ಇತ್ತೀಚಿನ ಸುದ್ದಿ
‘ವಾಯ್ಸ್ ಆಫ್ ಆರಾಧನಾ’: ಡಿಸೆಂಬರ್ ತಿಂಗಳ ಟಾಪರ್ ಆಗಿ ನಕ್ಷತ್ರ ಎನ್. ಹಾಗೂ ಕಶ್ವಿ ಎಸ್. ಆಯ್ಕೆ
06/01/2023, 18:26

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಡಿಸೆಂಬರ್ ತಿಂಗಳ ಟಾಪರ್ ಆಗಿ ನಕ್ಷತ್ರ ಎನ್. ಹಾಗೂ ಕಶ್ವಿ ಎಸ್. ಅವರು ಆಯ್ಕೆಗೊಂಡಿದ್ದಾರೆ.
ನಕ್ಷತ್ರ.ಎನ್. ಮಂಗಳೂರಿನ ನಟರಾಜ್ ವಿ. ಹಾಗೂ ಆಶಾ ಎನ್ . ದಂಪತಿಯ ದ್ವಿತೀಯ ಪುತ್ರಿ. 8 ವರ್ಷ ಈಕೆ ಕೊಲ್ಯ ಇಂಗ್ಲೀಷ್ ಮೀಡಿಯಂ ಶಾಲೆ ಜೊಯಿಲೆನ್ಡ್ ನಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಇವಳು ನೃತ್ಯ ,ಯೋಗ ಹಾಗೂ ಸಂಗೀತ ತರಬೇತಿ ಯನ್ನು ಪಡೆಯುತ್ತಿದಾಳೆ. ಸ್ವಾಮಿ ಕೊರಗಜ್ಜನ ತುಳು ಭಕ್ತಿ ಗೀತೆಗಳು ಮತ್ತು ಕನ್ನಡ, ತಮಿಳು, ತೆಲುಗು, 40ಕ್ಕೂ ಹೆಚ್ಚು ವೇದಿಕೆ ಗಳಲ್ಲಿ ಹಾಡಿದ್ದಾಳೆ. ಕಲಾಂಜಲಿ ಮತ್ತು ವಾಯ್ಸ್ ಆಫ್ ಆರಾಧನಾ ತಂಡ ದಲ್ಲಿ ಎರಡು ಮೂರು ಬಾರಿ ಲೈವ್ ಕಾರ್ಯಕ್ರಮ ನೀಡಿದ್ದಾಳೆ. ವಾಯ್ಸ್ ಆಫ್ ಆರಾಧನಾದಲ್ಲಿ ಭಾಗವಹಿಸಿ ಮಲಬಾರ್ ಗೋಲ್ಡ್ ವಿಜೇತರಾಗಿದ್ದಾಳೆ.
ಸಮಾಜ ಸೇವೆ ಗಾಗಿ ಅನೇಕ ಲೈವ್ ಕಾರ್ಯಕ್ರಮ ನೀಡಿದ್ದಾಳೆ. ರಾಜ್ಯಮಟ್ಟದ ಪ್ರಶಸ್ತಿ ಮತ್ತು ಜನಸ್ಪಂದನ, ಕಲಾ ಕುಸುಮ ಪ್ರಶಸ್ತಿ ಕಲಾ ಸಿರಿ ದೊರಕಿದೆ. ಕದ್ರಿ ಕಲ್ಕೂರ ಪ್ರತಿಷ್ಟಾನ ದಲ್ಲಿ ಯಶೋಧ ಕೃಷ್ಣ ತೃತೀಯ, ಶಾಲೆಗಳಲ್ಲಿ ನಡೆದ ನೃತ್ಯ, ಗಾಯನ, ಡ್ರಾಯಿಂಗ್, ಮತ್ತು ಅನೇಕ ಸ್ವರ್ದೆಗಳಲ್ಲಿ ನಿರಂತರವಾಗಿ ಪ್ರಥಮ ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಸ್ಪಂದನ ಚಾನಲ್ ಬಾಗವಹಿಸಿದ್ದಾಳೆ. ಎಕ್ಸ್ ಪ್ರೆಶನ್ ಉರ್ವ ದಲ್ಲಿ ನಡೆದ ರಾಧ ಕೃಷ್ಣ ನೃತ್ಯ ದಲ್ಲಿ ಪ್ರಥಮ ಮತ್ತು ಶಿರ್ವ ಮಹಿಳಾ ಮಂಡಳಿ ವತಿಯಿಂದ ನಡೆದ ಕೃಷ್ಣ, ಯಶೋಧ ಕೃಷ್ಣದಲ್ಲಿ ಪ್ರಥಮ ,V4 ಚಾನೆಲ್ ನಲ್ಲಿ ಛದ್ಮ ವೇಷ ದ್ವಿತೀಯ, ಭಗತ್ ಸಿಂಗ್ ಸೇವಾ ಪ್ರತಿಷ್ಟಾನದ ವತಿಯಿಂದ ನಡೆದ ಗಾನಂ ವೇಷಂದಲ್ಲಿ ಬಾಗವಹಿಸಿ ಸಮಾಧಾನಕರ ಬಹುಮಾನ ಪಡೆದಿದ್ದಾಳೆ. ಗೌರವ ಸನ್ಮಾನ ಬಹುಮಾನ ಮತ್ತು ಅನೇಕ ಸಂಘ ಸಂಸ್ಥೆಗಳಲ್ಲಿ ಗೌರವ, ಕರ್ನಾಟಕ ಜನಸ್ವಂದನ ಟ್ರಸ್ಟ್ ನಲ್ಲಿ ಭಕ್ತಿ ಗೀತೆ ಅತ್ಯುತ್ತಮ, ಅನೇಕ. ಸ್ಥಳಿಯ ಕಾರ್ಯಕ್ರಮ ಗಳಲ್ಲಿ ಭಕ್ತಿ ಗೀತೆ ಮತ್ತು ಚಲನಚಿತ್ರ ಗೀತೆ ಗಳನ್ನು ಹಾಡಿ ಜನ ಮೆಚ್ಚುಗೆ ಪಡೆದಿದ್ದಾರೆ.
ಕಲಾ ಪ್ರತಿಬೆ ಪರಿವಾರ ಮತ್ತು ಆಮಂತ್ರಣ ಪರಿವಾರದಲಿ ಅನೇಕ ಬಹುಮಾನ ಪಡೆದು ಜನರ ಮೆಚುಗೆ ಪಡೆದಿರುತಾಳೆ.
ಕಲಾಸರಸ್ವತಿ ಗೌರವ ಲಭಿಸಿದೆ.
ಸುನೀಶ್ ಹಾಗೂ ಅನಿತಾ ದಂಪತಿಯ ಪುತ್ರಿಯಾದ ಕಶ್ವಿ ಎಸ್. 10ರ ಹರೆಯದ ಬಾಲಕಿ. ಮಂಗಳೂರು ಶಾರದಾ ವಿದ್ಯಾಲಯದ ವಿದ್ಯಾರ್ಥಿನಿ.
ಹವ್ಯಾಸ – ನೃತ್ಯ, ಸಂಗೀತ, ಚಿತ್ರಕಲೆ, ಛದ್ಮವೇಷ, ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇದ್ದು, ನೃತ್ಯವನ್ನು ಗುರುಗಳಾದ ಮನೋಜ್ ಗಣೇಶಪುರ ಅವರ ಮಾರ್ಗದರ್ಶನದಲ್ಲಿ ಅನೇಕ ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದಾಳೆ. ವಾಯ್ಸ್ ಆಫ್ ಆರಾಧನಾ, ಆಮಂತ್ರಣ, ಕಲಾಪ್ರತಿಭೆಗಳು ಕುಟುಂಬದ ಸಕ್ರಿಯ ಸದಸ್ಯರಾಗಿದ್ದು ಇವರು ಏರ್ಪಡಿಸಿದ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದು ಜನಮೆಚ್ಚುಗೆಗೆ ಪಾತ್ರರಾಗಿ ಮಂಗಳೂರಿನ ಹೆಮ್ಮೆಯ ಮನೆಮಗಳಾಗಿ ಗುರುತಿಸಿಕೊಂಡಿದ್ದಾಳೆ.
ಸ್ಪಂದನ ವಾಹಿನಿಯಲ್ಲಿ ಪ್ರಸಾರವಾಗುವ ರೈಸಿಂಗ್ ಸ್ಟಾರ್, ಚಿಣ್ಣರ ಚಿಲಿಪಿಲಿ, ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾಳೆ. ಪ್ರತಿ ವರ್ಷ ತನ್ನ ಶಾಲೆಯಲ್ಲಿ ನಡೆಸುವ ಹಲವಾರು ಸ್ಪರ್ಧೆಗಳಲ್ಲಿ ಅತೀ ಹೆಚ್ಚು ಬಹುಮಾನಗಳನ್ನು ಗಳಿಸಿದ್ದಾಳೆ. ಅನೇಕ ಅಂತರ್ ಶಾಲಾ ಸ್ಪರ್ಧೆಯಲ್ಲಿಯೂ ಕೂಡ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಬಹುಮಾನ ಪಡೆದುಕೊಂಡಿದ್ದಾಳೆ. ಮಂಗಳಾದೇವಿ ಸೇವಾ ಸಮಿತಿ, ಕಲ್ಕೂರ ಪ್ರತಿಷ್ಟಾನ, ಇಸ್ಕಾನ್ ಹೆರಿಟೇಜ್, ಮಲ್ಲಿಕಾ ಕಲಾವೃಂದ, ವಿದ್ಯಾಭಾರತೀ ಶಿಕ್ಷಾ ಸಂಸ್ಥಾನ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ರಾಘವೇಂದ್ರ ಮಿತ್ರ ಮಂಡಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಂಗಳೂರು, ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯ ಹಾಗೂ ಇನ್ನೂ ಹಲವಾರು ಸಂಸ್ಥೆಗಳು ಆಯೋಜಿಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾಳೆ.