12:03 PM Tuesday16 - December 2025
ಬ್ರೇಕಿಂಗ್ ನ್ಯೂಸ್
ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್

ಇತ್ತೀಚಿನ ಸುದ್ದಿ

ಅನ್ಯ ಧರ್ಮಗಳ ಆಚಾರಗಳಿಗೆ ಅಗೌರವ ಕೊಡುವುದು ಹಿಂದೂ ಧರ್ಮಕ್ಕೆ ದ್ರೋಹ ಬಗೆಯುವುದಕ್ಕೆ ಸಮ: ಮಾಜಿ ಸಚಿವ ಈಶ್ವರಪ್ಪ ಆಝಾನ್ ಬಗ್ಗೆ ಹೇಳಿಕೆಗೆ ಡಾ.‌ಸುಮತಿ ಹೆಗ್ಡೆ ತೀವ್ರ ಆಕ್ಷೇಪ

14/03/2023, 18:34

ಮಂಗಳೂರು(reporterkarnataka.com): ಒಂದು ಧರ್ಮದಲ್ಲಿದ್ದುಕೊಂಡು ಇನ್ನೊಂದು ಧರ್ಮದ ಆಚಾರ ವಿಚಾಗಳಿಗೆ ಅಗೌರವ ಕೊಡುವುದು ಎಲ್ಲಷ್ಟೂ ಸರಿಯಲ್ಲ. ಇತ್ತೀಚೆಗೆ ಮಂಗಳೂರಿನಲ್ಲಿ ಬಿಜೆಪಿಯ ಮಾಜಿ ಸಚಿವ ಕೆ‌ ಎಸ್ ಈಶ್ವರಪ್ಪ ಇಸ್ಲಾಮ್ ಧರ್ಮದ ಬಗ್ಗೆ ಟೀಕಿಸಿ ದೇವರ ಬಗ್ಗೆ ಅಪಹಾಸ್ಯ ಮಾಡಿದ್ದನ್ನು ಉಲ್ಲೇಖಿಸಿ ತೀಕ್ಷಣವಾಗಿ ಪ್ರತಿಕ್ರಿಯಿಸಿದ ಮಂಗಳೂರು ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಸುಮತಿ ಎಸ್ ಹೆಗ್ಡೆ ಖಂಡಿಸಿದ್ದಾರೆ.

ಈಶ್ವರಪ್ಪ ಅವರ ನಿಲುವು ಹಿಂದೂ ಧರ್ಮಕ್ಕೆ ಅಪಚಾರ ವೆಸಗಿದಂತೆ. ಹಿಂದೂ ಧರ್ಮದಲ್ಲೂ ಎಲ್ಲೂ ಇನ್ನೊಂದು ಧರ್ಮದ ಬಗ್ಗೆ ಕೆಟ್ಟದಾಗಿ ನುಡಿಯಲು ಎಲ್ಲಿಯೂ ಹೇಳಲಿಲ್ಲ‌‌. ಅದಲ್ಲದೆ ದೇವರು ಎಲ್ಲರಿಗೂ ಒಂದೇ . ಅವರವರ ಧರ್ಮದಲ್ಲಿ ಬೇರೆ ಬೇರೆ ಹೆಸರಲ್ಲಿ ಕರೆಯುತ್ತಾರೆ ಅಷ್ಟೇ. ಪರಮಾತ್ಮನನ್ನು ಅವಹೇಳನ ಮಾಡುವಂತಹ ಕೀಳುಮಟ್ಟದ ಹೇಳಿಕೆ ಕೊಡುವುದೆಂದರೆ ಅವರ ಘನತೆಗೆ ಯೋಗ್ಯವಲ್ಲದ ವಿಚಾರ ಮಾತ್ರವಲ್ಲ ಅವರ ಸಣ್ಣತನಕ್ಕೆ ನಿದರ್ಶನ. ಈ ವಿಚಾರದಲ್ಲಿ ಈಶ್ವರಪ್ಪರವರು ಅಲ್ಪಸಂಖ್ಯಾತ ಮುಸ್ಲಿಮರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಇವರನ್ನು ಕೂಡಲೇ ಬಂಧಿಸಿ , ಸೂಕ್ತ ಕಾಣೂನು ಕ್ರಮದಂತೆ ಶಿಕ್ಷಿಸಿಬೇಕೆಙದು ಸುಮತಿ ಹೆಗ್ಡೆ ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು