3:33 PM Tuesday30 - April 2024
ಬ್ರೇಕಿಂಗ್ ನ್ಯೂಸ್
ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ… ಸುಪ್ರೀಂ ಕೋರ್ಟ್ ಸೂಚಿಸಿದ ಬಳಿಕ ಕೊನೆಗೂ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ… ಚಳ್ಳಕೆರೆ ತಾಲೂಕಿನಲ್ಲಿ ಶಾಂತಿಯುತ ಮತದಾನ: ಚುನಾವಣೆ ಕರ್ತವ್ಯನಿರತ ಮಹಿಳಾ ಸಿಬ್ಬಂದಿ ಸಾವು

ಇತ್ತೀಚಿನ ಸುದ್ದಿ

4 ದಿನಗಳಿಂದ ಕಸ ವಿಲೇವಾರಿಯಾಗದೆ ಕೊಳೆತು ನಾರುತ್ತಿರುವ ಹಸಿ ತ್ಯಾಜ್ಯ: ಕೊನೆಗೂ ಎಚ್ಚೆತ್ತ ಪಾಲಿಕೆ ಆಡಳಿತ

16/03/2023, 22:44

ಮಂಗಳೂರು(reporterkarnataka.com): ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಸಿಬ್ಬಂದಿಗಳು ಮುಷ್ಕರ ನಿರತರಾದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಳೆದ 4 ದಿನಗಳಿಂದ ಕಸ ವಿಲೇವಾರಿಯಾಗದೆ ಮನೆ ಮನೆಗಳ ಹಸಿ ತ್ಯಾಜ್ಯ ಕೊಳೆತು ನಾರುತ್ತಿದ್ದು, ಕೊನೆಗೂ ಎಚ್ಚೆತ್ತ ಪಾಲಿಕೆ ಆಡಳಿತ ಶಾಸಕರು ಹಾಗೂ ಮೇಯರ್ ನೇತೃತ್ವದಲ್ಲಿ ಗುರುವಾರ ಸಂಜೆ ಸಭೆ ನಡೆಸಿದೆ.

ಸರಕಾರ ಮಟ್ಟದಲ್ಲಿ ಈಡೇರಬೇಕಾದ ಬೇಡಿಕೆಗಳಿಗೆ ಸೋಮವಾರದಿಂದ ಸಿಬ್ಬಂದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಮಂಗಳೂರು ನಗರದಲ್ಲಿ ಮನೆ ಮನೆ ಕಸ ಸಂಗ್ರಹಕ್ಕೆ ಸಮಸ್ಯೆ ಉಂಟಾಗಿದೆ.
ಹಸಿ ಕಸ ಕೊಳೆತು ನಾರಲಾರಂಭಿಸಿದೆ. ಮನೆಯೊಳಗೆ ಇಟ್ಟರೆ ವಿಪರೀತ ನಾತ, ಜತೆಗೆ ಸೊಳ್ಳೆ-ನೊಣಗಳ ಕಾಟ. ಮನೆಯಿಂದ ಹೊರಗಿಟ್ಡರೆ ಬೀದಿ ನಾಯಿಗಳ ಉಪಟಳ. ಇದರ ನಡುವೆ ಸಿಲುಕಿ ಮಂಗಳೂರು ನಾಗರಿಕರು ಹೈರಾಣವಾಗಿ ಹೋಗಿದ್ದರು. ಇದರಿಂದ ಕೊನೆಗೂ ಎಚ್ಚೆತ್ತ ಆಡಳಿತ ಗುರುವಾರ ಸಂಜೆ ಸಭೆ ನಡೆಸಿದೆ. ಮೇಯರ್ ಜಯಾನಂದ ಆಂಚನ್ ಹಾಗೂ ಶಾಸಕರಾದ ಡಿ. ವೇದವ್ಯಾಸ ಕಾಮತ್ ಹಾಗೂ ಡಾ. ವೈ.ಭರತ್ ಶೆಟ್ಟಿ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಪಾಲಿಕೆ ವ್ಯಾಪ್ತಿಯಲ್ಲಿ ವ್ಯವಸ್ಥಿತವಾಗಿ ತ್ಯಾಜ್ಯ ವಿಲೇವಾರಿಗೆ ಮಾ.17ರ ಶುಕ್ರವಾರದಿಂದಲೇ ಆ್ಯಂಟಿನಿ ವೆಸ್ಟ್ ಮ್ಯಾನೇಜ್ ಮೆಂಟ್ ನಿಂದ ಹೆಚ್ಚುವರಿಯಾಗಿ ಸಿಬ್ಬಂದಿ ನಿಯೋಜನೆ ಮಾಡುವಂತೆ ಅವರು ಸೂಚನೆ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 990 ಮಂದಿ ತ್ಯಾಜ್ಯ ನಿರ್ವಹಣೆಯ ಸಿಬ್ಬಂದಿಗಳು ಮುಷ್ಕರನಿರತರಾಗಿದ್ದಾರೆ. ಇವರಲ್ಲಿ 120 ಚಾಲಕರು, 620 ಕಸ ಸಂಗ್ರಹ ಮಾಡುವವರು ಹಾಗೂ 250 ಮಂದಿ ವೆಟ್ ವೆಲ್ ಹಾಗೂ ಯುಜಿಡಿಯಲ್ಲಿ ಕೆಲಸ ಮಾಡುವವರು ಸೇರಿದ್ದಾರೆ. ಇವರೆಲ್ಲ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ನಗರದಲ್ಲಿ ಕಸ ವಿಲೇವಾರಿಯ ಸಮಸ್ಯೆ ಎದುರಾಗಿದೆ.

ಮುಷ್ಕರದಂತಹ ಸಂದರ್ಭಗಳಲ್ಲಿ ಏಜೆನ್ಸಿಯವರು ಅಗತ್ಯ ವ್ಯವಸ್ಥೆ ಮಾಡಬೇಕು. ಪ್ರತಿಭಟನೆ ಅಂತ್ಯವಾಗುವವರಿಗೆ ಬೇಕಾದ ಸಿಬ್ಬಂದಿ ನಿಯೋಜನೆ ಮಾಡಬೇಕು. ಮನೆ ಮನೆಯ ಕಸ ಸಂಗ್ರಹಣೆಗೆ ಬೇಕಾದಷ್ಟು ಸಿಬ್ಬಂದಿ ಹಾಗೂ ವಾಹನ ಚಾಲಕರನ್ನು ವ್ಯವಸ್ಥೆ ಮಾಡಬೇಕು. ನಗರದ ಜನರ ಸ್ವಚ್ಛತೆ ಸಲುವಾಗಿ ಅಗತ್ಯ ಕ್ರಮಗಳು ಆಗಬೇಕು. ವೆಟ್ ವೆಲ್ ಹಾಗೂ ಎಸ್ಟಿಪಿಗಳನ್ನು ಸುವ್ಯವಸ್ಥಿತವಾಗಿ ನಡೆಸಬೇಕು ಎಂದು ಸಭೆಯಲ್ಲಿ
ಸೂಚನೆ ನೀಡಲಾಗಿದೆ.
ಸುಮಾರು 80 ಸಿಬ್ಬಂದಿಗಳನ್ನು ಈ ಕಸ ವಿಲೇವಾರಿಗೆ ನಿಯೋಜನೆ ಮಾಡುವದಕ್ಕೆ ಮುಂದಾಗಬೇಕು ಎಂದು ಆ್ಯಂಟನಿ ವೆಸ್ಟ್ ಮ್ಯಾನೇಜ್ ಮೆಂಟ್ ಸೆಲ್ ವ್ಯವಸ್ಥೆ ಮಾಡಿಕೊಳ್ಳಬೇಕು. ವೆಟ್ ವೆಲ್ ನಿರ್ವಹಣೆಗೆ ತುರ್ತಾಗಿ ಸಿಬ್ಬಂದಿ ನಿಯೋಜನೆ ಮಾಡಬೇಕು. 20 ರಿಂದ 30 ವಾಹನಗಳಿಂದ ಕಸವನ್ನು ಸಂಗ್ರಹ ಮಾಡಲು ಸ್ಥಳೀಯ ಪಾಲಿಕೆ ಸದಸ್ಯರ ಸಹಕಾರ ಪಡೆದು ಕಸ ವಿಲೇವಾರಿಗೆ ಶುಕ್ರವಾರದಿಂದಲೇ ಕಾರ್ಯ ನಿರ್ವಹಿಸಬೇಕು. ಕನಿಷ್ಠ 60 ವಾಹನಗಳಲ್ಲಿ ಕಸ ಸಂಗ್ರಹಣೆಗೆ ಬೇಕಾದ ಸಿದ್ಧತೆ ನಡೆಯಬೇಕು ಎಂದು ಶಾಸಕರು ಹಾಗೂ ಪಾಲಿಕೆ ಮೇಯರ್ ಸೂಚನೆ ನೀಡಿದರು.
ಸಿಬ್ಬಂದಿಗಳು ಕೆಲಸ ಸಮಯದಲ್ಲಿ ಏನಾದರೂ ಸಮಸ್ಯೆ ಉಂಟಾದರೆ ಪೊಲೀಸರ ಸಹಕಾರ ಪಡೆದು ಕಸ ವಿಲೇವಾರಿಗೆ ಕಾರ್ಯ ನಡೆಸಬೇಕು. ವಿಶೇಷವಾಗಿ ವೆಟ್ ವೆಲ್ ಹಾಗೂ ಎಸ್ಟಿಪಿಗಳನ್ನು ಚಾಲನೆ ಹಾಗೂ ನಿರ್ವಹಣೆಗೆ ತುರ್ತು ಕ್ರಮ ಜರುಗಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು