2:35 AM Monday29 - December 2025
ಬ್ರೇಕಿಂಗ್ ನ್ಯೂಸ್
ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:… ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್, ಹೋಂ ಸ್ಟೇ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಡಗಿನಲ್ಲಿ ಅರಣ್ಯ ರಕ್ಷಕರಿಂದಲೇ ಮರಗಳ ಲೂಟಿ: ಲೋಡರ್ ಬಂಧನ; ನಾಲ್ವರು ಪರಾರಿ ಖಾಸಗಿ ವಾಹನಕ್ಕೆ ನಾಮಫಲಕ | ಪೊಲೀಸಪ್ಪನಿಂದೇ ಕಾನೂನು ಉಲ್ಲಂಘನೆ: ದಂಡ ಯಾವತ್ತೇ ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ: ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ

ಇತ್ತೀಚಿನ ಸುದ್ದಿ

ಬಂಟ್ವಾಳ ಫೈ ಓವರ್ ಅಡಿಯಲ್ಲಿ ಅನಾಥ ಕಾರು ಪತ್ತೆ: ‘ಸ್ಯಾಂಟ್ರೋ ರವಿ’ಗೆ ಸೇರಿದ್ದು ಎಂಬ ಶಂಕೆ

19/01/2023, 14:31

ಬಂಟ್ವಾಳ :reporterkarnataka.com: ಕಳೆದ ಕೆಲವು ದಿನಗಳಿಂದ ಟೊಯೋಟಾ ಇನೋವಾ ಕಾರೊಂದು ವಾರಿಸುದಾರರಿಲ್ಲದೆ ಬಿಸಿರೋಡಿನಲ್ಲಿ ಅನಾಥವಾಗಿದ್ದು, ಸಾರ್ವಜನಿಕ ವಲಯದಲ್ಲಿ ಈ ಕಾರಿನ ಬಗ್ಗೆ ಸಾಕಷ್ಟು ಸಂಶಯಗಳು ಮೂಡಿದೆ.

ಬಿ ಸಿ ರೋಡಿನ ಭಾರತ್ ಸ್ಟೋರ್ ಮುಂಭಾಗದಲ್ಲಿ ಫೈ ಓವರ್ ನ ಅಡಿಭಾಗದಲ್ಲಿ ಕೆ ಎಲ್ ದಾಖಲೆಯ ವಾಹನ ಅನಾಥ ರೀತಿಯಲ್ಲಿ ನಿಂತುಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಇದು ಇತ್ತೀಚಿಗೆ ಬಾರೀ ಸುದ್ದಿಯಾಗಿತ್ತು.

ಅಲ್ಲದೆ ಇದು ಸ್ಯಾಂಟ್ರೋ ರವಿ ಅವರಿಗೆ ಸೇರಿದ ಕಾರು ಎಂಬ ವದಂತಿ ಹರಡಿದೆ. ಅಸಲಿಗೆ ಇದು ಕೇರಳ ಮೂಲದ ಸಬೀಬ್ ಅಶ್ರಫ್ ಎಂಬವರ ಹೆಸರಿನಲ್ಲಿ ದಾಖಲೆಗಳಿವೆ.

ಕೆ.ಎಲ್.14 ವೈ.8999 ನಂ.ಕಾರು ಕೇರಳ ಸರಕಾರದ ಆರ್.ಟಿ.ಒ.ಯಲ್ಲಿ ಬ್ಲ್ಯಾಕ್ ಲಿಸ್ಟ್ ಗೆ ಸೇರಿದೆ.

ನಿಲ್ಲಿಸಲಾಗಿದ್ದ ಕಾರಿನ ಒಳ ಭಾಗದಲ್ಲಿ ಚೀಟಿ ಒಂದನ್ನು ಇಟ್ಟಿದ್ದು, ಸಮೀರ್ ಎಂಬ ಹೆಸರಿನ ಮುಂದೆ 9995333448 Dow ಬರೆಯಲಾಗಿದೆ.

ಒನ್ನಿ ವ್ಯಾಟ್ಸಪ್ ಕಾಲ್ ಎಂದು ಬರೆದಿದ್ದಾರೆ. ಸ್ಥಳೀಯ ಅಂಗಡಿ ಮಾಲಕರಿಗೆ ಈ ಕಾರಿನ ಬಗ್ಗೆ ಸಾಕಷ್ಟು ಸಂದೇಹಗಳು ಮೂಡಿದ್ದು, ಸ್ಯಾಂಟ್ರೋ ರವಿ ಇಲ್ಲಿ ಕಾರು ಇಟ್ಟು ಪರಾರಿಯಾಗಿದ್ದಾನೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.

ಪೊಲೀಸರು ಈಗಾಗಲೇ ಕಾರನ್ನು ಪರಿಶೀಲನೆ ಮಾಡಿದ್ದು ತನಿಖೆ ಆರಂಭಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು