ಇತ್ತೀಚಿನ ಸುದ್ದಿ
ಮುಂಚೂರು ರಾಜಕಾಲುವೆ ತಡೆಗೋಡೆ ಕಾಮಗಾರಿ: ಶಾಸಕ ಡಾ. ಭರತ್ ಶೆಟ್ಟಿ ಗುದ್ದಲಿ ಪೂಜೆ
25/12/2022, 21:33

ಸುರತ್ಕಲ್ (reporterkarnataka.com): ಸುಮಾರು 90 ಲಕ್ಷ ರೂ ವೆಚ್ಚದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆಯ ವ್ಯಾಪ್ತಿಯ ಸುರತ್ಕಲ್ ಪೂರ್ವ 2ನೇ ವಾರ್ಡಿನ ಮುಂಚೂರು ರಾಜಕಾಲುವೆ ತಡೆಗೋಡೆ ಕಾಮಗಾರಿಗೆ ಶಾಸಕ ಡಾ.ವೈ. ಭರತ್ ಶೆಟ್ಟಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಮೇಯರ್ ಜಯಾನಂದ್ ಅಂಚನ್, ಪಾಲಿಕೆ ಸ್ಥಳೀಯ
ಸದಸ್ಯೆ ಶ್ವೇತಾ ಪೂಜಾರಿ, ಲೆಕ್ಕ ಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾದ ನಯನಾ ಕೋಟ್ಯಾನ್, ಯುವ ಮೋರ್ಚಾ ಮಂಡಲ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಶಕ್ತಿಕೇಂದ್ರ ಪ್ರಮುಖರಾದ ಸುರೇಂದ್ರ ಸುವರ್ಣ , ಜಯಂತ್,ಶಕ್ತಿಕೇಂದ್ರ ಸಹ ಪ್ರಮುಖ್ ರಾಕೇಶ್ ಬಂಗೇರ, ಬೂತ್ ಅಧ್ಯಕ್ಷರಾದ ಪದ್ಮಾವತಿ ಕೊಡಿಪಾಡಿ, ರೇಖಾ, ಸಂತೋಷ್ ತಡಂಬೈಲ್, ರವಿ ಶೆಟ್ಟಿ , ಬೂತ್ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಶೆಟ್ಟಿ ಕೊಡಿಪಾಡಿ, ಪ್ರಮುಖರಾದ ಅಶ್ವಥ್ ನಾರಾಯಣ ,ಲೋಕಯ್ಯ ಶೆಟ್ಟಿ , ಸತೀಶ್ ಶೆಟ್ಟಿ, ಸತೀಶ್ ಮುಂಚೂರು , ಹರೀಶ್ ಮುಚೂರು , ವಿನೋದ್ ಬಂಗೇರ , ಶೇಖರ್ ,ಜಯ ಸನಿಲ್ ,ಸುನೀತಾ, ಯಶೋಧ, ಬೇಬಿ ಮತ್ತಿತರು ಉಪಸ್ಥಿತರಿದ್ದರು.