2:03 PM Thursday19 - March 2026
ಬ್ರೇಕಿಂಗ್ ನ್ಯೂಸ್
ಕುಶಾಲನಗರದಲ್ಲಿ ವೇಶ್ಯವಾಟಿಕೆ: ಇಬ್ಬರ ಬಂಧನ: ಇನ್ನಿಬ್ಬರು ಯುವತಿಯರು ಸಾಂತ್ವನ ಕೇಂದ್ರಕ್ಕೆ ರಾ.ಹೆ 275 ಬದಿಯ ಅನಧಿಕೃತ ಜಾಹೀರಾತು ಫಲಕ, ಹಣ್ಣಿನ/ಗೂಡಂಗಡಿ ತೆರವುಗೊಳಿಸಲು ಕೊಡಗು ಜಿಲ್ಲಾಡಳಿತ… ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆ: ಕಾಫಿ ತೋಟದಲ್ಲಿ ಮಲ್ಲಿಗೆ ಹೂವಿನ ಚಿತ್ತಾರ ಮಡಿಕೇರಿಯ ರಾಜಕಾಲುವೆಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ: ಸ್ಥಳೀಯರಿಂದ ರಕ್ಷಣೆ ಕೃಷಿ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸದನದಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿ ಭರವಸೆ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೊಂದು ಹುಲಿ ಬಲಿ: ಗುಂಡ್ಲುಪೇಟೆಯ ಪಡಗೂರಿನಲ್ಲಿ ವಿದ್ಯುತ್ ಸ್ಪರ್ಶಕ್ಕೆ ಸಾವು Chikkamagaluru | ಕೈ ಮುಖಂಡನ ವಿರುದ್ಧ ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ… ಸಚಿವರೇ ಇಲ್ಲ.. ಏನ್ ಮಾಡ್ಬೇಕು..?’ ಈಗ ಹೊರಟ್ಟಿ ಸರದಿ: ಸಚಿವರ ಗೈರು ಕುರಿತು… ಯುಗಾದಿ ಮತ್ತು ರಂಜಾನ್ ಹಬ್ಬಗಳ ಸರಣಿ ರಜೆ | ಪ್ರಯಾಣಿಕರಿಗೆ ಶಾಕ್‌: ಖಾಸಗಿ… Kodagu | ಅಕಾಲಿಕ ಮಳೆ: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಾನಿ

ಇತ್ತೀಚಿನ ಸುದ್ದಿ

ಮಂಡ್ಯ ಜಿಲ್ಲೆಗೆ ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ ಯಾವುದೇ ಅನ್ಯಾಯ ಎಸಗಿಲ್ಲ: ನೆಲ್ಲಿಗೆರೆ ಬಾಲು

05/07/2021, 07:23

ದೇವಲಾಪುರ ಜಗದೀಶ್ ನಾಗಮಂಗಲ ಮಂಡ್ಯ 

info.reporterkarnataka@gmail.com

ಜಿಲ್ಲೆಗೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಯಾವುದೇ ಅನ್ಯಾಯವಾಗಿಲ್ಲ ಎಂದು ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ನೆಲ್ಲಿಗೆರೆ ಬಾಲು ಹೇಳಿದರು.

ನಾಗಮಂಗಲದ ಶಾಸಕರ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಪರ ವಿರೋಧಗಳ ನಡುವೆ ಜಿಲ್ಲೆ, ತಾಲೂಕಿನಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಉಲ್ಲೇಖಿಸಿ ಮಾತನಾಡುತ್ತಾ,  ಅವರ ಅವಧಿಯಲ್ಲಿ ಕೆಲಸ ಕಾಮಗಾರಿಗಳನ್ನು ಸಾಕಷ್ಟು ಸಾಕ್ಷ್ಯಾಧಾರಗಳಿವೆ ಹಾಗೂ ಶಾಸಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕೆಂದು ಎಚ್ಚರಿಸಿದರು.

ರಾಜಕಾರಣದ ಭೀಷ್ಮ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಂದ ಯಾವ ಅನ್ಯಾಯವಾಗಿಲ್ಲ. ಅವರಿಂದ ಅಧಿಕಾರ ಅನುಭವಿಸಿ ಅವರ ವಿರುದ್ಧ ಧ್ವನಿ ಎತ್ತುತ್ತಿರುವುದು ಸರಿಯಿಲ್ಲ. ಆದರೆ ಇತ್ತೀಚಿನ ರಾಜಕಾರಣದಲ್ಲಿ ಹಾಲು ಒಕ್ಕೂಟದ ಪ್ರಕರಣವನ್ನು ಬಿಂಬಿಸುತ್ತಾ ಮುಂದಿನ ಚುನಾವಣೆಗಳಲ್ಲಿ ಜನರ ಮುಂದೆ ಹೋಗಲು ಈ ಪ್ರಕರಣವನ್ನು ಅಸ್ತ್ರವಾಗಿ ಬಳಸಿದರೆ ಜಿಲ್ಲೆ ಹಾಗೂ ತಾಲೂಕಿನ ಜನರು ಉತ್ತರ ಕೊಡಲು ಸಿದ್ಧರಾಗಿದ್ದಾರೆ ಎಂದು ಟಿ.ಕೆ ರಾಮೇಗೌಡ ಹೇಳಿದರು.

ಇದೇ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರೇಗೌಡ, ನಾಗೇಶ್ ಬಸವೇಗೌಡ, ಪ್ರವೀಣ್  ಮೂಳಕಟ್ಟೆ, ಶಿವರಾಂ, ನಿತೀಶ್, ರಘು ಮುತ್ತಣ್ಣ ಅನೇಕ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು