12:51 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ದೇಶದ ಸದೃಢತೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು: ದಲಿತ ಮಹಿಳಾ ಬೃಹತ್ ಜಾಗೃತಿ ಸಮಾವೇಶಲ್ಲಿ ಸಚಿವ ನಾರಾಯಣ ಗೌಡ

05/02/2023, 18:45

ಮಂಡ್ಯ(reporterkarnataka.com): ದೇಶ ಸದೃಢತೆಗೆ ಮಹಿಳೆಯರ ಪಾತ್ರ ಅಗತ್ಯವಿದೆ ಎಂದು ಸಚಿವ ಕೆ ಸಿ. ನಾರಾಯಣ ಗೌಡ ಹೇಳಿದರು.

ಕೆ ಆರ್ ಪೇಟೆ ಪಟ್ಟಣದಲ್ಲಿರುವ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ದಲಿತ ಮಹಿಳಾ ಒಕ್ಕೂಟ ಸಂಘಟನೆಯಿಂದ ನಡೆದ
ದಲಿತ ಮಹಿಳಾ ಬೃಹತ್ ಜಾಗೃತಿ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಸದೃಢವಾಗಬೇಕೆಂದರೆ ಮಹಿಳೆಯರು ವಿವಿಧ ಸಂಘಟನೆಗಳು ಏರ್ಪಡಿಸುವ ಮಹಿಳಾ ಸಮಾರಂಭಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಎಲ್ಲಾ ರಂಗಗಳಲ್ಲಿ ಮುಂದಿರುವ ಮಹಿಳೆಯರಿಗೆ ದೊರೆಯುವ ಹಕ್ಕುಗಳನ್ನು ಪಡೆಯಲು ಸಂಘಟಿತರಾಗುವ ಮೂಲಕ , ಆರ್ಥಿಕವಾಗಿ,ರಾಜಕೀಯವಾಗಿ ಮಹಿಳೆಯರು ಪ್ರಬಲರಾಗಬೇಕು. ಮಗುವಿಗೆ ಮನೆಯ ಮೊದಲ ಪಾಠ ಶಾಲೆ. ಆದ್ದರಿಂದ ಮಹಿಳೆಯರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಲು ಪ್ರಮುಖ ಪಾತ್ರವಹಿಸಬೇಕು. ಮಹಿಳೆಯರ ಶೋಷಣೆ ಕಾಲ ಅಂತ್ಯಗೊಂಡಿದೆ, ಧೆರ್ಯದಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಹೋರಾಡುವ ಮನೋಭಾವ ಹೊಂದಿ ಸಂಘಟಿತರಾಗುವ ಮೂಲಕ ಒಗ್ಗಟ್ಟಿನ ಪ್ರದರ್ಶನ ನೀಡಬೇಕು ಎಂದರು.
ಬಳಿಕ ಮಾತನಾಡಿದ ದಲಿತ ಸೇನಾ ರಾಜ್ಯಾಧ್ಯಕ್ಷ ಎಂ ಎಸ್ ಜಗನ್ನಾಥ್, ದೇಶದ ಪ್ರತಿ ಹಳ್ಳಿಯಲ್ಲೂ ಅಸ್ಪೃಶ್ಯತೆ, ಜಾತೀಯತೆ ಇಂದಿಗೂ ತಾಂಡವವಾಡುತ್ತಿದೆ. ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ ಇವುಗಳನ್ನು ತಡೆಗಟ್ಟಲು ದಲಿತರು ಸಂಘಟಿತರಾಗಿ ಒಗ್ಗಟ್ಟಿನಿಂದ ಹೋರಾಟಗಳನ್ನು ದಲಿತಪರ ಸಂಘಟನೆಗಳು ಮುಂದುವರಿಸಿಕೊಂಡು ಹೋಗಬೇಕು. ಇಂದಿನ ಯುವ ಪೀಳಿಗೆ ಶಿಕ್ಷಣ ಜೊತೆಯಲ್ಲಿ ದಲಿತಪರ ಹೋರಾಟಗಾರರ ಬದುಕನ್ನು ಅಧ್ಯಯನ ಮಾಡಬೇಕು. ಅವರ ಆದರ್ಶಗಳು ಯುವಕರಿಗೆ ಅಗತ್ಯವಾಗಿದೆ,ದಲಿತ ಸಮಾಜದ ಪರಿಸ್ಥಿತಿಯನ್ನು ಬದಲಾಯಿಸುವ ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ರಾಜಕಾರಣಿಗಳ ವಿರುದ್ಧ ಸಂಘಟನೆ ಮೂಲಕ ಗಟ್ಟಿಯಾಗಿ ನಿಲಬೇಕು ಎಂದರು.


ಪ್ರವಾಸಿ ಮಂದಿರದಿಂದ ಜಯಮ್ಮ ಶಿವಲಿಂಗೆಗೌಡ ಸಮುದಾಯ ಭವನದವರಿಗೂ ಬೆಳ್ಳಿರಥ ಮತ್ತು ನೂರಾರು ಮಹಿಳೆಯರು ಪೂರ್ಣಕುಂಭಕಳಸ ಹಾಗೂ ಜಾನಪದ ಕಲಾತಂಡದೊಂದಿಗೆ ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ವಿಜಯ ರಾಮೇಗೌಡ, ಸಮಾಜ ಸೇವಕ ಆರ್‌ಟಿಓ ಮಲ್ಲಿಕಾರ್ಜುನ್, ಪುರಸಭಾ ಸದಸ್ಯ ಡಿ ಪ್ರೇಮ್ ಕುಮಾರ್, ಪುರಸಭಾ ಸದಸ್ಯ ರವೀಂದ್ರ ಬಾಬು,ತಾಲೂಕು ಬಿಜೆಪಿ ಎಸ್ ಸಿ ಮೋರ್ಚ ಅಧ್ಯಕ್ಷ ರವಿಕುಮಾರ್,ಮಹಿಳಾ ಕರ್ನಾಟಕ ರೈತ ಸಂಘ ಹಸಿರು ಸೇನೆ ರಾಜ್ಯ ಅಧ್ಯಕ್ಷೆ ಮೈನಾವತಿ, ದಲಿತ ಸೇನೆ ಅಧ್ಯಕ್ಷೆ ಚೆನ್ನಮ್ಮ,ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಕಾಂತರಾಜೇಗೌಡ, ತಾಲೂಕು ದಲಿತ ಮಹಿಳಾ ಒಕ್ಕೂಟ ಅಧ್ಯಕ್ಷೆ ಮೀನಾಕ್ಷಿ ನಾಗರಾಜು, ಗೌರವಾಧ್ಯಕ್ಷರಾದ ರತ್ನಮ್ಮ ಪುಟ್ಟಸ್ವಾಮಿ,ಜಯಲಕ್ಷ್ಮಿ ಸುನಿಲ್ ಕುಮಾರ್ ತಲುಜಾ, ಪ್ರಧಾನ ಕಾರ್ಯದರ್ಶಿ ಅಶ್ವಿನಿ ಗುರು ಮಲ್ಲೇಶ್, ಖಜಾಂಚಿ ಲಕ್ಷ್ಮಮ್ಮ ರಾಜು, ಸಹಕಾರ್ಯದರ್ಶಿ ಸಾಕಮ್ಮ ಬಸವರಾಜ್, ಪದಾಧಿಕಾರಿಗಳಾದ ರಾಜಮ್ಮ ಜವರಯ್ಯ, ದಾಕ್ಷಾಯಿಣಿ ಸರಸ್ವತಮ್ಮ ಪೂರ್ಣಿಮಾ ಸರೋಜಮ್ಮ ಚಂದ್ರಮ್ಮ,ಹರಿಹರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಮ್ಮ ಜಯರಾಮ್, ಬಿಜೆಪಿ ಮುಖಂಡ ಸುನಿಲ್ ಕುಮಾರ್, ಮಂಜು ಮುದುಗೆರೆ, ಸೋಮೇಶ್, ಗಿರೀಶ್, ಮಂಜುನಾಥ್, ರಾಮಕೃಷ್ಣ, ಮಾಹೇಶ್,ದಲಿತ ಮುಖಂಡ ಮಾಕವಳ್ಳಿ ರಮೇಶ್, ರೇವಣ್ಣ ವಡ್ಡರಹಳ್ಳಿ ಸೇರಿದಂತೆ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು