8:55 PM Saturday9 - August 2025
ಬ್ರೇಕಿಂಗ್ ನ್ಯೂಸ್
ಅತ್ತೂರುಕೊಲ್ಲಿ ಅದಿವಾಸಿಗಳ ಪರ ಹೋರಾಟ: ನಟ ಚೇತನ್ ಅಹಿಂಸಾ ಸೇರಿ ಐವರ ವಿರುದ್ಧ… Bangalore | ಪ್ರಧಾನಿ ಮೋದಿ ನಾಳೆ ಬೆಂಗಳೂರಿಗೆ: ವಂದೇ ಭಾರತ್ ಎಕ್ಸ್ ಪ್ರೆಸ್… ರಾಹುಲ್‌ ಗಾಂಧಿಯದ್ದು ಠುಸ್‌ ಪಟಾಕಿ, ಮತದಾರರ ಪಟ್ಟಿ ತಯಾರಿಯಲ್ಲಿ ಪ್ರಧಾನಿ ಅಥವಾ ಬಿಜೆಪಿಯ… ಧರ್ಮಸ್ಥಳದಲ್ಲಿ ಯೂಟ್ಯೂಬರ್ ಗಳ ಮೇಲೆ ಹಲ್ಲೆ ಪ್ರಕರಣ: ಓರ್ವ ಆರೋಪಿಯ ಕೊಕ್ಕಡದಲ್ಲಿ ಬಂಧನ ಆಲಮಟ್ಟಿ ಡ್ಯಾಮ್ ಎತ್ತರ 524 ಮೀಟರ್‌ಗೆ ಹೆಚ್ಚಿಸುವುದು ಕರ್ನಾಟಕದ ಹಕ್ಕು: ಕೇಂದ್ರ ಜಲಶಕ್ತಿ… Chikkamagaluru | ಕಾಫಿನಾಡಲ್ಲಿ ನಿಲ್ಲದ ಕಾಡಾನೆ ಉಪಟಳ: ಹೆದ್ದಾರಿ, ಕಾಫಿ ತೋಟದಲ್ಲಿಯೂ ದಾಂಧಲೆ ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಅಳಿವಿನoಚಿನಲ್ಲಿರುವ ನೀರು ನಾಯಿಗಳ ಕಳ್ಳಬೇಟೆ: ಪ್ರಾಣಿ ಪ್ರಿಯರಿಂದ ಕಾರ್ಯಾಚರಣೆ ಮುತ್ತಾಲಿಕ್ ಜತೆ ವೇದಿಕೆ ಹಂಚಿಕೊಂಡ ಕೈ ಶಾಸಕಿ: ನಯನಾ ಮೋಟಮ್ಮ ವಿರುದ್ಧ ಪ್ರಾಯಶ್ಚಿತ್ತ… ಮತದಾರರ ಹಕ್ಕು ರಕ್ಷಣೆ ರಾಜಕೀಯ ಪಕ್ಷಗಳ ಕರ್ತವ್ಯ: ಡಿಸಿಎಂ ಡಿ.ಕೆ. ಶಿವಕುಮಾರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ‘ರಿದಂ ಆಫ್ ಬಿಎಲ್‌ಆರ್‌’: ವಿಶಿಷ್ಟ ಧ್ವನಿ ಗುರುತು…

ಇತ್ತೀಚಿನ ಸುದ್ದಿ

ಜಕ್ಕಲದಿನ್ನಿ ಗ್ರಾಮದ ದಿಟ್ಟ ರೈತ ವಿದ್ಯಾರ್ಥಿನಿ ಹುಲಿಗೆಮ್ಮಗೆ ಸನ್ಮಾನ,  ಓದಿಗೆ ನೆರವು: ಶ್ರೀದೇವಿ ನಾಯಕ್ ಭರವಸೆ

09/07/2021, 08:01

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ಜಕ್ಕಲದಿನ್ನಿ ಗ್ರಾಮದ ದಿಟ್ಟ ರೈತ ವಿದ್ಯಾರ್ಥಿನಿ ಹುಲಿಗೆಮ್ಮ ಅವರನ್ನು ಭೇಟಿಯಾದ ಸಾಮಾಜಿಕ ಕಾರ್ಯಕರ್ತೆ ಶ್ರೀದೇವಿ ನಾಯಕ್ ಅವರು ಆಕೆಯನ್ನು ಸನ್ಮಾನಿಸಿ ಓದಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಹುಲ್ಲಿಗೆಮ್ಮ ತನ್ನ ತಂದೆ ಭೀಮಣ್ಣ ನಿಧನದ ನಂತರ ಇಡಿ ಕುಟುಂಬವನ್ನು ನಿರ್ವಹಿಸುತ್ತಾಳೆ. ಈಕೆ ಕಾಲೇಜಿನಲ್ಲಿ ಓದಿಕೊಂಡು ಮತ್ತು ಹೊಲದಲ್ಲಿ
ಟ್ರಾಕ್ಟರು ಹೊಡಿಯುವದು, ಕುಂಟೆ ಹೊಡಿಯುವದು, ರಸಾಯನಿಕ ಎಣ್ಣೆ ಸಿಂಪರಣೆ ಮಾಡುವದು, ಇನ್ನೂ  ಆನೇಕ  ಕೆಲಸಗಳನ್ನು ನಿರ್ವಹಿಸುತ್ತಾಳೆ.  ಇಂತಹ  ದಿಟ್ಟ ರೈತ ವಿದ್ಯಾರ್ಥಿನಿ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾಳೆ. ಇಂತಹ ಸಾಧನೆ  ಮಾಡಿದ ರೈತ ವಿದ್ಯಾರ್ಥಿಯನ್ನು  ಮನೆಗೆ ಭೇಟಿ ನೀಡಿ ಮುಂದಿನ ಓದಿಗಾಗಿ ಏನೇ  ಸಹಾಯ ಬೇಕಾದರೂ ನಾನು ಮಾಡುತ್ತೇನೆ ಎಂದು ಶ್ರೀದೇವಿ ನಾಯಕ್ ನುಡಿದರು.

ಮುಂದೆ ಯಾವುದೇ ಕಷ್ಟ ಬಂದರೂ ನಿನ್ನ ಜೊತೆ ನಾನು ಯಾವಾಗಲೂ ಇರುತ್ತೇನೆ ಎಂದು ಶ್ರೀದೇವಿ ನಾಯಕ್ ಧೈರ್ಯ ತುಂಬಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು