ಇತ್ತೀಚಿನ ಸುದ್ದಿ
ದೇಶದ 14 ರಾಜ್ಯಗಳು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಲಿವೆಯೇ?: ಏನು ಹೇಳುತ್ತಿದೆ ಈ ವರದಿ?
20/02/2023, 23:06
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ(reporterkarnataka.com):: ದೇಶದಲ್ಲಿ ಅಧಿಕ ಜನಸಂಖ್ಯೆ ಹೊಂದಿರುವ ಕರ್ನಾಟಕ, ತಮಿಳುನಾಡು, ಮಹಾರಾಷ್ಡ್ರ, ಉತ್ತರ ಪ್ರದೇಶ ಮುಂತಾದ ರಾಜ್ಯಗಳು ಹವಾಮಾನ ವೈಪರಿತ್ಯದ ದುಷ್ಪರಿಣಾಮಗಳನ್ನು ಎದುರಿಸುವ ಭೀತಿಯಲ್ಲಿವೆ ಎಂದು ವರದಿಯೊಂದು ಎಚ್ಚರಿಕೆ ನೀಡಿದೆ.
ಹಾಗೆಂತ ಇದು ನಮ್ಮ ದೇಶದಲ್ಲಿ ಸಿದ್ಧಪಡಿಸಿದ ವರದಿಯಲ್ಲ. ಬದಲಿಗೆ ಆಸ್ಟ್ರೇಲಿಯಾ ದೇಶದ ವರದಿಯೊಂದು ಇದನ್ನು ತಿಳಿಸಿದೆ.
ಪ್ರಾಕೃತಿಕ ವಿಕೋಪಗಳಿಗೆ ಜಗತ್ತಿನ 100 ದೇಶಗಳಲ್ಲಿ ಕೋಟ್ಯಂತರ ಜನರ ಜೀವನ ಅಪಾಯಕ್ಕೆ ಸಿಲುಕಲಿದೆ ಎಂದು ವರದಿಯಲ್ಲಿ ತಿಳಿಸಿದೆ
ಹವಾಮಾನ ವೈಪರಿತ್ಯದಿಂದ ಪ್ರಾಕೃತಿಕ ವಿಕೋಪದ ಭೀತಿ ಎದುರಿಸುತ್ತಿರುವ ಭಾರತದ 14 ರಾಜ್ಯಗಳಲ್ಲಿ ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ಬಿಹಾರ, ಮಹಾರಾಷ್ಟ್ರ, ಅಸ್ಸಾಂ, ರಾಜಸ್ಥಾನ, ಗುಜರಾತ್, ಪಂಜಾಬ್, ಕೇರಳ, ಮಧ್ಯಪ್ರದೇಶ, ಪಶ್ವಿಮ ಬಂಗಾಳ, ಹರಿಯಾಣ, ಆಂಧ್ರಪ್ರದೇಶ ಸೇರಿದೆ.