10:12 PM Friday19 - June 2026
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.…

ಇತ್ತೀಚಿನ ಸುದ್ದಿ

ಜೀವಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು!: ಬಸ್ಸಿನ ಬಾಗಿಲಲ್ಲೇ ನೇತಾಡಿ ಪ್ರಯಾಣಿಸುವ ಹೆಣ್ಮಕ್ಕಳು; ಅಥಣಿ ಶಾಸಕರೇ ಏನು ಮಾಡುತ್ತಿದ್ದೀರಿ?

27/12/2022, 17:11

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಈ ದೃಶ್ಯ ನೋಡಿದ್ರೆ ಮೈ ಜುಮ್ ಅನ್ನುತ್ತೆ. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಆಪಾಯ. ನಿಜಕ್ಕೂ ರಾಜ್ಯ ಸರ್ಕಾರವೇ ಮುಜುಗೂರ ಪಡುವಂತ ವಿಷಯ ಇದು.


ಇದೆಲ್ಲ ಕಂಡು ಬರುವುದು ಬೆಳಗಾವಿ ಜಿಲ್ಲೆಯ ಅಥಣಿ ಎಂಬ ಸಣ್ಣ ಪಟ್ಟಣದಲ್ಲಿ. ಇಲ್ಲಿ ಸರಕಾರಿ ಬಸ್ ಗಳ ಕೊರತೆಯಿಂದ ಸಾರ್ವಜನಿಕರ ಪಾಡು ಹೇಳಿ ತೀರದು. ಶಾಲಾ- ಕಾಲೇಜು ಮಕ್ಕಳು ಪಡುವ ಬವಣೆ ಯಾರಿಗೂ ಬೇಡ.

ಬಸ್ ರಶ್ ಆದಾಗ ಯುವಕರು ಬಾಗಿಲ ಮೆಟ್ಟಿಲಲ್ಲಿ ನಿಂತು ನೇತಾಡಿಕೊಂಡು ಹೋಗುವುದನ್ನು ಕಾಣುತ್ತೇವೆ. ಆದರೆ ಅಥಣಿಯಲ್ಲಿ ಹೆಣ್ಮಕ್ಕಳು ಕೂಡ ಬಾಗಿಲ ಮೆಟ್ಟಿಲಲ್ಲಿ ನಿಂತು ಪ್ರಯಾಣಿಸುವ ಪ್ರಮೇಯ ಒದಗಿ ಬಂದಿದೆ. ಇಲ್ಲಿನ ಶಾಸಕ ಮಹೇಶ್ ಕುಮಟಳ್ಳಿ ಏನು ಮಾಡುತ್ತಿದ್ದಾರೆ ಅಂತ ಮತದಾರರೀಗೆ ಅರ್ಥವಾಗುತ್ತಿಲ್ಲ. ಇಲ್ಲಿನ ಜವಾಬ್ದಾರಿ ಹೊಂದಿರುವ ಅವರು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕೆಎಸ್ಸಾರ್ಟಿಸಿ ಅಧಿಕಾರಿಗಳ ಜತೆ ಮಾತನಾಡಿ ಬಸ್ಸಿನ ವ್ಯವಸ್ಥೆ ಮಾಡಬೇಕು. ಆದರೆ ಸದಾ ಐಷಾರಾಮಿ ಕಾರಿನಲ್ಲಿ ತಿರುಗುವ ಶಾಸಕರಿಗೆ ಇದೆಲ್ಲ ಬೇಕಾಗಿಲ್ಲ.
ಮಕ್ಕಳು ಬಸ್ಸಿನಲ್ಲಿ ನೇತಾಡಿಕೊಂಡು ಹೋಗುವ ದೃಶ್ಯ ನೋಡಿದ್ರೆ ಯಾವನೇ ಪೋಷಕರು ತನ್ನ ಮಕ್ಕಳಿಗೆ ಶಿಕ್ಷಣವೇ ಬೇಡ ಅನ್ನೋ ತೀರ್ಮಾನಕ್ಕೆ ಬಂದರೆ ಅತಿಶಯೋಕ್ತಿಯಾಗಲಾರದು.


ಬಾಗಿಲಿಗೆ ಜೋತು ಬಿದ್ದು ಗ್ರಾಮೀಣ ವಿದ್ಯಾರ್ಥಿನಿ ಮನೆಗೆ ಹೋಗಲು ಹರಸಾಹಸ ಪಡುತ್ತಾರೆ. ಪ್ರಭಾವಿ ರಾಜಕಾರಣಿಗಳ ತವರಲ್ಲೇ ವಿದ್ಯಾರ್ಥಿಗಳ ಜೀವಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು ಇಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು