7:10 PM Monday29 - June 2026
ಬ್ರೇಕಿಂಗ್ ನ್ಯೂಸ್
ಗೆಳೆಯ ವೈಶಾಖ್‌ ಆತ್ಮಹತ್ಯೆ ಪ್ರಕರಣ: ಫಸ್ಟ್‌ ರಿಯಾಕ್ಷನ್ ಕೊಟ್ಟ ನಟಿ ಕೃಷಿ ತಾಪಂಡ ರೆಸಾರ್ಟ್ ನ ಈಜುಕೊಳದಲ್ಲಿ ದುರಂತ | 10 ಅಡಿ ಎತ್ತರದಿಂದ 4 ಅಡಿ… 2 ದಿನಗಳ ರಾಜ್ಯ ಪ್ರವಾಸ ಮುಗಿಸಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ… ಆರೆಸ್ಸೆಸ್ ವಿರುದ್ಧ ಪೋಸ್ಟ್ : ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್… ಕ್ರಿಪ್ಟೋ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ತೀರ್ಥಹಳ್ಳಿ ಕಾಲೇಜು ಪ್ರಾಧ್ಯಾಪಕ… ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ತೂರಿದ ಪ್ರಕರಣ | 4 ಮಂದಿ… ಮುಂಬೈ | ಮೊಹರಂ ವೇಳೆ ಸಾಮೂಹಿಕ ವಿಷಪ್ರಾಶನಕ್ಕೆ ಸಂಚು: 14,900 ಕ್ಯಾಪ್ಸುಲ್‌ ವಶಕ್ಕೆ;… ತೀರ್ಥಹಳ್ಳಿ: ಪಲ್ಸ್ ಪೋಲಿಯೋ ಅಭಿಯಾನಕ್ಕೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ಟ್ರೆಕ್ಕಿಂಗ್ ವೇಳೆ ದುರಂತ: ಹೃದಯಾಘಾತದಿಂದ ಚಿತ್ರ ನಿರ್ಮಾಪಕ ಭಾ ಮಾ ಹರೀಶ್ ಪುತ್ರ… ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು

ಇತ್ತೀಚಿನ ಸುದ್ದಿ

ಕರ್ನಾಟಕವನ್ನು ಎಟಿಎಂ ಮಾಡಲು ಕಾಂಗ್ರೆಸ್ ಯತ್ನಿಸುತ್ತಿದೆ: ಬಂಟ್ವಾಳ ಗ್ರಾಮ ವಿಕಾಸ ಯಾತ್ರೆ ಸಮಾರೋಪದಲ್ಲಿ ಅಣ್ಣಾಮಲೈ ಆರೋಪ

28/01/2023, 23:25

ಬಂಟ್ವಾಳ(reporterkarnataka.com): ಕರ್ನಾಟಕಕ್ಕೆ ಬಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಬಂದು ಪ್ರತಿ ಮನೆಯ ಮಹಿಳೆಗೆ 2000 ಸಾವಿರ ಕೊಡುತ್ತೇವೆ ಅಂತ ಹೇಳಿದ್ದಾರೆ. ಕರ್ನಾಟಕದ ಮತದಾರರು ಈ ಸುಳ್ಳು ಭರವಸೆ ನಂಬ ಬಾರದು. ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದು ಕರ್ನಾಟಕವನ್ನು ಎಟಿಎಂ ಆಗಿ
ಬಳಸಿಕೊಳ್ಳಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಇದಕ್ಕೆ ಕರ್ನಾಟಕದ ಜನ ಅವಕಾಶ ನೀಡ ಬಾರದು ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದರು.

ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಗ್ರಾಮ ವಿಕಾಸ ಯಾತ್ರೆ ಸಮಾರೋಪ ಸಮಾರಂಭ ವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಕೋಮು ಗಲಭೆಗಳಿಂದ ಬಂಟ್ವಾಳ ನಲುಗಿತ್ತು. ಕಳೆದ ನಾಲ್ಕು ವರೆ ವರ್ಷ ದಲ್ಲಿ ಬಂಟ್ವಾಳ ಚಿತ್ರಣ ಬದಲಾಗದೆ. ಬಂಟ್ವಾಳ ಶಾಂತವಾಗಿದೆ ಬಹಳ ಅಭಿವೃದ್ದಿ ಯಾಗಿದೆ. ಬಂಟ್ವಾಳದಲ್ಲಿ ಸಾಮರಸ್ಯ ನೆಲೆಸಿದೆ ಎಂದರು.
ತಮಿಳುನಾಡಿನಲ್ಲಿ ಡಿಎಂಕೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. ಡಿಎಂ ಕೆ ಮತ್ತು ಕಾಂಗ್ರೆಸ್ ನವರು ಹೇಳಿದ ಸುಳ್ಳನ್ನೇ ಕರ್ನಾಟಕ ದಲ್ಲಿ ರಿಪೀಟ್ ಆಗ್ತಿದೆ. ತಮಿಳುನಾಡಿನ ರೇಷನ್ ಕಾರ್ಡ್ ಗೆ ಪ್ರತಿ ತಿಂಗಳು 1000 ಸಾವಿರ ಕೊಡುವುದಾಗಿ ಹೇಳಿದ್ದರು.

21 ತಿಂಗಳಾಯಿತು ಯಾವೊಬ್ಬರಿಗೂ ಈ ವರವಗೂ 1ರೂಪಾಯಿ ಬಂದಿಲ್ಲ. ಕೇವಲ ಸುಳ್ಳು ಹೇಳಿಕೊಂಡೆ ಅಧಿಕಾರಕ್ಕೆ ಬಂದಿದ್ದಾರೆ ಎಂದು ಅವರು ನುಡಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಎದ್ದರೆ ಕೂರಲು ಆಗದ, ಕೂತರೆ ನಿಲ್ಲಲು ಆಗದ ಶಾಸಕ ನಮ್ಮವರಲ್ಲ , ಇವರ ಪ್ರಜಾಧ್ವನಿ ಯಾತ್ರೆ ಕೇವಲ ಬಿಜೆಪಿ ಬೈಯ್ಯುವ ಯಾತ್ರೆ ಎಂದು ಟೀಕಿಸಿದರು.

ಈಗ 200 ಯುನಿಟ್ ಕರೆಂಟ್ ಫ್ರೀ ಕೊಡ್ತೇವೆ ಅಂತ ಹೇಳುತ್ತಾರೆ. ಬೆಳ್ಳಾರೆಯ ಸಾಯಿ ಗಿರಿಧರ್ ಕರೆಂಟ್ ಇಲ್ಲ ಅಂತ ಡಿಕೆಶಿ ಗೆ ಕಾಲ್ ಮಾಡಿದ್ರು,ಎಂಥ ಮಾರ್ರೆ ಸಾವು ಕರೆಂಟ್ ಇಲ್ಲ ಅಂತ ಗಿರಿಧರ್ ರೈ ಹೇಳಿದ್ರು,ಆದರೆ ನನ್ನ ಸಾವಿನ ಬಗ್ಗೆ ಮಾತನಾಡಿದ ಅಂತ ಡಿಕೆಶಿ, ಗಿರಿಧರ್ ರೈಯನ್ನ ಪೊಲೀಸ್ ಮೂಲಕ ಅರೆಸ್ಟ್ ಮಾಡಿಸಿದ್ರು,ಇಂಥವರು ಇನ್ನೂರು ಯುನಿಟ್ ಕರೆಂಟ್ ಫ್ರೀ ಕೊಡ್ತಾರಂತೆ ಎಂದು ಸಿ.ಟಿ. ರವಿ ಲೇವಡಿ ಮಾಡಿದರು.
ಶಾಸಕ ರಾಜೇಶ್ ನಾಯ್ಕ್, ಪಕ್ಷದ ಮುಖಂಡರುಗಳು ,ಕಾರ್ಯಕರ್ತರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು