ಇತ್ತೀಚಿನ ಸುದ್ದಿ
ಅಥಣಿ: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು
19/02/2023, 16:29
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಡ ಘಟನೆ ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ನಡೆದಿದೆ.
ಅನಂತಪೂರ ಗ್ರಾಮದ ಅಥಣಿ ಮುಖ್ಯ ರಸ್ತೆ ಬಸ್ ಸ್ಟಾಪ್ ಸಮೀಪ ಈ ದುರ್ಘಟನೆ ನಡೆದಿದೆ. ರಸ್ತೆ ಪಕ್ಕ ನಿಂತ ಗೂಡ್ಸ್ ಲಾರಿಗೆ ವೇಗದಿಂದ ಬಂದ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನುಚ್ಚುಗುಜ್ಜಾಗಿ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯನ್ನು ರೋಹಿತ ಗಣಪತಿ ಕಾಂಬಳೆ(22) ಎಂದು ಗುರುತಿಸಲಾಗಿದೆ.



ಘಟನಾ ಸ್ಥಿತಿ ಗಮನಿಸಿದ ಅನಂತಪೂರ ಗ್ರಾಮದ ಪ್ರತೇಕದರ್ಶಿಗಳು ನೀಡಿರುವ ಮಾಹಿತಿ ಪ್ರಕಾರ ಜತ್ತ್ ತಾಲೂಕಿನ ಎಕ್ಕುಂಡಿ ಗ್ರಾಮದ ಬೀಗರ ಮನೆಗೆ ಹೋಗುವ ದಾರಿಮಧ್ಯದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.














