4:55 AM Saturday12 - July 2025
ಬ್ರೇಕಿಂಗ್ ನ್ಯೂಸ್
ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆಯಲ್ಲಿ ಲೂಟಿ ಮಾಡುವ ಉದ್ದೇಶ: ಪ್ರತಿಪಕ್ಷ ನಾಯಕ… ಬೆಂಗಳೂರು ಕಾಲ್ತುಳಿತ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ನಾ ವರದಿ… ಚಿಕ್ಕಮಗಳೂರು- ತಿರುಪತಿ ರೈಲಿಗೆ ಚಾಲನೆ: ಕಾಫಿನಾಡಿಗರ ದಶಕಗಳ ಕನಸು ಕೊನೆಗೂ ನನಸು Kodagu | ವಿರಾಜಪೇಟೆ ಕ್ಷೇತ್ರದ 1600 ಆದಿವಾಸಿಗಳಿಗೆ ಜಮೀನು ಹಕ್ಕುಪತ್ರ ವಿತರಣೆಗೆ ಅಸ್ತು:… ಹೆಚ್ಚುತ್ತಿರುವ ಕಾಡಾನೆಗಳ ದಾಂಧಲೆ: ವಿರಾಜಪೇಟೆ ತಿತಿಮತಿ ವ್ಯಾಪ್ತಿಯಲ್ಲಿ ಬಿರುಸುಗೊಂಡ ಕಾಡಿಗಟ್ಟುವ ಕಾರ್ಯಾಚರಣೆ Bangaluru | ನಾಗರಬಾವಿಯ ವಿಟಿಯು ಹಬ್ ಆ್ಯಂಡ್ ಸ್ಪೋಕ್ ಕೇಂದ್ರ ಉದ್ಘಾಟನೆ: ಕೇಂದ್ರ… SCSP-TSP ಯೋಜನೆ | ಅಧಿಕಾರಿಗಳು ಮೈಮರೆತರೆ ಪ್ರಕರಣ ದಾಖಲು ಗ್ಯಾರಂಟಿ: ಸಚಿವ ಡಾ.… New Delhi | ಮಿಸ್ ಯೂನಿವರ್ಸ್ ಕರ್ನಾಟಕ ವಿಜೇತೆ ಚಿಕ್ಕಮಗಳೂರಿನ ವಂಶಿ ಮುಖ್ಯಮಂತ್ರಿ… Kodagu | ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಡಿಕ್ಕಿ ಹೊಡೆದು ವ್ಯಕ್ತಿ ಸಾವು ಮಂಗಳೂರಿನ ಪೆಟ್ರೋಲಿಯಂ ಕಂಪನಿಗಳ ಸಂಬಂಧಿತ ದುರಂತ ನಿರ್ವಹಣೆಗೆ ಅಗ್ನಿಶಾಮಕ ಇಲಾಖೆಯ ಸಶಕ್ತಗೊಳಿಸಲಾಗಿದೆ: ಗೃಹ…

ಇತ್ತೀಚಿನ ಸುದ್ದಿ

ಬೇಕಾಬಿಟ್ಟಿ ರಸ್ತೆ ಅಗೆದು ಯಾರಾದರು ಗುಂಡಿಗೆ ಬಿದ್ರೆ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಹಾಕಿಸ್ತೀನಿ: ಗೇಲ್ ಅಧಿಕಾರಿಗೆ ಶಾಸಕ ಡಾ. ಭರತ್ ಶೆಟ್ಟಿ ಎಚ್ಚರಿಕೆ

04/01/2023, 21:25

ಮಂಗಳೂರು(reporterkarnataka.com): ಅಲ್ಲಲ್ಲಿ ಅಗೆದು ಗುಂಡಿಯನ್ನು ಹಾಗೇ ಬಿಟ್ಟಿದ್ದೀರಿ. ನನ್ನ ಕ್ಷೇತ್ರದಲ್ಲಿ ಒಬ್ಬ ದ್ವಿಚಕ್ರ ಸವಾರರು ಗುಂಡಿಗೆ ಬಿದ್ದು ಅನಾಹುತ ಆದ್ರೂ ಸುಮ್ಮನಿರಲ್ಲ. ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಹಾಕ್ತೀನಿ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಗೇಲ್ ಕಂಪೆನಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ನಗರದ ದೇರೆಬೈಲ್ ಕೊಂಚಾಡಿ ಬಳಿ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಗೆ ಬಂದಿದ್ದ ಶಾಸಕರಲ್ಲಿ ಸ್ಥಳೀಯರು ಗೇಲ್ ಕಂಪೆನಿ ಅಧಿಕಾರಿಗಳು ಎಲ್ಲೆಂದರಲ್ಲಿ ರಸ್ತೆಯನ್ನು ಅಗೆಯುತ್ತಿದ್ದು, ಇದರಿಂದ ನೀರಿನ ಪೈಪ್ ಒಡೆದು ಸಮಸ್ಯೆ ಸೃಷ್ಟಿಯಾಗಿದೆ ಎನ್ನುವುದನ್ನು ಗಮನಕ್ಕೆ ತಂದರು. ಈ ವೇಳೆ ಸ್ಥಳದಲ್ಲೇ ಇದ್ದ ಕಂಪೆನಿ ಅಧಿಕಾರಿಗಳನ್ನು ಕರೆದ ಶಾಸಕರು, “ಪೈಪ್ ಲೈನ್ ಗಾಗಿ ಎಲ್ಲೆಂದರಲ್ಲಿ ಬೇಕಾಬಿಟ್ಟಿ ರಸ್ತೆ ಅಗೆದು ಜನರಿಗೆ ತೊಂದರೆ ಉಂಟುಮಾಡಿದರೆ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಹಾಕಿಸ್ತೀನಿ ಎಂದರು.
ಬೇಕಾಬಿಟ್ಟಿ ಕಾಮಗಾರಿ ಮಾಡಬೇಡಿ, ಏನೇ ಮಾಡೋದಿದ್ರೂ ಸ್ಥಳೀಯ ಕಾರ್ಪೋರೇಟರ್ ಹಾಗೂ ಸಾರ್ವಜನಿಕರ ಗಮನಕ್ಕೆ ತಂದು ಬಳಿಕ ಮಾಡಿ. ನಿಮ್ಮಿಂದಾಗಿ ನಗರ ಪಾಲಿಕೆಯ ಎಲ್ಲಾ ಕಡೆಗಳಲ್ಲಿ ಸಮಸ್ಯೆಯಾಗುತ್ತಿದೆ. 10-15 ದಿನಗಳು ನೀರಿಲ್ಲದಿದ್ದರೆ ಜನರು ಏನು ಮಾಡಬೇಕು? ಅಲ್ಲಲ್ಲಿ ಅಗೆದು ಗುಂಡಿಯನ್ನು ಹಾಗೇ ಬಿಟ್ಟಿದ್ದೀರಿ. ನನ್ನ ಕ್ಷೇತ್ರದಲ್ಲಿ ಒಬ್ಬ ದ್ವಿಚಕ್ರ ಸವಾರರು ಗುಂಡಿಗೆ ಬಿದ್ದು ಅನಾಹುತ ಆದ್ರೂ ಸುಮ್ಮನಿರಲ್ಲ. ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಹಾಕ್ತೀನಿ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಕಂಪೆನಿ ಅಧಿಕಾರಿ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು