6:07 AM Friday29 - November 2024
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ, ಗರ್ಭಿಣಿಯರ ಸಾವು: ತನಿಖೆಗೆ ಅಗ್ರಹಿಸಿ ಜನವಾದಿ ಮಹಿಳಾ ಸಂಘಟನೆ… ಲಂಡನ್ ವಾಲ್ವ್ಸ್ 2024 ರಲ್ಲಿ ಮಿಂಚಿದ ಭಾರತ: ಹೃದಯ ಕವಾಟ ಆವಿಷ್ಕಾರ ‘ಮೈವಾಲ್… ಹುಣಸಗಿ: ವಿದ್ಯಾರ್ಥಿಗಳಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ; ಸಾರ್ವಜನಿಕರ ಸಾಥ್ ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ…

ಇತ್ತೀಚಿನ ಸುದ್ದಿ

ಬಿಜೆಪಿ ವಿಜಯ ಸಂಕಲ್ಪ ಯಾತ್ರೆ: ಕಕ್ಯೆಪದವು ದೇಗುಲದಲ್ಲಿ ಶಾಸಕ ರಾಜೇಶ್ ನಾಯ್ಕ್ ಚಾಲನೆ

21/01/2023, 21:27

ಬಂಟ್ವಾಳ(reporterkarnataka.com): ಜ.21 ರಿಂದ ಜ.29 ರವರೆಗೆ ನಡೆಯಲಿರುವ “ವಿಜಯ ಸಂಕಲ್ಪ ಅಭಿಯಾನ” ಕಾರ್ಯಕ್ರಮಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕರಪತ್ರ ವಿತರಿಸುವ ಮೂಲಕ ಕಕ್ಯೆಪದವು ಪಂಚದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಾಲನೆ ನೀಡಿದರು.

ಮುಂದಿನ ದಿನಗಳು ಬಿಜೆಪಿಯ ದಿನಗಳಾಬೇಕು, ಪ್ರತಿ ಮನೆಯೂ ಭಾರತೀಯ ಜನತಾ ಪಾರ್ಟಿಯ ಮನೆಯಾಗಬೇಕು ಎಂಬ ಯೋಜನೆ, ಯೋಚನೆ ಬಿಜೆಪಿಯದ್ದಾಗಿದ್ದು, ಈ ನಿಟ್ಟಿನಲ್ಲಿ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಜಾರಿಮಾಡಿದೆ, ಪಕ್ಷ ಸಂಘಟನೆಯ ದೃಷ್ಟಿಯಿಂದ ಕಾರ್ಯಕ್ರಮಗಳು ಪರಿಣಾಮಕಾರಿಯಾಗಲು , ಯಶಸ್ವಿಯಾಗಲು ಕಾರ್ಯಕರ್ತರು ಮುಂದಾಗಿ ಎಂದು ಅವರು ತಿಳಿಸಿದರು.


ಸರ್ವ ಜನರ ಹಿತಕಾಯುವ ಕೇಂದ್ರ, ರಾಜ್ಯ ಸರಕಾರದ ಯೋಜನೆ, ಸಾಧನೆ , ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ನೆನಪು ಮಾಡುವ ಉದ್ದೇಶದಿಂದ ಪ್ರತಿ ಮನೆಗೂ ಸಂಪರ್ಕ ಮಾಡಿ, ಕರಪತ್ರ ವನ್ನು ನೀಡಿ ಎಂದು ವಿನಂತಿ ಮಾಡಿದರು.
ವಿಜಯ ಸಂಕಲ್ಪ ಅಭಿಯಾನ ದ ಬಗ್ಗೆ ಮಾಹಿತಿ ನೀಡಿ ಮಾತನಾಡಿದ , ಪಾದಯಾತ್ರೆ ಸಂಚಾಲಕ ದೇವದಾಸ್ ಶೆಟ್ಟಿ, ಅವರು ಕಕ್ಯೆಪದವು ಪಂಚದುರ್ಗಾದ ದೇವಸ್ಥಾನದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದು ಸುಯೋಗವಾಗಿದೆ. ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮ ರಾಜ್ಯದಲ್ಲಿ ಗಮನ ಸೆಳೆಯುತ್ತದೆ.
ಕಾರ್ಯಕರ್ತರ ಬಳಿಗೆ ಶಾಸಕರು ಬರುತ್ತಿರುವ ವೇಳೆ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ಸಿಕ್ಕಿರುವುದು ಅತ್ಯಂತ ಹೆಮ್ಮೆಯ ವಿಚಾರ ಎಂದು ಅವರು ಹೇಳಿದರು. ಕೇಂದ್ರ ರಾಜ್ಯ ಸರಕಾರದ ಯೋಜನೆಗಳ ಪಟ್ಟಿ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳು, ಸಾಧನೆಯ ಕರಪತ್ರವನ್ನು ಮನೆಮನೆಗೆ ತಲುಪಿಸುವ ಕಾರ್ಯವೇ ವಿಜಯ ಸಂಕಲ್ಪ ಅಭಿಯಾನದ ಉದ್ದೇಶವಾಗಿದೆ. ಬಿಜೆಪಿ ಸದಸ್ಯತ್ವ ಅಭಿಯಾನ ನೊಂದಣಿ ಕಾರ್ಯ ಆಗಬೇಕು.
ವಿಧಾನ ಸಭಾ ಕ್ಷೇತ್ರದಲ್ಲಿ 249 ಮತಗಟ್ಟೆಗಳಲ್ಲಿ ಜವಬ್ದಾರಿ ಇರುವ ಪ್ರತಿಯೊಬ್ಬರೂ ಅಭಿಯಾನದಲ್ಲಿ ಪಾಲ್ಗೊಂಡು ಪಕ್ಷವನ್ನು ಇನ್ನಷ್ಟು ಬಲಪಡಿಸಲು ಜತೆಯಾಗಬೇಕಾಗಿದೆ.
ಇಳಿಯೂರು ಮಹಾವಿಷ್ಣು ದೇವಸ್ಥಾನದಿಂದ ಪ್ರಾರಂಭವಾದ ಪಾದಯಾತ್ರೆ ಮಧ್ಯಾಹ್ನ ಕಕ್ಯೆಪದವು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತಲುಪಿದೆ.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಮಾಜಿ.ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಪಾದಯಾತ್ರೆಯ ಸಹಸಂಚಾಲಕ ಸುದರ್ಶನ್ ಬಜ,ಗ್ರಾ.ಪಂ.ಅಧ್ಯಕ್ಷ ಸುರೇಶ್ ಮೈರ, ಚಿದಾನಂದ ರೈ ಕಕ್ಯ ಉಪಸ್ಥಿತರಿದ್ದರು.
ಸುದರ್ಶನ್ ಬಜ ಸ್ವಾಗತಿಸಿದರು. ಪುರುಷೋತ್ತಮ ಶೆಟ್ಟಿ ವಾಮದಪದವು ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು