12:18 PM Tuesday26 - November 2024
ಬ್ರೇಕಿಂಗ್ ನ್ಯೂಸ್
ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ಜ. 29: ಕೇದಾರ ಜಗದ್ಗುರು ಅಡ್ಡಪಲ್ಲಕ್ಕಿ ಉತ್ಸವ; ಧರ್ಮ ಜಾಗೃತಿ ಸಭೆ, ಇಷ್ಟಲಿಂಗ ಪೂಜೆ

16/01/2023, 08:41

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆ ಕೂಡ್ಲಿಗಿ, ಪಟ್ಟಣದಲ್ಲಿ ಜ29ರಂದು ಶ್ರೀಹಿನವತ್ ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ಶ್ರೀ1008 ಜಗದ್ಗುರು, ಕೇದಾರನಾಥ ರಾಜಗುರುವರ್ಯ ಭೀಮಶಂಕರ ಲಿಂಗ ಶಿವಾಚಾರ್ಯ ರವರ ಅಡ್ಡಪಲ್ಲಕ್ಕಿ ಮಹೋತ್ಸವ. ಸನಾತನ ಧರ್ಮ ಜಾಗೃತಿ ಸಮಾರಂಭ, ಹಾಗೂ ಸಂಗೀತಯುಕ್ತ ಇಷ್ಟಲಿಂಗ ಪೂಜೆ ಜರುಗಲಿದೆ.
ಪಟ್ಟಣದ ಶ್ರೀಪೇಟೆ ಬಸವೇಶ್ವರ ಸೇವಾ ಸಮಿತಿ, ಶ್ರೀಕೇದಾರ ಜಗದ್ಗುರುಗಳ ಉತ್ಸವ ಸಮಿತಿ ಹಾಗೂ ಕೂಡ್ಲಿಗಿ ಪಟ್ಟಣ ಮತ್ತು ತಾಲೂಕಿನ ಸದ್ಭಕ್ತ ವೃಂದ ದವರಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಜ29ರಂದು ಭಾನುವಾರ ಸಂಜೆ 4 ಗಂಟೆಗೆ ಶ್ರೀಪೇಟೆ ಬಸವೇಶ್ವರ ದೇವಸ್ಥಾನದಿಂದ, ಶ್ರೀಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಪ್ರಾರಂಭಗೊಳ್ಳುತ್ತದೆ. ಧಾರ್ಮಿಕ ವಿಧಿವಿಧಾನದಂತೆ ಜರುಗುವ ಶ್ರೀಅಡ್ಧಪಲ್ಲಕ್ಕಿ ಮೆರವಣಿಗೆ, ಪಟ್ಟಣದ ಪ್ರಮುಖ ಬೀದಿಗಳ ಮುಖಂತರ ಸಂಚರಿಸಿ ಪಟ್ಟಣದ ಪಂಚಾಚಾರ್ಯ ಮಂಗಲ ಮಂದಿರದವರೆಗೆ ತೆರಳುವುದು. ನಂತರ ಸಂಜೆ 6 ಗಂಟೆಗೆ ಚಂದ್ರಶೇಖರ ಆಜಾದ್ ರಂಗಮಂದಿರ(ಮೇನ್ ಬಾಯ್ಸ್ ಸ್ಕೂಲ್)ದಲ್ಲಿ ಸನಾತನ ಧರ್ಮ ಜಾಗೃತಿ ಸಮಾರಂಭ ಜರುಗುವುದು, ಇದೇ ಸಂದರ್ಭದಲ್ಲಿ ಮಾತೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುವುದು. ಜ30ರಂದು ಬೆಳಿಗ್ಗೆ 8 ಗಂಟೆಗೆ ಶ್ರೀಜಗದ್ಗರುಗಳ ಸಾನಿಧ್ಯದಲ್ಲಿ, ಸಂಗೀತ ಸಮೇತ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಜರುಗಲಿದೆ. ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಳ್ಳಬಯಸುವ ಶಿವ ಭಕ್ತರು, ಕಡ್ಡಾಯವಾಗಿ ಶುಚಿರ್ಭೂತರಾಗಿ ಧಾರ್ಮಿಕ ಸಂಪ್ರದಾಯ ಬದ್ದ ಉಡುಗೆಯೊಂದಿಗೆ ಲಿಂಗ ಧಾರಣೆಯನ್ನ ಮಾಡಿರಲೇಬೇಕಿದೆ. ಇಷ್ಟಲಿಂಗ ಮಹಾಪೂಜೆಯಲ್ಲಿ ಭಾಗವಹಿಸುವ ಶಿವಭಕ್ತರು, ಜ 25ರೊಳಗಾಗಿ ಸೇವಾ ಸಮಿತಿಯನ್ನ ಸಂಪರ್ಕಿಸಿ ತಮ್ಮ ಹೆಸರನ್ನು ನೊಂದಾಯಿಸಬೇಕಿದೆ. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕು ಹಾಗೂ ನೆರೆ ಹೊರೆ ತಾಲೂಕುಗಳ ಸಕಲ ಭಕ್ತರು, ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಶ್ರೀಜಗದ್ಗುರುಗಳ ದಿವ್ಯ ಆಶೀರ್ವಾದ ಪಡೆಯಬೇಕೆಂದು. ಕಾರ್ಯಕ್ರಮದ ನೇತೃತ್ವ ವಹಿಸಿರುವ ಕೂಡ್ಲಿಗಿ ಹಿರೇಮಠದ ಚಿದಾನಂದ ಸ್ವಾಮಿ ಹಾಗೂ ಶ್ರೀ ಆರಾಧ್ಯ ಮಠದ ಬಸವರಾಜಯ್ಯನವರು ಕೋರಿದ್ದಾರೆ. ಈ ಸಂದರ್ಭದಲ್ಲಿ ಶ್ರೀಪೇಟೆಬಸವೇಶ್ವರ ಸ್ವಾಮಿ ಸೇವಾ ಸಮಿತಿ, ಶ್ರೀಜಗದ್ಗುರು ಸ್ವಾಮಿಗಳ ಉತ್ಸವ ಸಮಿತಿ ಯವರು ಮತ್ತು ಪಟ್ಟಣದ ಶ್ರೀಪೇಟೆಬಸವೇಶ್ವರ ನಗರದ ದೈವಸ್ತರು ಇದ್ದರು. ಹೆಚ್ಚಿನ ಮಾಹಿತಿಗಾಗಿ:9448632482,9108878205,9945064216,9448234843,9449622707,9535509974,9902779092 ಸಂಪರ್ಕಿಸ ಬಹುದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು