5:33 AM Sunday16 - November 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ… ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಿಂದ ವಜಾ: ರಾಜ್ಯಕ್ಕೆ ಮಹಾಜಯ Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್

ಇತ್ತೀಚಿನ ಸುದ್ದಿ

ಕಲ್ಲಡ್ಕ: ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸಂಘದ ಜಿಲ್ಲಾ ಘಟಕ ರಚನೆ

15/01/2023, 10:06

ಬಂಟ್ವಾಳ(reporterkarnataka.com): ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಘಟಕ ರಚನೆ ಮಾಡಲಾಯಿತು.

ಜಿಲ್ಲೆಯ ವಿವಿಧ ತಾಲೂಕು ಘಟನೆಗಳ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸಂಘದ ಪದಾಧಿಕಾರಿಗಳು ಭಾಗವಹಿಸಿದ ಈ ಸಭೆಯನ್ನು ಬಂಟ್ವಾಳ ತಾಲೂಕು ಮುಖ್ಯ ಶಿಕ್ಷಕ ಸಂಘದ ಅಧ್ಯಕ್ಷರಾದ ಮಜಿ ಶಾಲೆಯ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಎಸ್.ಕೆ ಅಧ್ಯಕ್ಷತೆ ವಹಿಸಿ , ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿದರು.

ಜಿಲ್ಲಾ ಘಟಕಕ್ಕೆ ಈ ಕೆಳಗಿನ ಪದಾಧಿಕಾರಿಗಳು ಆಯ್ಕೆಯಾದರು .
ಗೌರವಾಧ್ಯಕ್ಷರು : ಮಜಿ ಶಾಲೆಯ ನಾರಾಯಣ ಪೂಜಾರಿ ಎಸ್.ಕೆ.
ಅಧ್ಯಕ್ಷರು : ನಿಂಗರಾಜು ಕೆ.ಪಿ ಅಲಂಕಾರು ಕಡಬ
ಉಪಾಧ್ಯಕ್ಷರು : ಬಾಬು ಟಿ ಹಿರೆಬಂಡಾಡಿ ಮತ್ತು ಶ್ರೀ ಮಹಾಲಿಂಗ ಬೆಳ್ತಂಗಡಿ .
ಪ್ರಧಾನಕಾರ್ಯದರ್ಶಿ :ಗೋಪಾಲಕೃಷ್ಣ ಬನ ಸುಳ್ಯ
ಜತೆ ಕಾರ್ಯದರ್ಶಿ : ಪ್ರೇಮ ಕೆ.ಕೆ.ಕಾವಳಮುಡೂರು
ಮತ್ತು ಶಾರದಾ ಕಡಬ
ಕೋಶಾಧಿಕಾರಿ: ಪುಟ್ಟರಂಗನಾಥ ಟಿ ಬಂಟ್ವಾಳ
ಸಂಘಟನಾ ಕಾರ್ಯದರ್ಶಿಗಳಾಗಿ ಸುನಂದಾ ಸುಳ್ಯ ಮತ್ತು ಸುರೇಶ್ ಬೆಳ್ತಂಗಡಿ .
ನಿರ್ದೇಶಕರು :ಶಂಕರ್ ನಾರ್ಶಮೈದಾನ ಮತ್ತು ಮಹೇಶ್ ಕಡಬ ಆಯ್ಕೆಯಾದರು .



ಅಧ್ಯಕ್ಷರಾಗಿ ಆಯ್ಕೆಯಾದ ನಿಂಗರಾಜ್ ಕೆ.ಪಿ. ಯವರು ಮಾತನಾಡಿ ಎಲ್ಲಾ ಶಿಕ್ಷಕರು ಸಹಕಾರ ನೀಡುವಂತೆ ,ಮುಖ್ಯ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸಂಘದೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಕೆಲಸ ಮಾಡುತ್ತೇನೆಂಬ ಭರವಸೆಯನ್ನು ನೀಡಿದವರು .

ದೇವಕಿ ಮೋಂತಿಮಾರು ಮತ್ತು ದಾಮೋದರ ಸರ್ಕಳ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಲ್ಲಡ್ಕ ಶಾಲೆಯ ಮುಖ್ಯ ಶಿಕ್ಷಕ ಅಬುಬಕ್ಕರ್ ಅಶ್ರಫ್ ,ಸುಳ್ಯದ ಅಧ್ಯಕ್ಷರಾದ ದೇವರಾಜ್ ,ಬೆಳ್ತಂಗಡಿಯ ಅಧ್ಯಕ್ಷರಾದ ಬಾಲಕೃಷ್ಣ , ಪುತ್ತೂರು ಕಾರ್ಯದರ್ಶಿ ತಾರನಾಥ್ ವೀರಮಂಗಲ, ಪಾಂಡವರಕಲ್ಲು ನವೀನಾ ಕುಮಾರಿ ,ಮದ್ವದ ಭವಾನಿ ,ಆನಂದ ಕೆಮ್ಮಾನುಪಲ್ಕೆ ,ಗೋಪಾಲ ಸುರಿಬೈಲು, ಶಿವರಾಮ್ ಭಟ್ ಮಿತ್ತನಡ್ಕ ,ಚಂದ್ರಾವತಿ ಮಾಣಿ ಮತ್ತು ಎಲ್ಲಾ ತಾಲೂಕಿನ ಪದಾಧಿಕಾರಿಗಳು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಪುಟ್ಟರಂಗನಾಥ ಟಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು