ಇತ್ತೀಚಿನ ಸುದ್ದಿ
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಮಹಾಶಿವರಾತ್ರಿ ಮಹೋತ್ಸವ: 66 ದೇಶಗಳಿಂದ ಬಂದ ಭಕ್ತರ ದಂಡು
20/02/2023, 11:23

ಬೆಂಗಳೂರು(reporterkarnataka.com): ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ 66 ದೇಶಗಳಿಂದ ಬಂದ ಭಕ್ತರು ಮಹಾಶಿವರಾತ್ರಿಯ ಮಹೋತ್ಸವದಲ್ಲಿ ಪಾಲ್ಗೊಂಡರು. ಜಾಗತಿಕ ಮಾನವತಾವಾದಿಗಳಾದ, ಆಧ್ಯಾತ್ಮಿಕ ಗುರುಗಳಾದ ಗುರುದೇವ್ ಶ್ರೀ ಶ್ರೀ ರವಿಶಂಕರರ ಸಾನ್ನಿಧ್ಯದಲ್ಲಿ ನಡೆದ ವೈದಿಕ ಮಂತ್ರ ಪಠಣ ಭಜನೆ, ಡೋಲು, ತಾಳ ವಾದ್ಯಗಳ ನಾದ ಮುಗಿಲು ಮುಟ್ಟಿತು.
ಆರ್ಟ್ ಆಫ್ ಲಿವಿಂಗ್ ನ ವೈದಿಕ ಪರಂಪರೆಯ ಶಾಲೆಯಾದ ವೇದ ಆಗಮ ಸಂಸ್ಕೃತ ಮಹಾಪಾಠಶಾಲೆಯ ವೈದಿಕ ಪಂಡಿತರು ನಡೆಸಿಕೊಟ್ಟ ಮಹಾ ರುದ್ರಾಭಿಷೇಕದಿಂದ ವಾತಾವರಣವೆಲ್ಲವೂ ಪವಿತ್ರ ಕಂಪನಗಳಿಂದ ತುಂಬಿತ್ತು.
ಮಹೋತ್ಸವದಲ್ಲಿ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಿತು. ವಾಣಿಕ ಗುಪ್ತರವರಿಂದ ಮೋಹನ ವೀಣೆ ವಾದನ ನಡೆಯಿತು. ಮಹಾರುದ್ರ ಪೂಜೆಯ ಗುರುದೇವ್ ಶ್ರೀ ಶ್ರೀ ರವಿಶಂಕರರಿಂದ ನಿರ್ದೇಶಿತ ಧ್ಯಾನವನ್ನು ನಡೆಸಿಕೊಡಲಾಯಿತು. ಇದನ್ನು ಸಾವಿರಾರು ಸ್ಥಳಗಳಲ್ಲಿ ಜಾಲತಾಣದ ನೇರಪ್ರಸಾರ ಮಾಡಲಾಯಿತು. ” ಇಂಡಿಯ ಮೆಡಿಟೇಟ್ಸ್” ಚಳುವಳಿಯ ಅಂಗವಾಗಿ ಪ್ರತಿಯೊಂದು ಮನೆಯಲ್ಲೂ, ಉತ್ತಮ ಮಾನಸಿಕ ಆರೋಗ್ಯಕ್ಕಾಗಿ, ಆಂತರಿಕ ಶಾಂತಿಗಾಗಿ ಧ್ಯಾನ ಮಾಡಬೇಕೆಂದು ಗುರುದೇವರು ಪ್ರೋತ್ಸಾಹಿಸಿದರು.