ್ವಜನಿಕರು ಕಾಯುತ್ತಿದ್ದರು. ಆಯುಕ್ತರು ಮೀಟಿಂಗ್ ನಲ್ಲಿದ್ದಾರೆ ಎಂದು ಹೇಳಲಾಯಿತು. ಹೀಗೆ ತಾಸುಗಟ್ಟಲೆ ಜನಸಾಮಾನ್ಯರನ್ನು ಪಾಲಿಕೆಯ ಕಮಿಷನರ್ ಚೇಂಬರ್ ಬಳಿ ಕಾಯಿಸಲಾಯಿತು. ಕಮಿಷನರ್ ಮೀಟಿಂಗ್ ಹೆಸರಿನಲ್ಲಿ ಕಾಲಹರಣ ಮಾಡುತ್ತಿರುವುದಾಗಿ ಸುನಿಲ್ ಕುಮಾರ್ ಬಜಾಲ್ ನೇತೃತ್ವದಲ್ಲಿ ಸಾ

ರ್ವಜನಿಕರು ತರಾಟೆಗೆ ತೆಗೆದುಕೊಂಡರು.

ತಡವಾಗಿ ಬಂದ ಕಮಿಷನರ್ ವರ್ತನೆಯ ಬಗ್ಗೆ ಸುನಿಲ್ ಕುಮಾರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಾರ್ವಜನಿಕರ ಭೇಟಿಗೆ ನಿಗದಿಪಡಿಸಿದ ವೇಳೆಯಲ್ಲಿ ನೀವು ಮೀಟಿಂಗ್ ಹೆಸರಿನಲ್ಲಿ ಜನಸಾಮಾನ್ಯರನ್ನು ಕಾಯಿಸುವುದು ಸರಿಯಲ್ಲ ಎಂದು ಸುನಿಲ್ ಅವರು ಏರುಧ್ವನಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಆಯುಕ್ತರು ಇದಕ್ಕೆ ಹಾಗಲ್ಲ, ಹೀಗೆ ಎಂದೆಲ್ಲ ಸಮಜಾಷಿಕೆ ನೀಡಲಾರಂಭಿಸಿದರು. ಕೊನೆಗೆ ಕಮಿಷನರ್ ಅವರು ನಾನು ಸಿನಿಮಾ ನೋಡಲು ಹೋಗಿಲ್ಲ ಎಂದು ಹೇಳಿದರು. ಆದರೆ, ಸುನಿಲ್ ಕುಮಾರ್ ಅವರು ಪಟ್ಟುಬಿಡದಾಗ ಕೊನೆಗೆ ಕಮಿಷನರ್ ಚನ್ನಬಸಪ್ಪ ಅವರು ಸುನಿಲ್ ಅವರ ಹೆಗಲಿಗೆ ಕೈಹಾಕಿ ಸಮಾಧಾನಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು