4:51 AM Monday15 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ಜಮೀನಿಗಾಗಿ ವಿಧವೆಯ ಅರೆ ಬೆತ್ತಲೆಗೊಳಿಸಿ ಹಲ್ಲೆ: ಕ್ರಮ ಕೈಗೊಳ್ಳದ ಪೊಲೀಸರು!; ಆರೋಪಿ ಪರ ನಿಂತ್ರಾ ಖಾಕಿ ಅಧಿಕಾರಿಗಳು..?

25/02/2023, 09:58

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.ಕಾಂ

ಓರ್ವ ವಿಧವೆ ಹಾಗೂ ಮಗಳನ್ನ ಜಮೀನಿನ ವ್ಯಾಜ್ಯದ ಸಲುವಾಗಿ ಸಂಬಂಧಿಕರೇ ಅರೆಬೆತ್ತಲಾಗಿ ಥಳಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ, ಅವರ ವಿರುದ್ದ ದೂರು ನೀಡಿದ್ರೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದೆ ಅವರ ಬೆಂಬಲವಾಗಿ ನಿಂತಿದೆ ಎಂದು ಶಾಂತವ್ವ ನಾಗಪ್ಪ ಮಾಂಗ ಎಂಬ ಮಹಿಳೆ ಆರೋಪಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ ಶಾಂತವ್ವ ನಾಗಪ್ಪ ಮಾಂಗ್ ಎಂಬ ವಿಧವೆಯ ಜಮೀನು ವಶಪಡಿಸಿಕೊಳ್ಳಲು ಗಂಡನ ಅಣ್ಣತಮ್ಮಂದಿರಾದ ಲಕ್ಕಪ್ಪ ಬಾಬು ಮಾಂಗ, ಭೀಮಪ್ಪ ಲಕ್ಕಪ್ಪ ಮಾಂಗ, ಹಣಮಂತ ಲಕ್ಕಪ್ಪ ಮಾಂಗ ಎಂಬುವವರು ಸಂತ್ರಸ್ತೆ ಶಾಂತವ್ವ ಹಾಗೂ ಅವಳ ಅಪ್ರಾಪ್ತ ಮಗಳ ಎದೆಗೆ ಕೈ ಹಾಕಿ, ಜಡೆ ಹಿಡಿದು ಬಡಿಗೆಯಿಂದು ಬಡಿದು ಹಲ್ಲೆ ಮಾಡಿದ್ದರಿಂದ ಕಳೆದ ಮೂರು ದಿನದಿಂದ ಪ್ರಜ್ಞೆ ತಪ್ಪಿದ್ದಾಳೆ. ಈ ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮೂರು ದಿನಗಳಾಗಿದೆ. ಆರೋಪಿತರು ಪೋಲಿಸ್ ಠಾಣೆ ಸುತ್ತಮುತ್ತ ತಿರುಗುತ್ತಿದ್ದರೂ ಸಹ ಬಂಧನ ಮಾಡದೆ ಅವರನ್ನು ಪರಾರಿಯಾಗಲು ಬಿಟ್ಟಿದ್ದಾರೆ ಎಂದು ಸಂತ್ರಸ್ತ ಮಹಿಳೆ ಪೊಲೀಸ್ ಇಲಾಖೆ ಕಾರ್ಯವೈಖರಿ ಪ್ರಶ್ನಿಸುವಂತಹ ಗಂಭೀರ ಆರೋಪ ಮಾಡಿದ್ದಾಳೆ.


ಹಲ್ಲೆಗೊಳಗಾದ ಅಪ್ರಾಪ್ತ ಯುವತಿ ಹಾಗೂ ಸಂತ್ರಸ್ತೆಯ ಆರೋಗ್ಯ ಪರಿಸ್ಥಿತಿ ಗಂಭಿರವಾಗಿದ್ದು, ಅಥಣಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಜವಾಗಿಯೂ ಪೊಲೀಸ್ ಇಲಾಖೆ ಆರೋಪಿತರನ್ನು ರಕ್ಷಿಸುತ್ತಿದೆಯಾ ? ಹಾಗೂ ಮಹಿಳಾ ಆಯೋಗ ಏನ್ಮಾಡ್ತಿದೆ ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು