ಇತ್ತೀಚಿನ ಸುದ್ದಿ
ಕ್ರೀಡಾಪಟುಗಳು ಗೆದ್ದಾಗ ಬೀಗದೆ, ಸೋತಾಗ ಕುಗ್ಗದೆ ಮುನ್ನುಗ್ಗಿದರೆ ಮಾತ್ರ ಸಾಧನೆ ಸಾಧ್ಯ: ವಿಜಯ ರಾಮೇಗೌಡ
06/02/2023, 12:31
ಮನು ಮಾಕವಳ್ಳಿ ಕೆ.ಆರ್. ಪೇಟೆ ಮಂಡ್ಯ
info.reporterkarnataka@gmail.com
ಕ್ರೀಡಾಪಟುಗಳು ಗೆದ್ದಾಗ ಬೀಗದೆ, ಸೋತಾಗ ಕುಗ್ಗದೆ ಇದ್ದರೆ ಮಾತ್ರ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಗೈಯಲು ಸಾಧ್ಯ,ಎಂದು ಸಮಾಜ ಸೇವಕ, ಕಾಂಗ್ರೆಸ್ ಮುಖಂಡ ವಿಜಯ ರಾಮೇಗೌಡ ಹೇಳಿದರು.
ಕೆ ಆರ್ ಪೇಟೆ ತಾಲೂಕಿನ ಹೊಸಹೊಳಲು ಯುವಕರ ಬಳಗದ ವತಿಯಿಂದ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಪಟುಗಳು ಗೆದ್ದಾಗ ಬೀಗದೆ ಸೋತಾಗ ಕುಗ್ಗದೆ ಕ್ರೀಡಾ ಆಸಕ್ತಿಯಿಂದ ಆಟವಾಡುತ್ತಾ ಹೊರ ಜಿಲ್ಲೆ ಮತ್ತು ರಾಜ್ಯ ಆಟಗಾರರನ್ನು ಮತ್ತು ಪ್ರೇಕ್ಷಕರನ್ನ ಗೌರವಿಸುವ ಮೂಲಕ ಕ್ರೀಡಾ ಕ್ಷೇತ್ರದ ಮೌಲ್ಯ ಹೆಚ್ಚಿಸಿಬೇಕು. ನಾನು ಒಬ್ಬ ಕ್ರೀಡಾಪಟು ಕ್ರೀಡಾಸಕ್ತರ ಪ್ರೋತ್ಸಾಹಕ್ಕೆ ಮತ್ತು ಸಮಾಜಮುಖಿ ಕಾರ್ಯಕ್ರಮಗಳಿಗೆ ಮಿತ್ರ ಫೌಂಡೇಶನ್ ಮೂಲಕ ನನ್ನ ಕೈಲಾದ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ,. ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಲು ಕ್ರೀಡೆ ಅಗತ್ಯವಾಗಿದೆ ಈಗಿನ ಯುವಜನತೆ ಗುಣಮಟ್ಟದ ಶಿಕ್ಷಣ ಜೊತೆ ಕ್ರೀಡೆ ರೂಡಿಸಿಕೊಂಡರೆ ಉಜ್ವಲ ಭವಿಷ್ಯ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಬಳಿಕ ಮಾತನಾಡಿದ ಆರ್ ಟಿ ಓ ಮಲ್ಲಿಕಾರ್ಜುನ್, ಗ್ರಾಮೀಣ ಭಾಗದ ಯುವಕಲ್ಲಿ ಅತ್ಯುತ್ತಮ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಆಟಗಾರರಿದ್ದಾರೆ.ಆದರೆ ಸೂಕ್ತ ವೇದಿಕೆ ಇಲ್ಲದೆ ಅವಕಾಶ ವಂಚಿತರಾಗಿ ಬೆಳಕಿಗೆ ಬರುತ್ತಿಲ್ಲ. ಕ್ರೀಡಾಸಕ್ತರಿಂದ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಸಂಘಟಿಸುವುದರಿಂದ ನೈಪುಣ್ಯತೆ ಉಳ್ಳ ಆಟಗಾರರು ಬೆಳಕಿಗೆ ಬರಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ. ಪ್ರಕಾಶ್, ಕಾಂಗ್ರೆಸ್ ಯುವ ಮುಖಂಡ ಡಾ:ಕೆ ಸಿ ಶ್ರೀಕಾಂತ್, ಪುರಸಭಾ ಸದಸ್ಯ ಹೊಸಹೊಳಲು ಪ್ರವೀಣ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಾಧವ ಪ್ರಸಾದ್, ಪುರಸಭಾ ಸದಸ್ಯ ಡಿ. ಪ್ರೇಮ್ ಕುಮಾರ್, ಕಾಂಗ್ರೆಸ್ ಮುಖಂಡ ರಮೇಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿ ಬಿ ಚೇತನ್ ಕುಮಾರ್, ಪುರಸಭಾ ಮಾಜಿ ಸದಸ್ಯ ರೂಪ ಪ್ರಕಾಶ್, ಕಾಂಗ್ರೆಸ್ ಹಿರಿಯ ಮುಖಂಡ ಅಗ್ರಹಾರಬಾಚಳ್ಳಿ ಕುಮಾರ್, ಹೊಸ ಒಡಲು ಯುವಕರ ಬಳಗದ ಯುವಕರು ಹಾಗೂ ಕ್ರೀಡಾಪಟುಗಳು ಸೇರಿದಂತೆ ಉಪಸ್ಥಿತರಿದ್ದರು.