11:15 AM Wednesday3 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಮಂಗಳೂರಿನ ಕೆಪಿಟಿ ಮೈದಾನದಲ್ಲಿ 25ರಂದು ಭಂಡಾರಿ ಸಮಾಜದ ವಾರ್ಷಿಕ ಕ್ರೀಡಾಕೂಟ

21/12/2022, 19:46

ಮಂಗಳೂರು(reporterkarnataka.com): ಭಂಡಾರಿ ಸಮಾಜ ಬಂಧುಗಳ ವಾರ್ಷಿಕ ಕ್ರೀಡಾಕೂಟ ಡಿಸೆಂಬರ್ 25ರಂದು ನಗರದ ಕೆಪಿಟಿ ಮೈದಾನದಲ್ಲಿ ಭಂಡಾರಿ ಸ್ವಯಂ ಸೇವಕ ಸಂಘದ ನೇತೃತ್ವದಲ್ಲಿ ನಡೆಯಲಿದೆ.

ರಾಷ್ಟ್ರ ಮಟ್ಟದ ಅಥ್ಲೆಟಿಕ್ ಚಾಂಪಿಯನ್ ಅನಿತಾ ಕೊಡವೂರು ಉಡುಪಿ ಕ್ರೀಡಾಜ್ಯೋತಿ ಪ್ರಜ್ವಲನೆ ಮಾಡಲಿದ್ದಾರೆ. ರಾಜ್ಯಮಟ್ಟದ ಕರಾಟೆ ಪಟು ಅನಘ ಭಂಡಾರಿ ಪ್ರತಿಜ್ಞಾ ಸ್ವೀಕರಿಸಿ , ಸಂಘದ ಅಧ್ಯಕ್ಷೆ ಬಬಿತಾ ಲತೀಶ್ ಅಧ್ಯಕ್ಷತೆ ವಹಿಸಿಲಿದ್ದಾರೆ. ಭಂಡಾರಿ ಯುವ ವೇದಿಕೆಯ ಮಾಜಿ ಅಧ್ಯಕ್ಷ ಕೃಷ್ಣಾನಂದ ಭಂಡಾರಿ ಧ್ವಜಾರೋಹಣ ಮಾಡಿ , ಎ.ಜೆ.ಆಸ್ಪತ್ರೆ ಮಂಗಳೂರು ಐ.ಎಂ.ಎಸ್.ತುರ್ತು ಚಿಕಿತ್ಸಾ ವಿಭಾಗದ ಮೇಲ್ವಿಚಾರಕಿ ಲೀಲಾವತಿ ಭಾಸ್ಕರ್ ಭಂಡಾರಿ ಕೋಡಿಕಲ್ ಮುಖ್ಯ ಅತಿಥಿಯಾಗಿ ಅಗಮಿಸಲಿದ್ದಾರೆ. ಕ್ರಿಕೆಟ್, ತ್ರೋಬಾಲ್, ವಾಲಿಬಾಲ್ ,
ಹಗ್ಗಜಗ್ಗಾಟ,ಆಟೋಟ ಸ್ವರ್ಧೆಗಳು ಮಡಕೆ ಒಡೆಯುವುದು ಇನ್ನಿತರ ಸ್ವರ್ಧೆಗಳು ಹಾಗೂ ಭಂಡಾರಿ ಸಮಾಜದ ವಧು – ವರರ ನೊಂದಾವಣೆ ನಡೆಯಲಿದೆ.

ಅಂದು ಸಾಯಂಕಾಲ ನಡೆಯುವ ಸಮಾರೋಪ ಸಮಾರಂಭ ಬಹುಮಾನ ವಿತರಣೆಯ ಮುಖ್ಯ ಅತಿಥಿಗಳಾಗಿ ಭಂಡಾರಿ ಮಹಾಮಂಡಳದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ , ಬೆಂಗಳೂರು ಡಿಜಿಎಸ್ . ಜಿಐಎಮ್ಎಸ್.ಆಸ್ಪತ್ರೆಯ ಸಹಾಯಕ ಪ್ರೊಫೆಸರ್ ಡಾ.ರೋಹನ್ ಪಿ.ಜೆ.ಭಂಡಾರಿ , ಉಡುಪಿ ಪ್ರೊಬೆಷನರಿ ಸಬ್ ಇನ್ಸ್ ಪೆಕ್ಟರ್ ನಿಧಿ ಬಿ.ಎನ್., ಉಡುಪಿ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಮಂಗಳೂರು ಗುರುಪ್ರಸಾದ್ ಭಂಡಾರಿ ಹಿರೇಬೆಟ್ಟು , ಬೆಳ್ತಂಗಡಿ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಉಮೇಶ್ ಭಂಡಾರಿ ಉಜಿರೆ , ರಾಷ್ಟ್ರ ಮಟ್ಟದ ದೇಹದಾರ್ಡ್ಯ ಪಟು ಯಶಸ್ವಿನಿ ವಿ.ಭಂಡಾರಿ , ಮಂಗಳೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷ ರಮಾನಾಥ ಭಂಡಾರಿ ಮತ್ತು ಮಂಗಳೂರು ಭಂಡಾರಿ ಯುವ ವೇದಿಕೆಯ ಅಧ್ಯಕ್ಷ ನಿತ್ಯಾನಂದ ಭಂಡಾರಿ ಆಗಮಿಸಲಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಇತ್ತೀಚಿನ ಸುದ್ದಿ

ಜಾಹೀರಾತು