ಇತ್ತೀಚಿನ ಸುದ್ದಿ
ಜಲಕುಂಭವಲ್ಲ ಒಣಕುಂಭ: ಕಾಗವಾಡ ಮದಭಾವಿಯಲ್ಲಿ ಕುಡಿಯುವ ನೀರಿಗೆ ತಾತ್ಪರ; ಜನಪ್ರತಿನಿಧಿಗಳಿಗೆ ಹಿಡಿಶಾಪ
14/02/2023, 11:17
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಮದಭಾವಿ ಗ್ರಾಮ ಪಂಚಾಯಿತಿಗೆ ಒಳಪಟ್ಟಿರುವ 3 ನೇ ವಾರ್ಡಿಗೆ ಸಂಬಂಧಿಸಿದ ನಾಯಿಕ, ಗಾರಿಮನಿ, ನರೋಟೆ, ವನಜೋಳೆ, ಕೇಸ್ತಿ,ಮಗದುಮ್ಮ ವಸತಿಗಳು ಇದ್ದು ಇಲ್ಲಿ ಸುಮಾರು ನೂರಾರು ಕುಟುಂಬಗಳಿವೆ. ಆದರೆ ಇಲ್ಲಿಯ ಜನರು ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ.
ತೋಟದ ಸುತ್ತ ಬಾವಿ, ಬೋರವೆಲ್ ಇದ್ದು ಕಾರ್ಖಾನೆಯ ಕಲುಷಿತ ನೀರಿನಿಂದ ಕುಡಿಯಲಿಕ್ಕೆ ಬಾರದ ಹಾಗೆ ಆಗಿದೆ. ಇದರ ಬಗ್ಗೆ ಸಾಕಷ್ಟು ಸಲ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದಾಗ ಕಾಟಾಚಾರಕೆಂದು ಜಲ ಕುಂಭ ನಿರ್ಮಿಸಿ ಅನುದಾನವನ್ನು ಸಂಬಂಧ ಪಟ್ಟವರು ತಗೆದು ತಿಂದಿದ್ದಾರೆ ಎಂದು ಆರೋಪಿಸಲಾಗಿದೆ. ಅದಲ್ಲದೆ ಸುಮಾರು ಎರಡು ವರ್ಷವಾಯಿತು ಜಲ ಕುಂಭವಾಗದೆ ಒಣ ಕುಂಭ ವಾಗಿ ನಿಂತಿದೆ. ಕರ್ನಾಟಕ ಸರಕಾರ ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯತಿಗೆ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿದ್ದು ಇಲ್ಲಿಯ ವಾರ್ಡಿನ ಸದಸ್ಯರು ಇದ್ದು ಇಲ್ಲ ದಂತಾಗಿದೆ. ಇಲ್ಲಿಯ ಜನರು ಚುನಾವಣೆಯಲ್ಲಿ ಮತಕಾಗಿ ಉಪಯೋಗ ಇದ್ದು ಈ ವಸ್ತಿ ಜನರಿಗೆ ರಸ್ತೆ ,ನೀರು ,ವಿದ್ಯುತ ಹಾಗೂ ಇನ್ನಿತರ ಮೂಲ ಸೌಕರ್ಯ ಉಪಯೋಗವಿಲ್ಲದೆ ವಂಚಿತರಾಗಿದ್ದಾರೆ.

ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಜಾನುವಾರು ಹಾಗೂ ಜನರಿಗೆ ನೀರಿನ ವ್ಯವಸ್ಥೆಯನ್ನು ಜಲಕುಂಭಗಳಿಗೆ ನೀರು ಸರಬರಾಜು ಮಾಡಬೇಕು ಇದರ ಬಗ್ಗೆ ಸಂಬಂಧಪಟ್ಟ ಕಾಗವಾಡ ಮತಕ್ಷೇತ್ರದ ಶಾಸಕರು ,ಗ್ರಾಮ ಪಂಚಾಯತ ಸದಸ್ಯರು ಅಧಿಕಾರಿಗಳು ಒಂದು ವಾರದಲ್ಲಿ ಗಮನ ಹರಿಸದಿದ್ದರೆ ಪಂಚಾಯತ್ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡಲಾಗುವದು ಎಂದು ಕಾಂಗ್ರೆಸ್ ಪಕ್ಷದ ಮುಖಂಡರಾದ ಸುರೇಶ ನಾಯಿಕ ಹಾಗೂ ಪ್ರವೀಣ ನಾಯಿಕ ಅವರು ಪತ್ರಿಕಾ ಮಾಧ್ಯಮ ಮುಖಾಂತರ ಎಚ್ಚರಿಕೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಸಿದ್ದಪ್ಪಾ ವನಜೋಳೆ , ಮಾರುತಿ ನರೋಟೆ ,ಭರಮು ನರೋಟೆ ,ಸುರೇಶ ಮಗದುಮ್ಮ,ಕೃಷ್ಣಾ ಗಾರ್ಯಗೋಳ ,ಮಹಾವೀರ ಕೇಸ್ತಿ ,ಹಾಗೂ ಮುಂತಾದವರು ಉಪಸ್ಥಿತರಿದ್ದರು.














