ಇತ್ತೀಚಿನ ಸುದ್ದಿ
ಹೇಮಾವತಿ ನದಿಗೆ ಕಾಫಿ ಪಲ್ಪರ್ ನೀರು: ಜನ, ಜಾನುವಾರು, ಜಲಚರಗಳಿಗೆ ಕಂಟಕ; ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ
29/01/2023, 21:46

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka agnail.com
ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನ ಜಿ ಅಗ್ರಹಾರ ಸಮೀಪ ಹೇಮಾವತಿ ನದಿಗೆ ಕಾಫಿ ಪಲ್ಪರ್ ನೀರು ಬಿಟ್ಟಿದ್ದು ಹೇಮವತಿ ನದಿ ಕಲುಷಿತವಾಗಿದ್ದು ಜನ ಜಾನುವಾರುಗಳಿಗೆ ಹಾಗೂ ಜಲಚರಗಳಿಗೆ ಮಾರಕವಾಗಿದೆ. ಅಧಿಕಾರಿ ಸಿಬ್ಬಂದಿಗಳಲ್ಲಿ ವಿನಂತಿ ಜೀ ಅಗ್ರಹಾರ ಭಾಗದಿಂದ ಕೆಳಗೆ ಸಿಗಳ್ಳಿ ಚಕ್ಕುಡಿಗೆ ಅಚ್ಚರಡಿ ಭಾಗವಾಗಿ ಹರಿಯುತ್ತಿರುವ ಹೇಮಾವತಿ ನದಿ ನೀರು ಯಾರೂ ಅನಾಗರಿಕರು ರಾತ್ರಿ ಸಮಯದಲ್ಲಿ ರೋಬೆಸ್ಟ್ ಕಾಫಿ ಪಲ್ಪರ್ ಮಾಡಿ ಅದರ ಕಲುಷಿತ ನೀರನ್ನು ಹೇಮಾವತಿ ನದಿಗೆ ಹರಿಬಿಡುತ್ತಿದ್ದಾರೆ.
ಈ ನೀರನ್ನು ಕುಡಿದ ಅನೇಕ ಜಲಚರ ಪ್ರಾಣಿಗಳು, ಸಾವಿರಾರು ಜಾನುವಾರುಗಳು ಅಷ್ಟೇ ಯಾಕೆ ಮನುಷ್ಯರು ಸಹ ಈ ನೀರನ್ನು ಕುಡಿದು ಅನಾರೋಗ್ಯಕ್ಕೆ ತುತ್ತಾಗುವ ಮುಂಚೆ ತಹಸೀಲ್ದಾರರು ಇತ್ತ ಗಮನಹರಿಸಿ ಯಾರು ಇಂತ ಅನಾಗರಿಕೆ ಕೆಲಸ ಮಾಡುತ್ತೀದ್ದನೋ ಅಂಥವರಿಗೆ ಶಿಕ್ಷೆ ಕೊಡಿಸಬೇಕು. ಹೇಮಾವತಿ ನದಿಯ ದಡದ ಮೇಲೆ ನಡೆದುಕೊಂಡು ಹೋದರು ಈ ಪಲ್ಪರ್ ಘಾಟು ಬರುತ್ತಿದೆ. ನೀರು ಪೂರ್ತಿ ಕಪ್ಪು ಬಣ್ಣದಿಂದ ಕೂಡಿರುತ್ತದೆ ದಯವಿಟ್ಟು ಅಧಿಕಾರಿಗಳು ಇವತ್ತೇ ಸ್ಥಳಕ್ಕೆ ಬಂದು ಪರಿಶೀಲಿಸಿ ಕೂಡಲೆ ಕ್ರಮ ಜರುಗಿಸಿ ಇಲ್ಲವಾದಲ್ಲಿ ಲಕ್ಷಾಂತರ ಜಲಚರ ಜೀವಿಗಳು ಸರ್ವ ನಾಶವಾಗುತ್ತವೆ