ಇತ್ತೀಚಿನ ಸುದ್ದಿ
ಖ್ಯಾತ ತಮಿಳು ಹಾಸ್ಯ ನಟ ಮೈಲ್ ಸಾಮಿ ಇನ್ನಿಲ್ಲ
19/02/2023, 12:31
ಚೆನ್ನೈ(reporterkarnataka.com): ಖ್ಯಾತ ಹಾಸ್ಯ ನಟ ಮೈಲ್ ಸಾಮಿ ಭಾನುವಾರ ಮುಂಜಾನೆ ನಿಧನರಾದರು. ಅವರು ಆರೋಗ್ಯ ತೊಂದರೆ ಅನುಭವಿಸುತ್ತಿದ್ದರು. ಕುಟುಂಬದವರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃಪಟ್ಟಿದ್ದಾರೆ.
ಅವರು ಮೆಚ್ಚುಗೆ ಪಡೆದ ವೇದಿಕೆ ಪ್ರದರ್ಶಕ, ಸ್ಟ್ಯಾಂಡ್-ಅಪ್ ಹಾಸ್ಯನಟ, ಟಿವಿ ನಿರೂಪಕ ಮತ್ತು ರಂಗಭೂಮಿ ಕಲಾವಿದರಾಗಿದ್ದರು. ಅವರು ಜನಪ್ರಿಯ ಹಾಸ್ಯ ಕಾರ್ಯಕ್ರಮದ ನಿರೂಪಕ ಮತ್ತು ತೀರ್ಪುಗಾರರಾಗಿ ತಮಿಳು ದೂರದರ್ಶನದಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು.














