ಇತ್ತೀಚಿನ ಸುದ್ದಿ
ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆಗೆ ಕ್ಷಣಗಣನೆ: ರೈ, ಖಾದರ್, ಮಿಥುನ್, ಸೊರಕೆಗೆ ಟಿಕೆಟ್ ಬಹುತೇಕ ಫಿಕ್ಸ್
17/03/2023, 20:58

ಬೆಂಗಳೂರು(reporterkarnataka.com): ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಮೊದಲ ಪಟ್ಟಿ ಅಂತಿಮಗೊಂಡಿದ್ದು, ಯಾವುದೇ ಕ್ಷಣದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಕರಾವಳಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಪ್ರಮುಖ ಕ್ಷೇತ್ರಗಳ ಅಭ್ಯರ್ಥಿ ಗಳ ಪಟ್ಟಿ ಅಂತಿಮಗೊಂಡಿದೆ. ದ.ಕ. ಜಿಲ್ಲೆಯ ಬಂಟ್ವಾಳ ಕ್ಷೇತ್ರದಿಂದ ಬಿ. ರಮಾನಾಥ ರೈ, ಮಂಗಳೂರಿನಿಂದ ಯು.ಟಿ. ಖಾದರ್, ಮೂಡುಬಿದರೆ ಮಿಥುನ್ ರೈ, ಕಾಪುನಿಂದ ವಿನಯಕುಮಾರ್ ಸೊರಕೆ ಹೆಸರು ಈ ಪಟ್ಡಿಯಲ್ಲಿದೆ ಎಂದು ತಿಳಿದು ಬಂದಿದೆ.
ಪಕ್ಷದ ಘಟಾನುಘಟಿ ನಾಯಕರ ಪೈಕಿ ಸಿದ್ದರಾಮಯ್ಯ(ಕೋಲಾರ), ಡಿ.ಕೆ. ಶಿವಕುಮಾರ್ (ಕನಕಪುರ), ದಿನೇಶ್ ಗುಂಡೂರಾವ್(ಗಾಂಧಿನಗರ), ಸೌಮ್ಯ ರೆಡ್ಡಿ(ಜಯನಗರ), ರಾಮಲಿಂಗಾ ರೆಡ್ಡಿ(ಬಿಟಿಎಂ ಲೇ ಔಟ್), ಕೃಷ್ಣಬೈರೇಗೌಡ (ಬ್ಯಾಟರಾಯನಪುರ),
ಬೈರತಿ ಸುರೇಶ್ (ಹೆಬ್ಬಾಳ), ಟಿ.ಬಿ.ಜಯಚಂದ್ರ
(ಶಿರಾ), ಅನಿಲ ಚಿಕ್ಕಮಾದು (ಹೆಗ್ಗಡದೇವನಕೋಟೆ), ಕೆ.ಎನ್.ರಾಜಣ್ಣ
(ಮಧುಗಿರಿ), ಪ್ರಿಯಾಂಕ್ ಖರ್ಗೆ (ಚಿತ್ತಾಪುರ), ಯತೀಂದ್ರ ಸಿದ್ದರಾಮಯ್ಯ (ವರುಣಾ)