4:53 PM Tuesday30 - June 2026
ಬ್ರೇಕಿಂಗ್ ನ್ಯೂಸ್
ಗೆಳೆಯ ವೈಶಾಖ್‌ ಆತ್ಮಹತ್ಯೆ ಪ್ರಕರಣ: ಫಸ್ಟ್‌ ರಿಯಾಕ್ಷನ್ ಕೊಟ್ಟ ನಟಿ ಕೃಷಿ ತಾಪಂಡ ರೆಸಾರ್ಟ್ ನ ಈಜುಕೊಳದಲ್ಲಿ ದುರಂತ | 10 ಅಡಿ ಎತ್ತರದಿಂದ 4 ಅಡಿ… 2 ದಿನಗಳ ರಾಜ್ಯ ಪ್ರವಾಸ ಮುಗಿಸಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ… ಆರೆಸ್ಸೆಸ್ ವಿರುದ್ಧ ಪೋಸ್ಟ್ : ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್… ಕ್ರಿಪ್ಟೋ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ತೀರ್ಥಹಳ್ಳಿ ಕಾಲೇಜು ಪ್ರಾಧ್ಯಾಪಕ… ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ತೂರಿದ ಪ್ರಕರಣ | 4 ಮಂದಿ… ಮುಂಬೈ | ಮೊಹರಂ ವೇಳೆ ಸಾಮೂಹಿಕ ವಿಷಪ್ರಾಶನಕ್ಕೆ ಸಂಚು: 14,900 ಕ್ಯಾಪ್ಸುಲ್‌ ವಶಕ್ಕೆ;… ತೀರ್ಥಹಳ್ಳಿ: ಪಲ್ಸ್ ಪೋಲಿಯೋ ಅಭಿಯಾನಕ್ಕೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ಟ್ರೆಕ್ಕಿಂಗ್ ವೇಳೆ ದುರಂತ: ಹೃದಯಾಘಾತದಿಂದ ಚಿತ್ರ ನಿರ್ಮಾಪಕ ಭಾ ಮಾ ಹರೀಶ್ ಪುತ್ರ… ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು

ಇತ್ತೀಚಿನ ಸುದ್ದಿ

ಸೈಂಟ್ ಮೆರೀಸ್ ದ್ವೀಪ: ಡಿಎಸ್ ಎಲ್ ಆರ್ ಕ್ಯಾಮೆರಾ ಬಳಸಿ ಚಿತ್ರೀಕರಣಕ್ಕೆ ಶುಲ್ಕ; ಮಿಕ್ಕಿದೆಲ್ಲ ಉಚಿತ

23/01/2023, 22:18

ಉಡುಪಿ(reporterkarnataka.com): ಸೈಂಟ್ ಮೆರೀಸ್ ದ್ವೀಪದಲ್ಲಿ ಡಿಎಸ್ ಎಲ್ ಆರ್ ಕ್ಯಾಮೆರಾ ಬಳಸಿ ನಡೆಸುವ ಯಾವುದೇ ಚಿತ್ರೀಕರಣಕ್ಕೆ ಶುಲ್ಕ ವಿಧಿಸಿ ಆದಾಯಗಳಿಸಲು ಅವಕಾಶ ಕಲ್ಪಿಸಲಾಗಿದೆ.

ಮಲ್ಪೆ ಅಭಿವೃದ್ಧಿ ಸಮಿತಿ ವತಿಯಿಂದ ಸೀವಾಕ್ ಪ್ರದೇಶ ಮತ್ತು ಸೈಂಟ್‌ಮೆರೀಸ್ ದ್ವೀಪ ಪ್ರದೇಶದ ನಿರ್ವಹಣೆ ಕುರಿತು ಕರೆಯಲಾದ ಟೆಂಡರಿನಲ್ಲಿ ದ್ವೀಪದಲ್ಲಿ ಕೈಗೊಳ್ಳುವ ಯಾವುದೇ ರೀತಿಯ ಚಿತ್ರೀಕರಣಕ್ಕೆ ಡಿ.ಎಸ್.ಎಲ್.ಆರ್ ಕ್ಯಾಮೆರಾಗಳಿಗೆ ಶುಲ್ಕ ವಿಧಿಸಿ ನಿರ್ವಹಣಾದಾರರಿಗೆ ಆದಾಯ ಗಳಿಸುವ ಬಗ್ಗೆ ಅವಕಾಶ ನೀಡಲಾಗಿದೆ. ಆದರೆ ಇತರ ಕ್ಯಾಮೆರಾಗಳಾದ ಸೋನಿ ಹ್ಯಾಂಡಿ ಕ್ಯಾಮ್, ಕ್ಯಾನೋನ್ ಇ.ಒ.ಎಸ್, ಡಿಜಿಟಲ್ ಕ್ಯಾಮೆರಾ, ಸೋನಿ ಎಚ್.ಡಿ.ಆರ್.ಸಿ.ಎಕ್ಸ್ ಕ್ಯಾಮೆರಾಗಳನ್ನು ಮತ್ತು ಮೊಬೈಲ್‌ಗಳನ್ನು ಸೈಂಟ್‌ ಮೆರೀಸ್ ದ್ವೀಪದಲ್ಲಿ ಬಳಸಲು ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಉಡುಪಿ ನಗರಸಭೆಯ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

ಸೆಂಟ್‌ ಮೆರೀಸ್ ದ್ವೀಪದಲ್ಲಿ ಪ್ರವಾಸಿಗರಿಂದ ಕ್ಯಾಮೆರಾಗಳಿಗೆ ಪಡೆಯುವ ಶುಲ್ಕವನ್ನು ರದ್ದುಗೊಳಿಸುವಂತೆ ಹಲವಾರು ಕಡೆಗಳಿಂದ ಹಾಗೂ ಜಾಲತಾಣದಲ್ಲಿ ಆಗ್ರಹಿಸುತ್ತಿದ್ದು, ದ್ವೀಪದಲ್ಲಿ ಯಾವುದೇ ರೀತಿಯ ಚಿತ್ರೀಕರಣಕ್ಕೆ ಉಪಯೋಗಿಸುವ ಡಿ.ಎಸ್.ಎಲ್.ಆರ್ ಕ್ಯಾಮೆರಾಗಳಿಗೆ ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡುವ ಕುರಿತು ಮರು ಪರಿಶೀಲಿಸಲಾಗುವುದು. ಇತರೆ ಕ್ಯಾಮೆರಾಗಳಿಗೆ ದ್ವೀಪದಲ್ಲಿ ಉಪಯೋಗಿಸಲು ಯಾವುದೇ ನಿರ್ಬಂಧ ಇರುವುದಿಲ್ಲವೆಂದು ಪ್ರಕಟಣೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು