3:45 AM Tuesday16 - September 2025
ಬ್ರೇಕಿಂಗ್ ನ್ಯೂಸ್
Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;…

ಇತ್ತೀಚಿನ ಸುದ್ದಿ

ಸಂತ ಆಗ್ನೆಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ಖಗೋಳ ಶಾಸ್ತ್ರಜ್ಞ ಪ್ರೊ. ಜಯಂತ್ ಆಚಾರ್ಯ ಇನ್ನಿಲ್ಲ

14/05/2021, 12:48

ಮಂಗಳೂರು(reporterkarnataka news):

ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನ ನಿವೃತ್ತ ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೊ.ಜಯಂತ್ ಆಚಾರ್ಯ (67) ಹೃದಯಾಘಾತ ದಿಂದ ಮಂಗಳೂರಿನ ಕುಲಶೇಖರ ಸಮೀಪದ ಸರಿಪಳ್ಳದಲ್ಲಿರುವ ಮನೆಯಲ್ಲಿ ನಿಧನರಾದರು.    

ಪ್ರೊ.ಜಯಂತ್  ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಮಂಗಳೂರಿನ ಅನೇಕರಿಗೆ ಖಗೋಲಶಾಸ್ತ್ರದ ಅಭಿರುಚಿ ಹುಟ್ಟಿಸಿದ್ದರು.

ಗ್ರಹಣ ಆಗಲೀ, ಧೂಮಕೇತು ಬರಲಿ ಆಕಾಶದ ವಿಸ್ಮಯಗಳತ್ತ ತಮ್ಮ ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ಅದರ ಪರಿಚಯ ಮಾಡಿಸುತ್ತಿದ್ದವರು. ಅದಕ್ಕೆಂದೇ ನಗರದಿಂದ ತುಸುದೂರ ಸರಿಪಲ್ಲ ಎಂಬಲ್ಲಿ ಮನೆ ಮಾಡಿಕೊಂಡು ಆಸಕ್ತರಿಗೆ ಆಕಾಶದ ಪರಿಚಯ ಮಾಡಿಸುತ್ತಿದ್ದರು. ಮಂಗಳೂರು ಹವ್ಯಾಸಿ ಖಗೋಲವೀಕ್ಷಕರ ಸಂಘದ ಮೂಲಕ ಅನೇಕ ಚಟುವಟಿಕೆ ಮಾಡುತ್ತಾ ಕ್ರಿಯಾಶಿಲರಾಗಿದ್ದವರು. 

ಸಂಗೀತ, ಯಕ್ಷಗಾನ, ನಾಟಕ, ಚಾರಣ ಮೊದಲಾದ ಹಲವಾರು ಆಸಕ್ತಿಗಳನ್ನು ಹೊಂದಿದ್ದವರು.  ಕಿರಿಯರ ಜೊತೆ ಸದಾ ಸ್ನೇಹಭಾವದಿಂದ ಇರುತ್ತಿದ್ದ ಸರಳ ಸಜ್ಜನ. Sunday science school ನಂತಹ ಚಟುವಟಿಕೆಗಳ ಮೂಲಕ ಮಕ್ಕಳಿಗೆ ನಿಜವಾದ ಅರ್ಥದಲ್ಲಿ ವಿಜ್ಞಾನ ಕಲಿಕೆ ಎಂಬ ಪ್ರಯೋಗವನ್ನು ಹಲವಾರು ವರ್ಷ ನಡೆಸಿದವರು.

ಬಗಲಿಗೊಂದು ಚೀಲ, ಕೈಯಲ್ಲೊಂದು single fold ಛತ್ರಿ, ಚೌಕ ಫ್ರೇಮಿನ ಕನ್ನಡಕ, ಸದಾ ನಗುಮುಖದ ಶಾಂತ ವ್ಯಕ್ತಿತ್ವದ ಇವರು 

 ತಾಯಿ, ಪತ್ನಿ, ಎರಡು ಪುತ್ರಿಯರು, ಅಳಿಯ, ಸಹೋದರ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು