5:56 AM Friday7 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಮುಸ್ಲಿಂ ಬಾಂಧವ್ಯ ವೇದಿಕೆಯ ಆಶ್ರಯದಲ್ಲಿ ಅಲ್ಪಸಂಖ್ಯಾತ ಹಕ್ಕುಗಳ ಮಾಹಿತಿ ಶಿಬಿರ

21/02/2023, 11:57

ಮಂಗಳೂರು(reporterkarnataka.com): ಅಲ್ಪಸಂಖ್ಯಾತರ ಪ್ರಜಾಸತ್ತಾತ್ಮಕ ಮತ್ತು ರಾಜಕೀಯ ಬಲವರ್ಧನೆಯ ಬಗ್ಗೆ ಫಾರಂ ಫಾರ್ ಮೈನಾರಿಟಿ ರೈಟ್ಸ್ , ಡೆಮಾಕ್ರಟಿಕ್ ಆ್ಯಂಡ್ ಪೊಲಿಟಿಕಲ್ ಎಂಪವರ್ ಮೆಂಟ್ ಬೆಂಗಳೂರು ಮತ್ತು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಇವರ ಆಶ್ರಯದಲ್ಲಿ ನಗರದ ಹಂಪನಕಟ್ಟೆಯ ಆಶೀರ್ವಾದ್ ಹಾಲ್ ನಲ್ಲಿ ಅಲ್ಪಸಂಖ್ಯಾತರಿಗೆ ಮಾಹಿತಿ ಕಾರ್ಯಾಗಾರ ನಡೆಯಿತು.

ಅಧ್ಯಕ್ಷತೆ ವಹಿಸಿದ ಫಾರಂ ಫಾರ್ ಮೈನಾರಿಟಿ ಇದರ ಅಧ್ಯಕ್ಷ ಮೆಹರೋಜ್ ಖಾನ್ ” ಅಲ್ಪಸಂಖ್ಯಾತರು ದೇಶದ ರಾಜಕಾರಣದಲ್ಲಿ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಿಯಾಶೀಲ ಭೂಮಿಕೆ ನಿಭಾಯಿಸಬೇಕು. ರಾಜಕೀಯ ಕಾರಣದಿಂದ ಸಮಾಜದಲ್ಲಿ ಸೃಷ್ಟಿಯಾಗಿರುವ ಅನಗತ್ಯ ಅಂತರವನ್ನು ನಿವಾರಿಸಲು ಬಹುಸಂಖ್ಯಾತ ಸಮುದಾಯದೊಂದಿಗೆ ಸೌಹಾರ್ದ ಸ್ಥಾಪಿಸುವ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ರಾಜಕಾರಣಿಗಳ ಕೋಮು ಧ್ರುವೀಕರಣದ ರಾಜಕೀಯವನ್ನು ವಿಫಲಗೊಳಿಸಬೇಕು” ಎಂದು ಹೇಳಿದರು.

ಮುಸ್ಲಿಂ ಬಾಂಧವ್ಯ ವೇದಿಕೆಯ ಅಧ್ಯಕ್ಷ ಯಾಸೀನ್ ಶಿರೂರ್ ಮಾತನಾಡಿ” ನಾಡಿನ ಸಾಮರಸ್ಯ ಮತ್ತು ಶಾಂತಿಗಾಗಿ ವೇದಿಕೆ ನಿರಂತರ ಶ್ರಮಿಸಲಿದೆ. ಸಮುದಾಯಗಳ ನಡುವೆ ಕಾಲಕಾಲಕ್ಕೆ ಮೂಡುವ ಅಪನಂಬಿಕೆಯನ್ನು ಹೋಗಲಾಡಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ಮುಸ್ಲಿಂ ಬಾಂಧವ್ಯ ವೇದಿಕೆಯು ಲೇಖಕರು ಚಿಂತಕರು ಸಾಹಿತಿಗಳ ವೇದಿಕೆಯಾಗಿರುವುದು ಮಾತ್ರವಲ್ಲ ಕರ್ನಾಟಕದಲ್ಲಿ ಈ ಸ್ವರೂಪದ ಪ್ರಪ್ರಥಮ ವೇದಿಕೆಯಾಗಿದ್ದು ಮುಂಬರುವ ದಿನಗಳಲ್ಲಿ ಸಮಾಜದಲ್ಲಿ ಬಹಳ ಕ್ರಿಯಾಶೀಲ ಭೂಮಿಕೆ ನಿಭಾಯಿಸಲಿದೆ” ಎಂದು ಹೇಳಿದರು. ಮಾಹಿತಿ ಶಿಬಿರದಲ್ಲಿ ಸುರತ್ಕಲ್ ಮಾಜಿ ಶಾಸಕ ಮೊಯಿದ್ದೀನ್ ಬಾವ, ಮಾಜಿ ಮೇಯರ್ ಅಶ್ರಫ್, ಉಡುಪಿಯ ಅಲ್ ಇಬಾದ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅಬ್ದುಲ್ ಲತೀಫ್ ಮದನಿ, ಬಾಂಧವ್ಯ ವೇದಿಕೆಯ ಕಾರ್ಯದರ್ಶಿ ನಿಸಾರ್ ಆಹಮದ್, ಉಮರ್ ಕುಂಇ್ ಸಾಲೆತ್ತೂರ್, ಹಬೀಬ್ ಖಾದರ್, ಶರ್ಫುದ್ದೀನ್ ಕಾಪು, ಮುಬೀನ್ ಸುಳ್ಯ, ಶಬೀರ್ ಆಹ್ಮದ್, ಆರ್ ಎ ಲೋಹಾನಿ, ಎ ಕೆ ಕುಕ್ಕಿಲ,ಅಶ್ರಫ್ ಕುಂದಾಪುರ, ಇಖ್ಬಾಲ್ ಹಾಲಾಡಿ, ರಶೀದ್ ಊಬರ್, ಅಜೀಜ್ ಆಹ್ಮದ್ ಉಡುಪಿ, ಯು ಟಿ ಇರ್ಷಾದ್, ಸೈಫ್ ಬಜಪೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು