11:03 PM Wednesday27 - November 2024
ಬ್ರೇಕಿಂಗ್ ನ್ಯೂಸ್
ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ…

ಇತ್ತೀಚಿನ ಸುದ್ದಿ

ಕಾಯಕದಲ್ಲೇ ತೃಪ್ತಿ ಕಾಣುವ ಶ್ರಮಜೀವಿಗಳಿಂದಲೇ ಸ್ವಸ್ಥ ಸಮಾಜ ಸಾಧ್ಯ: ಶಾಸಕ ಡಾ. ಮಂಜುನಾಥ ಭಂಡಾರಿ

30/01/2023, 12:35

ಚಿತ್ರ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಕಾಯಕದಲ್ಲೇ ತೃಪ್ತಿ ಕಾಣುವ ಶ್ರಮಜೀವಿಗಳಿಂದಗಿಯೇ ಸಮಾಜ ಆರೋಗ್ಯಯುತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಹೇಳಿದರು.

ನಗರವನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರು, ಮಳೆ ಗಾಳಿ ಲೆಕ್ಕಿಸದೇ ನಿರಂತರ ವಿದ್ಯುತ್‌ ಪೂರೈಕೆಗೆ ಶ್ರಮಿಸುವ ಲೈನ್‌ಮ್ಯಾನ್‌ಗಳು, ಸುಡುಬಿಸಿಲು ಲೆಕ್ಕಿಸದೆ ಕಾರ್ಯನಿರ್ವಹಿಸುವ ಅಂಚೆ ಬಡವಾಡೆ ಸಿಬ್ಬಂದಿ, ಸಾರಿಗೆ ಸಿಬ್ಬಂದಿ, ಸಂಚಾರ ಪೊಲೀಸರು, ಆರೋಗ್ಯ ಕಾರ್ಯಕರ್ತರು, ಸ್ಮಶಾನ ಕಾರ್ಮಿಕರು ಸೇರಿದಂತೆ ವಿವಿಧ ಶ್ರಮಿಕ ವರ್ಗದವರಿಗೆ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಸದ್ದಿಲ್ಲದ ಕಾಯಕದ ಮೂಲಕವೇ ಸಮಾಜದ ಸ್ವಾಸ್ಥ್ಯ ಕಾಪಾಡುವವರಿಗೆ, ಟೀಮ್ ಬ್ಲ್ಯಾಕ್‌ ಆ್ಯಂಡ್‌ ವೈಟ್‌ ವತಿಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮವನ್ನು ‘ಶ್ರಮ ಏವ ಜಯತೇ’ ಕಾರ್ಯಕ್ರಮದಲ್ಲಿ ಹಾಡು– ನೃತ್ಯಗಳ ಮೂಲಕ ನಮನ ಸಲ್ಲಿಸಲಾಯಿತು. ಶ್ರಮ ಜೀವಿಗಳ ಸಮರ್ಪಣಾ ಭಾವದ ಬಗ್ಗೆ ಮನತುಂಬಿವಂತಹ ಹಾಡುಗಳನ್ನು ಮೈಮ್‌ ರಾಮ್‌ದಾಸ್ ಬಳಗದವರು ಪ್ರಸ್ತುತಪಡಿಸಿದರು.
ಶ್ಮಶಾನ ಕಾರ್ಮಿಕ ಪದ್ಮನಾಭ ಅಂಚನ್‌ ಕಕ್ಕೆಬೆಟ್ಟು, ಪೌರಕಾರ್ಮಿಕರಾದ ಸುಶೀಲಾ, ಒಳಚರಂಡಿ ಸ್ವಚ್ಛಗೊಳಿಸುವ ರವೀಂದ್ರ, ಬಸ್‌ ನಿರ್ವಾಹಕ ಭಗವಾನ್‌ದಾಸ್‌ ಪೂಜಾರಿ, ಸಂಚಾರ ಪೊಲೀಸ್‌ ಸಿಬ್ಬಂದಿ ಕಾಂತಿನಾಥ್‌ ಬಿ.ಎಂ. ಮತ್ತು ಯಶವಂತ್‌, ಅಂಚೆ ಬಟವಾಡೆ ಸಿಬ್ಬಂದಿ ರಾಮಚಂದ್ರ ಕಾಮತ್‌, ಲೈನ್‌ಮ್ಯಾನ್‌ ಸದಾನಂದ, ಆರೋಗ್ಯ ಸಿಬ್ಬಂದಿ ಶಿವಾನಂದ, ಖಾಸಗಿ ಬಸ್‌ ಸಿಬ್ಬಂದಿ ಉಮೇಶ್‌, ಆರೋಗ್ಯ ಸಿಬ್ಬಂದಿ ಹೇಮಲತಾ ಅಂಚನ್‌ ಅವರನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾತನಾಡಿ ‘ಕಾಯಕದಲ್ಲೇ ತೃಪ್ತಿ ಕಾಣುವ ಶ್ರಮಜೀವಿಗಳಿಂದಗಿಯೇ ಸಮಾಜ ಆರೋಗ್ಯಯುತವಾಗಿದೆ’ ಎಂದರು.
ಬಿಜೆಪಿ ಮುಖಂಡ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ‘ಶ್ರಮಜೀವಿಗಳು ಕೆಲಸದಲ್ಲೇ ಭಗವಂತನನ್ನು ಕಾಣುತ್ತಾರೆ. ಒಳಚರಂಡಿ ಸ್ವಚ್ಛಗೊಳಿಸುವ ಕಾರ್ಮಿಕರನ್ನು ಕಾಯಂಗೊಳಿಸದ ವ್ಯವಸ್ಥೆಯ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂತಹ ಕಾರ್ಮಿಕರ ಬದುಕಿನಲ್ಲಿ ‌ಬೆಳಕು ತರುವುದಕ್ಕೆ ಕೈಜೋಡಿಸಬೇಕು’ ಎಂದರು.

ಎಸಿಪಿ ಗೀತಾ ಕುಲಕರ್ಣಿ ಮಾತನಾಡಿ, ಪೊಲೀಸ್ ಇಲಾಖೆಗೆ ಇಂತಹ ಕಾರ್ಯದ ಬಗ್ಗೆ ಇಂತನೆ ಬರಲಿಲ್ಲ. ಆದರೆ ಇಂತಹ ಅರ್ಥಪೂರ್ಣ ಕಾರ್ಯಕ್ಕೆ ಟೀಮ್ ಬ್ಲ್ಯಾಕ್ ಅಂಡ್ ವೈಟ್ ಧನ್ಯವಾದಿಸಿದರು. ಯುವಕರು ಸಾಮಾಜಿಕವಾಗಿ ತೊಡಗಿಸಿಕೊಳ್ಳಿ ಎಂದು ಅವರು ಹೇಳಿದರು.
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎ.ಶಾಂತಾರಾಮ ಶೆಟ್ಟಿ, ಆಸರೆ ಫೌಂಡೇಷನ್‌ನ ಡಾ.ಆಶಾಜ್ಯೋತಿ ರೈ, ಪತ್ರಕರ್ತ ಮನೋಹರ ಪ್ರಸಾದ್, ನಿವೃತ್ತ ಸೇನಾನಿ ನಿಟ್ಟೆಗುತ್ತು ಶರತ್‌ ಭಂಡಾರಿ, ಡಾ.ಅಣ್ಣಯ್ಯ ಕುಲಾಲ್, ಬ್ರಿಜೇಶ್‌ ಚೌಟ, ಅಂಚೆ ಅಧೀಕ್ಷಕ ಶ್ರೀಹರ್ಷ, ಟೀಮ್ ಬ್ಲ್ಯಾಕ್ ಆ್ಯಂಡ್ ವೈಟ್‌ನ ಅಭಿಷೇಕ್ ಶೆಟ್ಟಿ, ಕಾರ್ತಿಕ್ ಶೆಟ್ಟಿ, ಕಿರಣ್ ದೊಂಡೋಲೆ ಇದ್ದರು.

ಚೇತನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು