6:42 AM Tuesday1 - September 2026
ಬ್ರೇಕಿಂಗ್ ನ್ಯೂಸ್
*ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ

ಇತ್ತೀಚಿನ ಸುದ್ದಿ

ಮಾಟೆಗುರಿಯ 19 ಕುಟುಂಬಗಳಿಗೆ 40 ವರ್ಷದ ಬಳಿಕ ಹಕ್ಕುಪತ್ರ ಭಾಗ್ಯ: ಶಾಸಕ ಡಾ. ಭರತ್ ಶೆಟ್ಟಿ ವಿತರಣೆ

24/02/2023, 23:51

ಸುರತ್ಕಲ್(reporterkarnataka.com): ಇಲ್ಲಿನ ಮಾಟೆಗುರಿಯಲ್ಲಿ ಸರಕಾರಿ ಡಿಸಿ ಮನ್ನಾ ಜಾಗದಲ್ಲಿ ಕಳೆದ 40 ವರ್ಷಗಳಿಂದ ವಾಸವಿದ್ದು, ಒಕ್ಕಲೇಳುವ ಭೀತಿಯಲ್ಲಿದ್ದ 19 ಕುಟುಂಬಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ತಮ್ಮ ಸುರತ್ಕಲ್ ಕಚೇರಿಯಲ್ಲಿ ಗುರುವಾರ ಹಕ್ಕು ಪತ್ರ ವಿತರಿಸುವ ಮೂಲಕ ಶುಭ ಹಾರೈಸಿದರು.

ಇದರಿಂದ ಕಳೆದ 40 ವರ್ಷಗಳಿಂದ ಸದಾ ಭೀತಿಯಲ್ಲಿಯೇ ಬದುಕು ಸವೆಸುತ್ತಿದ್ದ 19 ಕುಟುಂಬಗಳು ನಿಟ್ಟುಸಿರುಬಿಟ್ಟಿವೆ. ಕಾನೂನಾತ್ಮಕವಾಗಿ ಹೋರಾಟ ನಡೆಸಿ ,ತಿದ್ದುಪಡಿ ಮಾಡುವ ಮೂಲಕ ಹಕ್ಕು ಪತ್ರ ವಿತರಣೆಗೆ ಕ್ರಮ ಕೈಗೊಂಡ ಶಾಸಕರಿಗೆ ಜನತೆ ಕೃತಜ್ಞತೆ ಸಲ್ಲಿಸಿದರು.
ಹಲವಾರು ಶಾಸಕರನ್ನು ಕಂಡಿದ್ದೇವೆ. ಈ ಕೆಲಸ ಆಗದು ಎಂದು ಕೈ ಬಿಟ್ಟವರೇ ಹೆಚ್ಚು. ಆದರೆ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರ ಛಲ, ಮುತುವರ್ಜಿಯಿಂದ ನಮಗೆ ಸ್ವಂತ ಸೂರು ಸಿಕ್ಕುವಂತಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.


ಶಾಸಕರು ಮಾತನಾಡಿ, ಈ ಕುಟುಂಬಗಳಿಗೆ ಹಕ್ಕು ಪತ್ರ ಒದಗಿಸಿರುವುದು ನನ್ನ ಶ್ರೇಷ್ಟ ಕಾರ್ಯಗಳಲ್ಲಿ ಒಂದಾಗಿದೆ .ಇದರ ಹಿಂದೆ ಕೆಲಸ ಮಾಡಿದ ಸಾಮಾಜಿಕ ಕಾರ್ಯಕರ್ತರು,ಮನಪಾ ಸದಸ್ಯರನ್ನು ಶ್ಲಾಘಿಸಿದರು.
ಮನಪಾ ಸದಸ್ಯ ವರುಣ್ ಚೌಟ, ಪ್ರಮುಖರಾದ ರಮಾನಾಥ್ ಕುಲಾಲ್ , ರಮೇಶ್ ಕೋಡಿಕೆರೆ ಅಬೂಬಕರ್,ಉಪತಹಶೀಲ್ದಾರ್ ನವೀನ್ ,ಕಂದಾಯ ಆದಿಕಾರಿ ರವಿಪ್ರಸಾದ್ ಮಲ್ಯ, ಗ್ರಾಮ ಕರಣಿಕ ಉಮೇಶ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು