ಇತ್ತೀಚಿನ ಸುದ್ದಿ
ಲಿಂಗಸುಗೂರು ಪುರಸಭೆ ಆಡಳಿತದ ನಿರ್ಲಕ್ಷ್ಯ: 7 ತಿಂಗಳು ಕಳೆದರೂ ವಿದ್ಯಾರ್ಥಿನಿಯರಿಗೆ ಮಂಜೂರಾಗದ ವ್ಯಾಸಂಗ ವೇತನ
11/07/2021, 08:44
ಅಮರೇಶ್ ಲಿಂಗಸುಗೂರು ರಾಯಚೂರು
info.reporterkarnataka@gmail.com
ಕೋವಿಡ್ ನಿಂದ ಜನರು ಸಂಕಷ್ಟಕ್ಕೆ ಗುರಿಯಾಗಿದ್ದು, ಪೋಷಕರಿಗೆ ಮಕ್ಕಳ ಶಾಲಾ ಶುಲ್ಕ ಪಾವತಿಸಲು ಕಷ್ಟವಾಗುತ್ತಿದೆ. ಶಿಕ್ಷಣ ಸಂಸ್ಥೆಗಳು ಒಂದೇ ಸಲ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿವೆ. ಆದರೆ ಲಿಂಗಸಗೂರು ಪುರಸಭೆಯ ಎಸ್ ಸಿಪಿ- ಟಿಎಸ್ ಪಿ ಯೋಜನೆಯಡಿ ನೀಡಬೇಕಾಗಿದ್ದ ವಿದ್ಯಾರ್ಥಿ ವೇತನವನ್ನು ಇನ್ನೂ ಪಾವತಿಸದೆ ನಿರ್ಲಕ್ಷ್ಯ ವಹಿಸಿದೆ.
2021ರ ಜನವರಿ 15ರಂದು 2020- 21ನೇ ಸಾಲಿನ ಅನುದಾನದಲ್ಲಿ ವಿವಿಧ ಹಂತದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ವಿಶೇಷ ನೆರವಿನ ವ್ಯಾಸಂಗ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಸುಮಾರು 7 ತಿಂಗಳುಗಳು ಕಳೆದರೂ ಅರ್ಜಿ ಸಲ್ಲಿಸಿದ ವಿದ್ಯಾರ್ಥಿನಿಯರಿಗೆ ಇನ್ನೂ ವ್ಯಾಸಂಗ ವೇತನ ಪಾವತಿ ಆಗಿರುವುದಿಲ್ಲ. ಇದಕ್ಕೆ ಯಾರು ಹೊಣೆ.? ಆದಷ್ಟು ಬೇಗನೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ವಿದ್ಯಾರ್ಥಿನಿಯರಿಗೆ ವೇತನ ಮಂಜೂರು ಮಾಡಲು ಮುಂದಾಗುತ್ತಾರಾ? ಕಾದು ನೋಡಬೇಕಾಗಿದೆ?