ಇತ್ತೀಚಿನ ಸುದ್ದಿ
ಸಮಾನ ಹಗಲು- ರಾತ್ರಿ: 21ಕ್ಕೆ ಪಿಲಿಕುಳದಲ್ಲಿ ಖಗೋಳ ಶಾಸ್ತ್ರದ ಚಟುವಟಿಕೆಗಳು: ಆಸಕ್ತರಿಗೆ ಮುಕ್ತ ಅವಕಾಶ
18/03/2023, 11:28

ಮಂಗಳೂರು(reporterkarnataka.com): ಮಾರ್ಚ್ 21 ಹಾಗೂ ಸೆಪ್ಟಂಬರ್ 23 ಹಗಲು ಹಾಗೂ ರಾತ್ರಿಗಳ ಹೆಚ್ಚು ಕಡಿಮೆ ಸಮನಾಗಿರುತ್ತದೆ. ಈ ದಿನ ಸೂರ್ಯನ ಕಿರಣಗಳು ಭೂಮಿಯ ಭ್ರಮಣದ ಅಕ್ಷಕ್ಕೆ ಲಂಬವಾಗಿ ಬೀಳುತ್ತವೆ. ಇತರ ಅಕ್ಷಾಂಶಗಳಲ್ಲಿ ಸೂರ್ಯನ ಕಿರಣಗಳು ಓರೆಯಾಗಿ ಬೀಳುತ್ತವೆ. ಆ ದಿನದಂದು ಮಾತ್ರ ಸೂರ್ಯನ ಕಿರಣಗಳ ಓರೆಕೋನವು ಆ ಸ್ಥಳದ ಅಕ್ಷಾಂಶಕ್ಕೆ ಸಮಾನವಾಗಿರುತ್ತದೆ.
ಈ ಕಾರಣ ಪಿಳಕುಳ ಪ್ರದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ಮಾರ್ಚ 21 ರಂದು ಬೆಳಗ್ಗೆ 10.30 ರಿಂದ ಈ ದಿನದ ಹಗಲಿನಲ್ಲಿ ಖಗೋಳಶಾಸ್ತ್ರದ ಚಟುವಟಿಕೆಗಳನ್ನು ಮಾಡಲಾಗುವುದು. ಆಸಕ್ತರು
ಜಗನ್ನಾಥ(9481245137) ವಿಘ್ನೇಶ್ ಭಟ್ (9164571280) ಅವರನ್ನು ಸಂಪರ್ಕಿಸಿ
ಚಟುವಟಿಕೆಯಲ್ಲಿ ಭಾಗವಹಿಸಲು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.