ಇತ್ತೀಚಿನ ಸುದ್ದಿ
ಕೊಟ್ಟಾರಚೌಕಿಯ ಮಾಲಾಡಿ ರಸ್ತೆ ರಾಜಕಾಲುವೆ ತಡೆಗೋಡೆಗೆ 20 ಕೋಟಿ ವಿಶೇಷ ಪ್ಯಾಕೇಜ್: ಶಾಸಕ ಡಾ. ಭರತ್ ಶೆಟ್ಟಿ
31/12/2022, 23:51

ಮಂಗಳೂರು(reporterkarnataka.com); ಸಣ್ಣ ನೀರಾವರಿಯ 20 ಕೋಟಿ ರೂ. ವಿಶೇಷ ಪ್ಯಾಕೇಜಿನಲ್ಲಿ ಬಂಗ್ರಕೂಳೂರು 16ನೇ ವಾರ್ಡ್ ವ್ಯಾಪ್ತಿಯ ಕೊಟ್ಟಾರಚೌಕಿಯ ಮಾಲಾಡಿ ರಸ್ತೆ ರಾಜಕಾಲುವೆ ತಡೆಗೋಡೆಗೆ 1.30 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ. ಹೇಳಿದರು.
ಅವರು ಇಲ್ಲಿನ ರಾಜಕಾಲುವೆಗೆ ತಡೆಗೋಡೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯದ ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ ಅವರು ಕೃತಕ ನೆರೆ ಭೀತಿ ನಿವಾರಿಸುವ ಸಲುವಾಗಿ , ಚರಂಡಿ, ಕಾಲುವೆ, ತಡೆಗೋಡೆ, ರಸ್ತೆ ಮತ್ತಿತರ ಕಾಮಗಾರಿಗಾಗಿ 23 ಕೋ.ರೂ ವಿಶೇಷ ಅನುದಾನ ನೀಡಿದ್ದು ಅಗತ್ಯವಿದ್ದೆಡೆ ಕಾಮಗಾರಿ ನಡೆಸಲಾಗುವುದು.
ಕಳೆದ ಹಲವು ವರ್ಷಗಳಿಂದ ಇಲ್ಲಿ ಮಳೆಯ ಸಂದರ್ಭ ನೆರೆ ಅವರಿಸುತ್ತಿದ್ದು ಜನರ ಬೇಡಿಕೆಯಿತ್ತು. ಇದೀಗ ತಡೆಗೋಡೆ ಜತೆಗೆ ಇಲ್ಲಿನ ತಗ್ಗಾದ ಕಾಲು ಸಂಕಗಳನ್ನು ತೆಗೆದು ಎತ್ತರಿಸಲಾಗುವುದು ಎಂದರು.
ಒಳಭಾಗದ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆ ಸೇರಿದಂತೆ ಅಂದಾಜು 1 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುವುದು.
ಸ್ಥಳೀಯ ಮನಪಾ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್, ಬಿಜೆಪಿ ಪ್ರಮುಖರಾದ ಉಮೇಶ ಮಲರಾಯಸಾನ, ಜಯಪ್ರಕಾಶ್ ಕುಲಾಲ್, ರಾಜೇಶ್, ಸುರೇಶ್ ಭಂಡಾರಿ,ಕಿರಣ್ ಕೋಟ್ಯಾನ್, ಗೋಪಾಲ್ ಶೆಟ್ಟಿ ಗಣೇಶ್ ಶೆಟ್ಟಿ, ಪಕ್ಷದ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.