ಇತ್ತೀಚಿನ ಸುದ್ದಿ
ಸಾಲ ಮನ್ನಾ ಘೋಷಿಸದ ಬೊಮ್ಮಾಯಿ ಬಜೆಟ್ ರೈತ ವಿರೋಧಿ: ರೈತ ಮುಖಂಡ ಮಹಾದೇವ ಮಡಿವಾಳ ಆಕ್ರೋಶ
18/02/2023, 15:07
ರಾಹುಲ್ ಅಥಣಿ ಬೆಳಗಾಗಾವಿ
info.reporterkarnataka@gmail.ಕಾಂ
ರೈತರ ಸಾಲ ಮನ್ನಾ ಮಾಡುತ್ತದೆ ಎಂದು ಬಿಜೆಪಿ ಸರ್ಕಾರದ ಮೇಲೆ ಬಹು ನಿರೀಕ್ಷೆ ಇತ್ತು. ಆದರೆ ಈ ಬಜೆಟ್ ನಲ್ಲಿ ರೈತರಿಗೆ ಅನುಕೂಲವಾಗುವ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ. ಇದೊಂದು ರೈತ ವಿರೋಧಿ ಬಜೆಟ್ ಎಂದು ರೈತ ಮುಖಂಡ ಮಹಾದೇವ ಮಡಿವಾಳ ಬೊಮ್ಮಾಯಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಒಳಿತು ಮಾಡುತ್ತೇನೆ ಎಂದು ಹೇಳಿದ ಸರ್ಕಾರ ರೈತ ವಿರೋಧಿ ನೀತಿಗಳನ್ನು ತಂದಿರುವುದಲ್ಲದೆ ಈ ವರ್ಷದ ಬಜೆಟ್ ನಲ್ಲಿ ರೈತರಿಗೆ ಉಪಯೋಗವಾಗದ ಯೋಜನೆಯನ್ನು ಘೋಷಿಸಿ ರೈತ ಕುಲಕ್ಕೆ ಅನ್ಯಾಯ ಮಾಡಿದೆ ಎಂದು ಅವರು ಹೇಳಿದರು.
ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷ ರೂ ಕೊಡುತ್ತೇನೆ ಎಂಬುದು ಹೇಳಲು ಮಾತ್ರ ಚೆಂದ ಕೆಲವೊಂದು ಬ್ಯಾಂಕುಗಳು ರೈತರ ಒಂದು ಎಕರೆ ಹೊಲಕ್ಕೆ ಕೇವಲ 20 ಸಾವಿರಗಳನ್ನು ಮಾತ್ರ ಕೊಡುತ್ತದೆ. ಆದರೆ ಬೊಮ್ಮಾಯಿ ಅವರು ಹೇಳುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.
ಹಿಂದೆ ಇದ್ದ ಸರ್ಕಾರ ಕೃಷಿ ಹೊಂಡಗಳಿಗೆ ಸುಮಾರು 100 ದಿನಗಳವರೆಗೆ ಕೆಲಸ ಕೊಡುತ್ತಿತ್ತು. ಆದರೆ ಇಂದು ಈ ಸರ್ಕಾರ ಆ ಯೋಜನೆಯನ್ನು ಸಹ ಕಡಿತಗೊಳಿಸಿದೆ. ಕೃಷಿ ವಿಶ್ವವಿದ್ಯಾಲಯವನ್ನು ಹೋದ ಬಜೆಟ್ಟಿನಲ್ಲಿ ಸಹ ಘೋಷಣೆಯನ್ನು ಮಾಡಿತ್ತು. ಮತ್ತೆ ಈ ಸಾರಿಯೂ ಘೋಷಣೆ ಮಾಡಿದೆ. ಹಾಗಾದರೆ ಹೋದ ಬಜೆಟ್ಟಿನಲ್ಲಿ ಘೋಷಣೆ ಮಾಡಿದ ಹಣ ಎಲ್ಲಿ ಹೋಯಿತು ಎಂಬ ಯಕ್ಷಪ್ರಶ್ನೆ ನಮ್ಮನ್ನು ಕಾಡುತ್ತಿದೆ ಎಂದರು.
ಇನ್ನೂ ಸಮಯ ಮಿಂಚಿಲ್ಲ. ರೈತರ ಕಾಪಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರದ ಮೂರು ಕೃಷಿ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಮತ್ತು ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು. ಕಬ್ಬಿನ ಸೂಕ್ತ ಬೆಲೆಯನ್ನು ಘೋಷಿಸಬೇಕು ಹಾಗೂ ರೈತರ ಸಾಲವನ್ನು ಸಂಪೂರ್ಣವಾಗಿ ಮಾಡಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ರೈತ ಕುಲ ಈ ರೈತ ವಿರೋಧಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತದೆ ಎಂದು ಹೇಳಿದರು.