ಇತ್ತೀಚಿನ ಸುದ್ದಿ
ನಾಗಮಂಗಲ: ವಿದ್ಯುತ್ ಖಾಸಗೀಕರಣ, ಕೃಷಿ ಕಾಯ್ದೆ ರದ್ದತಿ ಆಗ್ರಹಿಸಿ ಫೆ. 3ರಂದು ರೈತ ಸಂಘದಿಂದ ಬೃಹತ್ ಪ್ರತಿಭಟನೆ
25/01/2023, 18:23
ದೇವಲಾಪುರ ಜಗದೀಶ್ ನಾಗಮಂಗಲ ಮಂಡ್ಯ
info.reporterkarnataka@gmail.com
ಕರ್ನಾಟಕ ರಾಜ್ಯ ರೈತ ಸಂಘದಿಂದ ಫೆಬ್ರವರಿ 3ರಂದು ನಾಗಮಂಗಲದಲ್ಲಿ ಬೃಹತ್ ರೈತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು
ನಾಗಮಂಗಲ ತಾಲ್ಲೂಕು ಘಟಕದ ಅಧ್ಯಕ್ಷ ದೊಡ್ಡಘಟ್ಟ ಸುರೇಶ್ ಹೇಳಿದರು.
ಅವರು ನಾಗಮಂಗಲ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ವಿದ್ಯುತ್ ಖಾಸಗಿಕರಣ ರದ್ದತಿ, ಕೃಷಿ ಕಾಯಿದೆ ಮಾರಕವಾಗಿರುವ ಕಾಯಿದೆ ಸರ್ಕಾರ ಕೂಡಲೇ ರದ್ದುಪಡಿಸುವಂತೆ ಮತ್ತು ರಾಗಿ ಭತ್ತ ಕೊಬ್ಬರಿ ಖರೀದಿ ಕೇಂದ್ರವನ್ನ ಮತ್ತು ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಲು ಬೃಹತ್ ರೈತ ಪ್ರತಿಭಟನೆ ಮತ್ತು ಧರಣಿ ಯನ್ನು ಏರ್ಪಡಿಸಲಾಗಿದೆ.
ಸರ್ಕಾರವು ರೈತರಿಗೆ ಸಮರ್ಪಕವಾಗಿ ಇದುವರೆಗೂ ಬೆಲೆ ನಿಗದಿ ಮಾಡದೆ ಇರುವುದು ಹಾಲು, ಕೊಬ್ಬರಿ ಕನಿಷ್ಠ ದರ ನಿಗದಿ ಮಾಡದೇ ಇರುವುದು ರೈತರ ಸಂಕಷ್ಟ ಕೇಳುವರು ಇಲ್ಲದಂತಾಗಿದೆ. ಪ್ರತಿಯೊಬ್ಬ ರೈತರು ಮಳೆ ಅವಾಂತರದಿಂದಾಗಿ ಬೀದಿಗಳಿದು ಹೋರಾಟ ಮಾಡುವ ಸಂಭವವಾಗಿದ್ದು ಕೂಡಲೇ ಸರ್ಕಾರ ಕೃಷಿಗೆ ಸಂಬಂಧಪಟ್ಟಂತಹ ಮಾರಕವಾದ ಕಾಯ್ದೆಗಳನ್ನು ಕೈ ಬಿಟ್ಟು ರೈತರಿಗೆ ಪೂರಕವಾದ ಯೋಜನೆಗಳನ್ನು ಕೈಗೊಳ್ಳುವ ಸಲುವಾಗಿ ಫೆಬ್ರವರಿ 3ರಂದು ನಾಗಮಂಗಲ ಟಿಬಿ ವೃತ್ತದಿಂದ ರೈತರ ಬೃಹತ್ ಮೆರವಣಿಗೆಯೊಂದಿಗೆ ಮಿನಿ ವಿಧಾನಸೌಧದ ಮೆರವಣಿಗೆ ಮಾಡಲಾಗಿದ್ದು ರೈತರ ಮನವಿಯನ್ನು ಸರ್ಕಾರಕ್ಕೆ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ(ಮೂಲ ಸಂಘಟನೆ)ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ವೆಂಕಟೇಶ್, ಕಾರ್ಯಾಧ್ಯಕ್ಷ ಜಿ.ಟಿ.ಹರೀಶ್, ಉಪಾಧ್ಯಕ್ಷ ಕೆ.ಜೆ.ಯೋಗೇಶ್,
ಬೆಳ್ಳೂರು ಹೋಬಳಿ ಮಟ್ಟದ ಅಧ್ಯಕ್ಷ ಪಾಪಣ್ಣ, ಖಜಾಂಚಿ ಬೋರೇಗೌಡ, ಕಾರ್ಯದರ್ಶಿ ದೇವರಾಜ ಹಾಗೂ ಇತರರು ಉಪಸ್ಥಿತರಿದ್ದರು.