ಇತ್ತೀಚಿನ ಸುದ್ದಿ
ಮುಂಡ್ಕೂರು: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ನೇಣು ಬಿಗಿದು ಆತ್ಮಹತ್ಯೆ
11/01/2023, 20:40

ಕಾರ್ಕಳ(reporterkarnataka.com): ಅನಾರೋಗ್ಯ ದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಡ್ಕೂರು ಗ್ರಾಮದ
ಸಚ್ಚೇರಿಪೇಟೆ ತಿಲಕ ನಗರದಲ್ಲಿ ಜ.9ರಂದು ನಡೆದಿದೆ.
ಸುಮತಿ ಆತ್ಮಹತ್ಯೆ ಮಾಡಿಕೊಂಡವರು.
10 ವರ್ಷದಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಬೇಸತ್ತು ಸೋಮವಾರ ಸಂಜೆ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು
ದಾಖಲಾಗಿದೆ